ಹೊಸ ಸಿನಿಮಾದಲ್ಲಿ ಪ್ರಿಯಾಂಕ ಹ್ಯಾಗ್ ಕಾಣ್ತಿದಾರೆ ಗೊತ್ತಾ?

 ಪ್ರಿಯಾಂಕ ಉಪೇಂದ್ರ ಈಗೀಗ ವಿಭಿನ್ನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೂ ಮಮ್ಮಿ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡ ಮೇಲಂತೂ ವಿಶಿಷ್ಟ  ಕಥಾ ಹಂದರವುಳ್ಳ ಸಿನಿಮಾಗಳನ್ನೇ ಆರಿಸಿಕೊಳ್ಳುತ್ತಿದ್ದಾರೆ ಅನ್ನುವುದಕ್ಕೆ ಸಾಕ್ಷಿ ಅವರ ಹೊಸ ಸಿನಿಮಾ ಸೆಕೆಂಡ್ ಹಾಫ್!
ಸೆಕೆಂಡ್ ಹಾಫ್ ಸಿನಿಮಾದಲ್ಲಿ ಅವರು ಪೊಲೀಸ್ ಕಾನ್‌ಸ್ಟೇಬಲ್ ಪಾತ್ರ ಮಾಡುತ್ತಿದ್ದಾರೆ. ಆ ಸಿನಿಮಾದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ನೀವೊಂದು ಸಲ ಆ ಫೋಟೋವನ್ನು ಗಮನಿಸಿ. ಒಂದು ಟಿವಿಎಸ್ ಮೇಲೆ ಕುಳಿತ ಕಾನ್‌ಸ್ಟೇಬಲ್ ವೇಷಧಾರಿ ಪ್ರಿಯಾಂಕ ಉಪೇಂದ್ರ ರಭಸವಾಗಿ ಚಲಿಸುವ ದೃಶ್ಯದ ಫೋಟೋ ಅದು. ಕಣ್ಣಲ್ಲಿ ಕಪ್ಪು ಕನ್ನಡಕ, ಸೊಂಟದ ಮೇಲೆ ಪೊಲೀಸ್ ಬೆಲ್ಟು, ಟಿವಿಎಸ್‌ನಲ್ಲಿ ಲಾಠಿ- ಒಟ್ಟಾರೆ ಪ್ರಿಯಾಂಕ ಉಪೇಂದ್ರ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ.
ಅವರ ಮುಖದ ಮೇಲೆ ಆಕ್ರೋಶ ಮತ್ತು ಗಾಬರಿ ಎರಡೂ ಇದ್ದಂತೆ ಕಾಣಿಸುತ್ತದಾದರೂ ಪೊಲೀಸ್ ಆದ್ದರಿಂದ ಆಕ್ರೋಶವನ್ನೇ ನೀವು ಹೈಲೈಟ್ ಮಾಡತಕ್ಕದ್ದು.
ಅಂದಹಾಗೆ ಯೋಗಿ ದೇವಗಂಗೆ ನಿರ್ದೇಶನದ ಈ ಸಿನಿಮಾದ ಹೆಸರು ಸೆಕೆಂಡ್ ಹಾಫ್ ಅಂತಿದ್ದರೂ ಟ್ಯಾಗ್‌ಲೈನ್‌ನಲ್ಲಿ ಫಸ್ಟ್ ಹಾಫ್ ಇದೆ. ಹಾಗಾಗಿ ಫಸ್ಟ್ ಹಾಫ್ ಮತ್ತು ಸೆಕೆಂಡ್ ಹಾಫ್ ಸೇರಿ ಒಂದು ವಿಭಿನ್ನ ಸಿನಿಮಾ ಆಗಬಹುದು ಅನ್ನೋ ಭರವಸೆಯನ್ನು ಫಸ್ಟ್ ಲುಕ್ ಮೂಡಿಸಿದೆ.
ಹೊಸ ಹೊಸ ಪ್ರಯತ್ನಗಳಿಗೆ ತೆರೆದುಕೊಳ್ತಿರೋ ಪ್ರಿಯಾಂಕ ಉಪೇಂದ್ರರಿಗೆ ಆಲ್ ದಿ ಬೆಸ್ಟ್.
-Ad-

Leave Your Comments