ಹೊಸ ಪಯಣದ ಕಡೆಗೆ ಪುನೀತ್ !

ಇತ್ತೀಚೆಗಷ್ಟೇ ತಮ್ಮದೇ ಕನಸಿನ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದರು  ಪುನೀತ್ ರಾಜ್ ಕುಮಾರ್. ಇದೀಗ ಮಗದೊಂದು ಹೊಸ ಹಾದಿಯನ್ನು ತುಳಿಯುತ್ತಿದ್ದಾರೆ. ಅದು ಆಡಿಯೋ ಕಂಪನಿ ಮೂಲಕ . ಈ ಕಂಪನಿಗೆ ತಮ್ಮ ತಂದೆ ಡಾ.ರಾಜ್ ಕುಮಾರ್ ಹೆಸರನ್ನೇ ಇಟ್ಟಿದ್ದಾರೆ . ಅದೇ “ಡಾ.ರಾಜ್ ಕುಮಾರ್ ಮ್ಯೂಸಿಕ್”‘.

ಈ ಹೆಸರು ಬಹಳ ಸೂಕ್ತವೂ ಹೌದು. ರಾಜ್ ಕುಮಾರ್ ಅವರು ಕಡೆಗಾಲದವರೆಗು ಅಭಿನಯದ ಜೊತೆಗೆ ಸಂಗೀತವನ್ನೂ ಉಸಿರಾಗಿಸಿಕೊಂಡಿದ್ದರು. ಮನೆಯಲ್ಲಿಯೂ ಹಾರ್ಮೋನಿಯಂ ನುಡಿಸುತ್ತಾ ಹಾಡುತ್ತಾ ತಲ್ಲೀನರಾಗಿರುತ್ತಿದ್ದರು.

ತಮ್ಮ ಹೊಸ ಆಡಿಯೋ ಸಂಸ್ಥೆಯಿಂದ ಹೊಸ ಸಿನಿಮಾಗಳ ಹಾಡುಗಳನ್ನು ರಸಿಕರಿಗೆ ಕೇಳಿಸುವ ಇರಾದೆ ಪುನೀತ್ ರದ್ದು .

ಎಲ್ಲವೂ ಸಮಯಕ್ಕೆ ಹೊಂದಿಕೊಂಡರೆ ಪುನೀತ್ ನಟಿಸಿರುವ “ಅಂಜನೀಪುತ್ರ”  ಹಾಡುಗಳಿಂದಲೇ ಆಡಿಯೋ ಕಂಪನಿ ಶುರುವಾಗಲಿದೆ. ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಣ ಸಂಸ್ಥೆಯಿಂದ ಸದಭಿರುಚಿಯ ಸಿನಿಮಾಗಳನ್ನು ಹೊರತರುವ ಪ್ರಯತ್ನದಲ್ಲಿರುವ ಪುನೀತ್ , ಆಡಿಯೋ ಕಂಪನಿಯಿಂದಲೂ ಇಂಪಾದ ಮನಸ್ಸಿಗೆ ಹಿತ ಕೊಡುವ ಹಾಡುಗಳನ್ನು ನೀಡುವ ಉತ್ಸಾಹದಲ್ಲಿದ್ದಾರೆ .

-Ad-

Leave Your Comments