ಪ್ರಿಯಾಂಕ ಉಪೇಂದ್ರ ಮಗಳೊಂದಿಗೆ ಹೊಸ ಸಾಹಸ!!

ಪ್ರಿಯಾಂಕ ಉಪೇಂದ್ರ ಹೊಸತನಕ್ಕೆ ತುಡಿಯುವ ಕಲಾವಿದೆ. ಮಮ್ಮಿ ಯಶಸ್ಸಿನ ನಂತರ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅದೇ ಔರಾ ಬ್ರಿಡ್ಜ್ ! ಕೋಲ್ಕತ್ತದಲ್ಲಿರುವ ಈ ಬ್ರಿಡ್ಜ್ ನ ಸುತ್ತ-ಮುತ್ತ ಕಥೆ ಬಿಚ್ಚಿಕೊಳ್ಳುತ್ತದೆ.
ಪ್ರಿಯಾಂಕ ಮುಖ್ಯಭೂಮಿಕೆಯಲ್ಲಿರುವ ಚಿತ್ರದಲ್ಲಿ ಪ್ರಿಯಾಂಕ ಮಗಳ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವುದು ಸ್ವತಃ ಉಪೇಂದ್ರ-ಪ್ರಿಯಾಂಕ ಪುತ್ರಿ ಐಶ್ವರ್ಯ. ಐಶ್ವರ್ಯಗೆ ಇದು ಮೊಟ್ಟ ಮೊದಲ ಚಿತ್ರ.

ತಾಯಿ ಮಗಳ ಸುತ್ತ ಸುಳಿದಾಡುವ ಮನಸ್ಸಿಗೆ ಸಂಬಂಧಪಟ್ಟ ”ಸೈಕಾಲಾಜಿಕಲ್ ಥ್ರಿಲ್ಲರ್” ಕಥೆ ಇದು. ಪ್ರಿಯಾಂಕ ಜೊತೆ ಮಗಳೂ ಕೂಡ ತನ್ನ ಆಟ-ಪಾಠ ಎಲ್ಲವನ್ನೂ ಬದಿಗಿರಿಸಿ ಕೋಲ್ಕತ್ತದಲ್ಲ ಕೆಲವು ದಿನಗಳಿಂದ ನಡೆಯುತ್ತಿರುವ ಶೂಟಿಂಗ್ ನಲ್ಲಿ ತಲ್ಲೀನಳಾಗಿದ್ದಾಳೆ. ಪ್ರಿಯಾಂಕಗೂ ಕೂಡ ಇದು ಬಹಳ ಮೆಚ್ಚಿನ ಚಿತ್ರವಂತೆ. ಮಹಿಳೆಯೇ ಪ್ರಧಾನವಾಗಿರುವ ಚಿತ್ರಗಳನ್ನು ಮತ್ತಷ್ಟು ಮಾಡಬೇಕು ಎನ್ನುವುದು ಅವರ ಹೆಬ್ಬಯಕೆ.

ಮುವತ್ತು ದಿನಗಳ ಕಾಲ ನಿರಂತರವಾಗಿ ಕೋಲ್ಕತ್ತದ ಆಸುಪಾಸಿನಲ್ಲೂ ದೃಶೃಗಳನ್ನು ಚಿತ್ರೀಕರಿಸುವ ಯೋಜನೆ ಇದೆ.
ಮಮ್ಮಿ ಯ ಯಶಸ್ಸಿನ ನಂತರ ಔರಾ ಬ್ರಿಡ್ಜ್ ಕೈಗೆತ್ತಿಕೊಂಡಿರುವ ನಿರ್ದೇಶಕ ಲೋಹಿತ್ ತಮ್ಮ ನೆಚ್ಚಿನ ಸಿನಿಮ್ಯಾಟೋಗ್ರಾಫರ್ ವೇಣು ಜೊತೆಗೆ ಹಳೆಯ ತಂಡದ ಪ್ರತಿಭೆಗಳನ್ನೇ ಇಲ್ಲೂ ತಂದಿದ್ದಾರೆ.
ಪ್ರಿಯಾಂಕ ಗೆ ಕೊಟ್ಟ ಮಾಹಿತಿಯ ಪ್ರಕಾರ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮುಂದಿನ ವರುಷ ತೆರೆಗೆ ಬರುವುದಂತು ದಿಟ.

-Ad-

Leave Your Comments