ರಾಜ್ಯದಲ್ಲೂ ಪದ್ಮಾವತಿಗೆ ಕಂಟಕ !

ಬಾಲಿವುಡ್ ನ  ಸಂಜಯ್  ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲೂ ಕಂಟಕ ಎದುರಾಗಿದೆ.ರಜಪೂತ್ ವಂಶದ ರಾಣಿ ಪದ್ಮಾವತಿ ಜೀವನಾಧಾರಿತ ಚಿತ್ರದಲ್ಲಿ ಪದ್ಮಾವತಿಯನ್ನು ಅವಹೇಳನ ಮಾಡಲಾಗಿದೆ ಅಂತ ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಸಂಘಟನೆ ಮೆರವಣಿಗೆ ನಡೆಸಿತು.

ನಗರದ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ನಡೆದ ರ್ಯಾಲಿಯಲ್ಲಿ ಸಾವಿರಕ್ಕೂ ಮೀರಿದ ರಜಪೂತರು ಭಾಗವಹಿಸಿದ್ರು.ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ. ಹಾಗೇ ಪದ್ಮಾವತಿಯನ್ನು ಅಶ್ಲೀಲವಾಗಿ ನೃತ್ಯ ಮಾಡಿಸಿದ್ದಾರೆ . ಇದರಿಂದ ಹಿಂದೂ ಸಂಸ್ಕೃತಿಗೆ ಅವಮಾನವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ . ಮೊದಲು ಸಿನಿಮಾವನ್ನು ನಮಗೆ ತೋರಿಸಿ ನಂತರ ಬಿಡುಗಡೆ ಮಾಡಿ ಎಂಬ ಒತ್ತಾಯವೂ ಕೇಳಿ ಬಂದಿದೆ .

ಒಂದು ವೇಳೆ ನಮ್ಮನ್ನು ಮೀರಿ ಚಿತ್ರ ಬಿಡುಗಡೆ ಮಾಡಿದ್ದೇ  ಆದಲ್ಲಿ  ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆ ಎನ್ನುವ ಬೆದರಿಕೆಯನ್ನು ಒಡ್ಡಲಾಗಿದೆ .

ಇನ್ನು ಹಿಂದೂ ಜನಜಾಗೃತಿ ಸಮಿತಿಯಿಂದ ಸೆನ್ಸಾರ್ ಮಂಡಳಿಗೆ ಮನವಿ ಕೂಡ ಸಲ್ಲಿಕೆಯಾಗಿದೆ .

-Ad-

Leave Your Comments