ಪ್ರಿಯಾಮಣಿ ಮದುವೆಗೆ ಮುಹೂರ್ತ ಫಿಕ್ಸ್‌… ಎಲ್ಲಿ, ಯಾವಾಗ ?

ಬಹುಭಾಷಾ ನಟಿ ಪ್ರಿಯಾಮಣಿ ಹಸೆಮಣೆ ಏರಲು ಡೇಟ್‌ ಫಿಕ್ಸ್‌ ಆಗಿದೆ. ತಮ್ಮ ಬಹುಕಾಲದ ಗೆಳೆಯ ಮುಸ್ತಾಫಾ ರಾಜ್‌ ಜತೆ ಇದೇ 23 ರಂದು ಪ್ರಿಯಾಮಣಿ ಮದುವೆಯಾಗಲಿದ್ದಾರಂತೆ.

ಬಹುದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರಿಯಾ-ಮುಸ್ತಫಾ, ಕಳೆದ ವರ್ಷ ಸಿಂಪಲ್‌ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಪ್ರಿಯಾಮಣಿ ಹಾಗೂ ಮುಸ್ತಫಾ ಅವರ ಕುಟುಂಬದವರ ಸಮ್ಮುಖದಲ್ಲಿ ಪರಸ್ಪರ ರಿಂಗ್‌ ಬದಲಿಸಿಕೊಂಡು ನಿಶ್ಚಿತಾರ್ಥ ಕಾರ್ಯ ಮುಗಿಸಲಾಗಿತ್ತು.

ಸದ್ಯ ಇವರಿಬ್ಬರ ಮದುವೆಗೆ ದಿನಾಂಕ ಫಿಕ್ಸ್‌ ಆಗಿದೆಯಂತೆ. ಇದೇ ತಿಂಗಳ 23 ರಂದು ಪ್ರಿಯಾಮಣಿ- ಮುಸ್ತಫಾ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದಾರಂತೆ. ಅದ್ದೂರಿ ಮದುವೆಗೆ ಇಚ್ಛಿಸದ ಈ ಜೋಡಿ, ರಿಜಿಸ್ಟರ್‌ ಮ್ಯಾರೇಜ್‌ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ . ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರು ಈ ವೇಳೆ ಭಾಗಿಯಾಗುವ ಸಾಧ್ಯತೆಯಿದೆ. ಇನ್ನು ಆಗಸ್ಟ್‌ 24 ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಸಣ್ಣ ಪಾರ್ಟಿ ಆಯೋಜಿಸಲಾಗಿದ್ದು, ಚಿತ್ರರಂಗದ ಹಲವು ಗಣ್ಯರು ಆಗಮಿಸಲಿದ್ದಾರಂತೆ.

-Ad-

Leave Your Comments