ಅಲ್ಲು ಸಿರೀಶ್ ಸೆಟ್ ನಲ್ಲಿ ಪವರ್ ಸ್ಟಾರ್ !

ತೆಲುಗು ನಟ ಅಲ್ಲು ಅರ್ಜುನ್ ಸಹೋದರ ಅಲ್ಲೂ ಸಿರೀಶ್ ಅಭಿನಯದ “ಒಕ್ಕ ಕ್ಷಣಂ” ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ . ಅದೇ ಜಾಗಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ ನೀಡಿ ಚಿತ್ರತಂಡಕ್ಕೆ ಅಚ್ಚರಿ ಮೂಡಿಸುವುದರ ಜೊತೆಗೆ ಸಂಭ್ರವನ್ನೂ ತುಂಬಿದ್ದಾರೆ.

ಪುನೀತ್ ಸೆಟ್ ನಲ್ಲಿ ಟೀ ಸೇವಿಸಿ ಉಭಯ ಕುಶಲೋಪರಿ ಆದಮೇಲೆ ತಂಡಕ್ಕೆ ಶುಭ ಕೋರಿದ್ದಾರೆ .ಸ್ವತಃ ಅಲ್ಲು ಸಿರಿಶ್ ಕನ್ನಡದ  ಸ್ಟಾರ್ ನಟ ನಮ್ಮ ಸೆಟ್ ಗೆ ಬಂದದ್ದು ಖುಷಿ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ .

ಅಲ್ಲು ಕುಟುಂಬದ ಜೊತೆ ರಾಜ್ಕುಮಾರ್ ಕುಟುಂಬದ ನಂಟು ಬೆಸೆದುಕೊಂಡಿದೆ ಅನ್ನಬಹುದು . ಟಗರು ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಶಿವಣ್ಣ ಬಗ್ಗೆ ತಮಗಿರುವ ಅಭಿಮಾನ, ಗೌರವವನ್ನು ಹಂಚಿಕೊಂಡಿದ್ದರು ಅಲ್ಲು ಸಿರೀಶ್ . ಹುಲಿ ನೃತ್ಯಕ್ಕೆ ಶಿವಣ್ಣ,ರಕ್ಷಿತ್ ಶೆಟ್ಟಿಯ ಜೊತೆ ಹೆಜ್ಜೆ ಕೂಡ ಹಾಕಿದ್ದರು . ಅಷ್ಟೇ ಅಲ್ಲ ಕನ್ನಡದಲ್ಲಿ ಮಾತನಾಡುವ ಪ್ರಯತ್ನ ಕೂಡ ಮಾಡಿದ್ದರು .

-Ad-

Leave Your Comments