ಟ್ರೋಲ್ ಗೆ ಕಾಲುಗಳಿಂದಲೇ ಖಡಕ್ ಉತ್ತರ ಕೊಟ್ಟ ಪ್ರಿಯಾಂಕಾ ಚೋಪ್ರಾ !

ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ನಿನ್ನೆ ಭೇಟಿ ಮಾಡಿದ್ರು. ಬರ್ಲಿನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ತೆಗೆಸಿಕೊಂಡಿದ್ದ ಫೋಟೋಗಳಲ್ಲಿ ಆಕೆಯ ಕಾಲುಗಳು ಪಳಪಳನೆ ಹೊಳೆಯುತ್ತಿದ್ದವು. ಇದೀಷ್ಟೇ ಸಾಕಾಗಿತ್ತು ಟ್ರೋಲ್‌ಗಳಿಗೆ.. ಸಿಕ್ಕಿದ್ದೇ ಚಾನ್ಸ್ ಅನ್ಕೊಂಡು ಪಿಗ್ಗಿ ಕಾಲನ್ನು ಹರಾಜು ಹಾಕಲು ಮುಂದಾಗಿದ್ದಾರೆ. ಕಾಲ್ ಮೇಲೆ ಕಾಲು ಹಾಕಿ ಕುಳಿತು ಪ್ರಧಾನಿ ನರೇಂದ್ರ ಮೋದಿಗೆ ಅಗೌರವ ತೋರಿದ್ದಾರೆ ಅಂತಾ ನಮೋ ಭಕ್ತರೂ ಕೂಡ ಸಿಡಿಮಿಡಿಗೊಂಡಿದ್ದಾರೆ.

ಆದರೆ ಪ್ರಿಯಾಂಕ ಚೋಪ್ರಾ ನಡೆಯನ್ನು ಕೆಲವು ಸಿನಿಮಾ ಮಂದಿ ಮಾತ್ರ ಸಮರ್ಥನೆ  ಮಾಡಿಕೊಂಡಿದ್ದು, ಬಟ್ಟೆ ಧರಿಸುವುದು ಆಕೆಯ ಇಚ್ಛೆ. ಆಕೆಗೆ ಯಾವುದು ಕಂಫರ್ಟ್ ಫೀಲ್ ಕೊಡುತ್ತೋ ಅದನ್ನು ಧರಿಸಿ ಮಾತನಾಡಿರುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ. ಇವತ್ತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವರುಣ್ ಧವನ್, ಟ್ರೋಲ್‌ಗಳ ಮೇಲೆ ಕಿಡಿಕಾರಿದ್ದಾರೆ. ಆಕೆಯನ್ನು ನಾವು ಅಭಿನಂದಿಸಬೇಕು. ಆಕೆ ವಿದೇಶದಲ್ಲೂ ಭಾರತ ಹೆಮ್ಮೆ ಪಡುವ ಹಾಗೆ ಮಾಡಿದ್ದಾಳೆ. ಇದೆಲ್ಲಾ ಸ್ಟುಪಿಡ್ ಟ್ರೋಲ್‌ಗಳ ಕೆಲಸ ಎಂದಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರ ಕಾಲಿನ ಬಗ್ಗೆ ಸಾಕಷ್ಟು ಟ್ರೋಲ್‌ಗಳು ಬರುತ್ತಿದ್ದ ಹಾಗೆ ಕೋಪಗೊಂಡ ಪಿಗ್ಗಿ ಸಕ್ಕತ್ ಆಗಿ ರಿಯಾಕ್ಟ್ ಮಾಡಿದ್ದಾರೆ. ಅಮ್ಮ ಹಾಗೂ ತಾನು ತೆರೆದ ಕಾಲುಗಳನ್ನು ಇಳೆಬಿಟ್ಟು ಕುಳಿತಿರುವ  ಫೋಟೋ ಹಾಕಿ ರಿಯಾಕ್ಟ್ ಮಾಡಿರುವ ಅವರು ‘ಲೆಗ್ಸ್ ಫಾರ್ ದಿ ಡೇ’ ಎಂದಿದ್ದಾರೆ. ಮತ್ತೊಂದು ಕಡೆ ಇನ್ಸ್‌ಸ್ಟ್ರಾಗ್ರಾಮ್‌ನಲ್ಲಿ ಪ್ರಧಾನಿ ಮುಂದೆ ಕಾಲಿನ ಮೇಲೆ ಕಾಲಾಕಿ ಕುಳಿತಿರುವ ಫೋಟೋ ಶೇರ್ ಮಾಡಿದ್ದು, ನಿಮ್ಮ ಒತ್ತಡದ ಕೆಲಸಗಳ ನಡುವೆ ನನ್ನನ್ನು ಭೇಟಿ ಮಾಡಲು ಸಮಯ ತೆಗೆದಿಟ್ಟಿದ್ದಕ್ಕಾಗಿ  ಥ್ಯಾಂಕ್ಯೂ ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ದಿನಗಳಿಂದಲೂ ಸಾಕಷ್ಟು ದೇಶಗಳನ್ನು ಸುತ್ತುತ್ತಿದ್ದಾರೆ. ವಿದೇಶಿ ನಾಯಕರ ಸಂಪರ್ಕ ಸಾಧಿಸುತ್ತಿರುವ ಕಾರ್‍ಯವೈಖರಿ ಜನಮೆಚ್ಚುಗೆಗೂ ಕಾರಣವಾಗಿದೆ. ಆದ್ರೆ ೬ ದಿನಗಳ ಜರ್ಮನಿ, ಸ್ಪೈನ್, ರಷ್ಯಾ, ಫ್ರಾನ್ಸ್ ಹಾಗೂ ಬರ್ಲಿನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸಾಕಷ್ಟು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಹತ್ವದ ಚರ್ಚೆ ನಡೆಸುತ್ತಾರೆ. ಆದರೆ ಬಾಲಿವುಡ್ ಹಾಗೂ ಹಾಲಿವುಡ್‌ನಲ್ಲಿ ಬ್ಯುಸಿ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಭೇಟಿ ಮಾಡಿದ್ದು ಯಾಕೆ ಅನ್ನೋದು ಮಾತ್ರ ಬಹಿರಂಗ ಆಗಿಲ್ಲ. ಇದೀಗ ಟ್ರೋಲ್‌ಗಳ ಕಾಟದಿಂದ ವಿವಾದ ಸ್ವರೂಪವನ್ನೇ ಪಡೆದಿದ್ದು, ಪ್ರಧಾನಿ ಸಚಿವಾಲಯ ಏನು ಉತ್ತರ ಕೊಡುತ್ತೋ ಕಾದು ನೋಡ್ಬೇಕು. ಆದ್ರೆ ಒಂದೇ ಪ್ರದೇಶದಲ್ಲಿ ಸಿಕ್ಕಾಗ ಮಾತನಾಡಿಸುವ ಸಜ್ಜನಿಕೆ ತೋರಿರಬಹುದು  ಅಥವಾ ಪ್ರಧಾನಿ ನರೇಂದ್ರ ಮೋದಿ ಕೂಡ  ಪ್ರಿಯಾಂಕಾ ಚೋಪ್ರಾ ಅವರ ಅಭಿಮಾನಿಯಾಗಿರಬಹುದು.. ನೀವೇನಂತೀರಿ.. ಕಾಮೆಂಟ್ ಮೂಲಕ ಉತ್ತರಿಸಿ..

-Ad-

Leave Your Comments