ನಟಿ ಸಂಯುಕ್ತಾ ಹೆಗ್ಡೆ ಮೇಲೆ ಗರಂ ಆದ ನಿರ್ಮಾಪಕ

ನನಗಾದ ತೊಂದರೆ ಬೇರೆ ನಿರ್ಮಾಪಕನಿಗೆ ಆಗಬಾರದು . ಅಂತಹ ಹೆಣ್ಣು ಮಕ್ಕಳಿಗೆ ಖಂಡಿತವಾಗ್ಲೂ ಪಬ್ಲಿಸಿಟಿ ಕೊಡ್ಬೇಡಿ. ಹೀಗಂತ ಸಂಯುಕ್ತ ಹೆಗಡೆ ಮೇಲೆ ಗರಂ ಆಗಿದ್ದು ಕಾಲೇಜ್ ಕುಮಾರ ಚಿತ್ರದ ನಿರ್ಮಾಪಕ ಪದ್ಮನಾಭ ಶೆಟ್ಟಿ . ಚಾಲುಕ್ಯ ಹೋಟೆಲ್ ನಲ್ಲಿ ನಡೆದ ಕಾಲೇಜ್ ಕುಮಾರ ಸುದ್ದಿಗೋಷ್ಟಿಯಲ್ಲಿ ನಿರ್ಮಾಪಕರ ಸಿಟ್ಟು ಸಿಡಿದಿತ್ತು .
ಕಾಲೇಜ್ ಕುಮಾರ ಸಿನಿಮಾ ಶುರುವಾಗೋ ಮೊದಲೇ ಸಂಯುಕ್ತ ಕೈ ಕೊಟ್ಟು ಹೋಗ್ತಾರೆ ಅನ್ನೋ ಸುದ್ದಿಯಾಗಿತ್ತು .ಕಾರಣ ಅವರಿಗೆ ಪ್ರಭುದೇವ ಕಡೆಯಿಂದ ಬಂದಿದ್ದ ಆಫರ್ ! ತದನಂತರ ಕಾಲೇಜ್ ಕುಮಾರ ಸಿನಿಮಾದಲ್ಲಿ ನಟಿಸಿದ್ದು ಆಯ್ತು. ಒಳ್ಳೆ ಚಿತ್ರ ಅಂತ ಅನ್ನಿಸಿಕೊಂಡಿದ್ದೂ  ಆಯ್ತು . ಈ ಮಧ್ಯೆ ಸಂಯುಕ್ತ ನಡವಳಿಕೆ ಬಗ್ಗೆ ನಿರ್ಮಾಪಕರ ಸಹನೆ ಒಡೆದ ಹಾಗಿದೆ .
ಸಿನಿಮಾ ಚಿತ್ರೀಕರಣ ಶುರುವಾದಗಿನಿಂದ ನಟಿ ಸಂಯುಕ್ತ ಒಂದಲ್ಲ ಒಂದು ಕಿರಿಕ್ ಮಾಡ್ತಾನೇ ಇದ್ರು. ಸಿನಿಮಾ ರಿಲೀಸಾದ ಮೇಲೆ ಯಾವುದೇ ಪ್ರಚಾರಕ್ಕೂ ಕೈ  ಜೋಡಿಸಿಲ್ಲ. ಕಲಾವಿದರು ಮೊದ್ಲು ನಿರ್ಮಾಪಕರ ಬಗ್ಗೆ ಚಿಂತನೆ ಮಾಡ್ಬೇಕು. ಕಲಾವಿದರಾಗಿ ಸಿನಿಮಾದಲ್ಲಿ ನಟಿಸಿದ ಮಾತ್ರಕ್ಕೆ ಮುಗಿಯೊಲ್ಲ ಸಿನಿಮಾ ಮುಗಿದ ನಂತರ ಪ್ರಚಾರಕ್ಕೂ ಕೈ ಜೋಡಿಸ್ಬೇಕು. ಈ ಜವಾಬ್ದಾರಿಯನ್ನು ಸಂಯುಕ್ತಾ ನಿಭಾಯಿಸಿಲ್ಲ. ವಾಣಿಜ್ಯ ಮಂಡಳಿಗೆ ಸಂಯುಕ್ತ ವಿರುದ್ಧ ದೂರು ಕೊಡ್ತೇವೆ ಅಂತ ನಿರ್ಮಾಪಕ ಪದ್ಮನಾಭಶೆಟ್ಟಿ ಹರಿಹಾಯ್ದಿದ್ದಾರೆ .
-Ad-

Leave Your Comments