ರಾಕಿಂಗ್ ಸ್ಟಾರ್ ಯಶ್ ಗೆ ಸಂತಾನವಾಗಲಿ – ಪ್ರಥಮ್

ಇವತ್ತು ಆಧುನಿಕ ಭಗೀರಥ, ರಾಕಿಂಗ್ ಸ್ಟಾರ್ ಯಶ್ ಹುಟ್ಟಿದ ಹಬ್ಬ. ಅಭಿಮಾನಿಗಳು ಎರಡು ದಿನದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಹಾರೈಸಲು ಶುರು ಮಾಡಿದ್ದರು. ನಾನೇ ಬೇರೆ ನನ್ನ ಸ್ಟೈಲೇ ಬೇರೆ ..ನೋಡಿ ಸ್ವಾಮಿ ನಾವಿರೋದೇ ಹೀಗೆ ಎನ್ನುವ ಪ್ರಥಮ್ ವಿಭಿನ್ನವಾಗಿ ತಮ್ಮದೇ ಸಿಗ್ನೇಚರ್ ಶೈಲಿಯಲ್ಲಿ ಹಾರೈಸಿದ್ದಾರೆ.

ಪ್ರಥಮ್ ಯಾವ ಕ್ಷಣದಲ್ಲಿ ಬೇಕಾದರೂ ನಂಟನ್ನು ಬೆಸೆದುಬಿಡೋದು ಬಹುತೇಕರಿಗೆ ಗೊತ್ತಿದೆ. ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹರಸುವಾಗ ಅವರು ನನ್ನ ಅಕ್ಕ ಅಂದಿದ್ದರು. ರಾಧಿಕಾ ಅಕ್ಕ ಆದ್ಮೇಲೆ ಯಶ್ ಭಾವನವರಲ್ಲವೇ . ಯಶ್ ಭಾವನ ಹುಟ್ಟುಹಬ್ಬಕ್ಕೆ  ಫೇಸ್ಬುಕ್ ನಲ್ಲಿ ವಿಶ್ ಮಾಡಿರುವ ಪ್ರಥಮ್ ಅವರದೇ ಚಿತ್ರದ ಡೈಲಾಗ್ ಹೇಳುವುದರ ಜೊತೆಗೆ ಆದಷ್ಟು ಬೇಗ ಸಂತಾನವಾಗಲಿ ಎಂದಿದ್ದಾರೆ.

ಪ್ರಥಮ್ ಬರೆದಿರುವುದು ಹೀಗೆ 

Happy birthday Yash ಭಾವ. ನೀವ್ ಬರೋ ತನಕ ಮಾತ್ರ ಬೇರೇಯವರ ಹವಾ…
ನೀವ್ ಬಂದಮೇಲೆ ನಿಮ್ಮದೇ ಹವಾ…ನಿಮ್ಮ ಜೊತೆಲಿ ನಾನಿದ್ರೆ ನನ್ನದು ಅಲ್ಪಸ್ವಲ್ಪ ಹವಾ…
ಆದಷ್ಟು ಬೇಗ ಮರಿ ಯಶ್(junior Yashಅಥವಾ ಜೂನಿಯರ್ Radhika Pandit ಬರಲಿ…
ಇಲ್ಲಾಂದ್ರೆ ಅವಳಿ ಜವಳಿ ಬಂದ್ರೂ ನೋ ಪ್ರಾಬ್ಲಮ್…
ಅದ್ಸರಿ ಹೊಸ ಕಾರ್ ತಗೊಂಡ್ರಲ್ಲ ಹಳೇ ಕಾರ್ ನನಗೆ ಕೊಟ್ಬಿಡಿ ಭಾವ…ಎಲ್ಲರೂ ಮದರ್ gift ಅಂತ ಹಾಕಿದ್ರೆ ನಾನು “ಭಾವನ ಗಿಫ಼್ಟ್” ಅಂತ ಹಾಕೊಂಡು ನಿಮ್ಮ ಕಾರ್ ನಾನಿಟ್ಕೋತಿನಿ….ಹೊಸ
ನಿಮ್ಮ ಕಾರ್ ಇಟ್ಕೊಂಡು shaking star ಆಗ್ತೀನಿ ನಾನು…
Happy birthday ಭಾವ….

-Ad-

Leave Your Comments