ಎನ್ ಟಿ ಆರ್ ಚಿತ್ರದಲ್ಲಿ ಪಾತ್ರವಾಗಿ ಬರಲಿರುವ ಅಣ್ಣಾವ್ರು !

ಕನ್ನಡ ನಾಡನ್ನೇ ತನ್ನ ಕರ್ಮಭೂಮಿಯಾಗಿಸಿಕೊಂಡರು ಡಾ ರಾಜ್ ಕುಮಾರ್ ಅವರಿಗೂ ದೇಶದ ಹಲವು ಮೇರು ನಟರಿಗೂ ನಂಟೆಂಬುದು ಇದ್ದೆ ಇತ್ತು. ಅದರಲ್ಲೂ ಸೋದರ ಭಾಷೆಯಂತೆ ಕೇಳುವ ತೆಲುಗಿನ ಎನ್ ಟಿ ಆರ್ ಹಾಗು ರಾಜಣ್ಣರ ನಡುವೆ ಅವಿನಾಭಾವ ಸಂಬಂಧವಿತ್ತು. ಅದೇ ಕಾರಣವಾಗಿ ಎನ್ ಟಿ ಆರ್ ಜೀವನ ಆಧರಿಸಿದ ಚಿತ್ರದಲ್ಲಿ ಅಣ್ಣಾವ್ರ ಪಾತ್ರವೂ ಬರಲಿದೆ .

ರಾಜಣ್ಣನಿಗೆ ಎನ್ ಟಿ ಆರ್ ಆಪ್ತರಾಗಿದ್ದರು. ಎನ್ ಟಿ ಆರ್ ರಾಜ್ಕುಮಾರ್ ಅವರನ್ನ ಸಹೋದರ ಎಂದೇ ಕರೆಯುತ್ತಿದ್ದರು. ಪೌರಾಣಿಕ ಪಾತ್ರಗಳಲ್ಲಿ ನಟಿಸುವಾಗ ಪರಸ್ಪರ ಭೇಟಿಯಾಗಿದ್ದರು. ಕೆಲವರ ಪ್ರಕಾರ ಪಾತ್ರಗಳ ಬಗ್ಗೆ ಇವರಿಬ್ಬರು ಚರ್ಚೆಕೂಡ ಮಾಡುತ್ತಿದ್ದರಂತೆ. ಅದೇ ಸಂಬಂಧವನ್ನ ಎನ್ ಟಿಆರ್ ಪುತ್ರ ಬಾಲಕೃಷ್ಣ ಕೂಡ ರಾಜ್ ಕುಟುಂಬದೊಂದಿಗೆ ಈಗಲೂ ಹೊಂದಿದ್ದಾರೆ .

ಚಿತ್ರದ ಹೆಸರು “ಎನ್ ಟಿಆರ್”. ಬಹುದೊಡ್ಡ ಬಜೆಟ್ ಇರುವ ಈ ಚಿತ್ರ ಬಾಲಕೃಷ್ಣ ವೃತ್ತಿ ಬದುಕಿನಲ್ಲೂ ದೊಡ್ಡ ಚಿತ್ರವಾಗಲಿದೆಯಂತೆ. ಅದಕ್ಕಾಗಿ ಸಾಕಷ್ಟು ತಯಾರಿ ಕೂಡ ನಡೆದಿದೆ.

ತೆಲುಗು,ತಮಿಳು ,ಹಿಂದಿ,ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಸಿದ್ಧವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

 

-Ad-

Leave Your Comments