ಕಣ್‌ಸನ್ನೆಗೆ ಕೋಟಿ ಕೋಟಿ ಕಮಾಯಿ..! 

ಅವಳ ಅಂದಕ್ಕೆ ಜಗವೇ ತಿರುಗಿ ನೋಡುತ್ತಿದೆ. ಅವಳು ಒಂದು ಫೋಟೋ ಹಾಕಿದ್ರೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ. ಯಾವ ಹುಡುಗಿ ಅನ್ನೊ ಡೌಟ್ ಬೇಡ. ಅದೇ ಕಣ್ಸನ್ನೆ ಮಾಡಿ ಹುಡುಗರ ಹಾರ್ಟ್ ಬೀಟ್ ಜಾಸ್ತಿ ಮಾಡಿದ್ದ ಮಲಯಾಳಿ ಬೆಡಗಿ ಪ್ರಿಯಾ ವಾರಿಯರ್. ಪ್ರಿಯಾ ವಾರಿಯರ್ ಅದ್ಯಾವ ಗಳಿಗೆಯಲ್ಲಿ ಮಲಯಾಳಂನ ‘ಒರು ಅಡಾರ್ ಲವ್’ ಸಿನಿಮಾದಲ್ಲಿ ಆ್ಯಕ್ಟ್ ಮಾಡಲು ಒಪ್ಪಿಕೊಂಡಳೋ ಏನೋ, ಆಕೆಯ ನಸೀಬು ಅಡ್ಡಡ್ಡ ಉದ್ದುದ್ದ ಹೇಗೆಲ್ಲಾ ಬೇಕು ಹಾಗೆ ಬೆಳೆದುಬಿಟ್ಟಿದೆ. ಆಕೆಯ ಒಂದೇ ಒಂದು ಕಣ್‌ಸನ್ನೆ, ಒಂದು ಕಣ್ಣು ಮಿಸುಕಾಟ, ಹರೆಯದ ಹುಡುಗಾಟ -ತುಂಟಾಟಗಳು ಹಣ ಗಳಿಸುವ ಅಸ್ತ್ರಗಳಾಗಿವೆ..
ಆ ದಿನ ಒರು ಅಡಾರ್ ಲವ್ ಟ್ರೈಲರ್ ಬಿಡುಗಡೆಯಾದ ದಿನ ಒಂದೇ ರಾತ್ರಿಯಲ್ಲಿ ವಿಶ್ವದ ತುಂಬಾ ಆಕೆಯನ್ನು ಪರಿಚಯ ಮಾಡಿಬಿಟ್ಟಿತ್ತು. ಕುಂತಲ್ಲಿ ನಿಂತಲ್ಲಿ ಹುಡುಗರು ಆಕೆಯ ಜಪ ಮಾಡತೊಡಗಿದರು. ಆಕೆಯ ಫೇಸ್‌ಬುಕ್ಕು, ಇನ್‌ಸ್ಟ್ರಾಗಾಮ್, ಟ್ವಿಟರ್‌ಗಳು ಕೋಟಿ ಕೋಟಿ ಅಭಿಮಾನಿಗಳಿಂದ ತುಂಬಿ ಹೋಯಿತು. ನೋಡ ನೋಡುತ್ತಿದ್ದಂತೆಯೇ ಆಕೆ ಇಂಡಿಯಾದ ನಂಬರ್ ವನ್ ಕ್ರಶ್ ಬಿರುದನ್ನು ಪಡೆದು ಬಿಟ್ಟಿದ್ದಳು.  ಪ್ರಿಯಾ ವಾರಿಯರ್ ಕಣ್ಸನ್ನೆ ನೋಡ್ತಿದ್ದ ಹಾಗೆ ಆಕೆ ಹುಟ್ಟಿದ ದಿನದಿಂದ ಹಿಡಿದು ಇಲ್ಲಿವರೆಗೆ ಏನೇನು ಮಾಡಿದ್ದಳೊ ? ಎಲ್ಲೆಲ್ಲಿ ಓದಿದ್ದಾಳೊ ? ಎಲ್ಲಿಂದ ಬಂದಿದ್ದಾಳೊ ? ಯಾಕೆ ಸಿನಿಮಾ ಆರ್ಟಿಸ್ಟ್ ಆದಳೊ ? ಈ ಎಲ್ಲಾ ಪ್ರಶ್ನೆಗಳ ಬಗ್ಗೆ ಉತ್ರ ಹುಡುಕಲು ಅಭಿಮಾನಿಗಳು ಶುರು ಮಾಡಿದರು. ವಿಶ್ವದಾದ್ಯಂತ ಅಲ್ಲೋಲ ಕಲ್ಲೋಲ ಉಂಟು ಮಾಡಿತ್ತು.
ಒರು ಅಡಾರ್ ಲವ್ ಈಕೆಯ ಮೊದಲ ಸಿನಿಮಾ. ಕೇವಲ ಹದಿನೆಂಟರ ಹರೆಯದ ಪ್ರಿಯಾಗೆ ಮೊದಲ ಸಿನಿಮಾ, ಮೊದಲ ಟೀಸರ್ ಇಷ್ಟೊಂದು ಎದ್ವಾತದ್ವಾ ಹೆಸರು ಮಾಡುತ್ತದೆಂದು ಆಕೆಯೂ ಊಹೆ ಮಾಡಿರಲು ಸಾಧ್ಯವಿಲ್ಲ ಈಕೆಯ ಕಣ್‌ಸನ್ನೆಯನ್ನು ಕಣ್ಣು ಮಿಟುಕಿಸದೆ ಅದ್ಯಾಕೆ  ನೋಡಿದರು, ಎರಡು ಬೆರಳನ್ನು ತುಟಿಗೆ ಒತ್ತಿದ್ದನ್ನು ಕಣ್ಣು ಕಣ್ ಬಿಟ್ಟು ಅದ್ಯಾಕೆ ಹಾಗೆ ನೋಡಿದರೋ ಆ ದೇವರೇ ಬಲ್ಲ. ಆದ್ರೆ ಅದೆಲ್ಲರ ಪರಿಣಾಮ ಪ್ರಿಯಾ ಪ್ರಕಾಶ್ ವಾರಿಯರ್ ಕೋಟಿ ಕೋಟಿ ಒಡತಿ ಆಗ್ತಿದ್ದಾಳೆ.
 ಒಂದೇ ಒಂದು ದಿನದಲ್ಲಿ ವಿಶ್ವದ ನಂಬರ್ ವನ್ ಸೆಲೆಬ್ರಿಟಿಯಾಗುವುದು ಅಂದ್ರೆ ಸಣ್ಣ ಮಾತಲ್ಲ. ಎಂಥೆಂಥಾ ಘಟಾನುಘಟಿನಗಳನ್ನು ಹಿಂದಿಕ್ಕಿ, ಮುಂದಕ್ಕೆ ಹೋಗದಂತೆ ಅಡ್ಡಗಾಲು ಹಾಕಿದ ಪ್ರಿಯಾ ವಾರಿಯರ್ ಜಗತ್ತನ್ನೇ ತನ್ನ ಕಡೆ ನೋಡುವಂತೆ ತಿರುಗಿಸಿಕೊಂಡಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಮಲ್ಟಿ ನ್ಯಾಷನಲ್ ಕಂಪನಿಗಳು, ಈಕೆಯ ಇನ್‌ಸ್ಟ್ರಾಗ್ರಾಮ್‌ನಲ್ಲಿ ತಮ್ಮ ಒಂದು ಪ್ರೊಡಕ್ಟ್‌ಗೆ ಮಾಡೆಲ್ ಆದರೆ ಎಂಟು ಲಕ್ಷ ಕೊಡುವುದಾಗಿ ಹೇಳಿದವು. ಕೆಲವೇ ದಿನಗಳಲ್ಲಿ ಈಕೆ ಕೋಟಿ ಕೋಟಿಗಳ ಒಡತಿಯಾಗುತ್ತಿದ್ದಾಳೆ.. ಒಂದಲ್ಲ ಎರಡಲ್ಲ ಹಲವಾರು ಕಂಪನಿಗಳು ಈಕೆಯನ್ನು ಬ್ರಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ಕ್ಯೂ ನಿಂತಿವೆ. ಮನೆಯಲ್ಲಿಯೇ ಕುಳಿತು ಒಂದೊಂದು ಕಂಪನಿಯ ಪ್ರೊಡಕ್ಟ್ ಹಿಡಿದು ಪೋಸ್ ಕೊಟ್ಟರೆ ಸಾಕು ಲಕ್ಷ ಲಕ್ಷಗಳು ಈಕೆಯ ಖಜಾನೆ ಸೇರುತ್ತಿದೆ.
ಯಾರಿಗುಂಟು ಯಾರಿಗಿಲ್ಲ ಈ ಲಕ್ಕು..? ಅಲ್ವಾ..?
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments