ಅರುಂಧತಿ ಪಾತ್ರ ಮಾಡಬೇಕಂತೆ ರಚಿತಾ ರಾಮ್

ನೋಟದಲ್ಲೇ ಗಮನ ಸೆಳೆಯುವ ನಟಿ ರಚಿತಾ ರಾಮ್ ಅವರಿಗೆ ದಿನೇ ದಿನೇ ಜವಬ್ದಾರಿ ಹೆಚ್ಚುತ್ತಿದೆ. ರಚಿತಾ ಇರ್ತಾರೆ ಅಂದ್ರೆ ಆ ಸಿನಿಮಾ ಸಕ್ಸಸ್ ಆಗೇ ಆಗುತ್ತೆ ಎಂಬ ಮಟ್ಟಿಗೆ ಅವರು ತಮ್ಮ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ.

ತಮ್ಮ ಈ ಇಮೇಜ್ ಉಳಿಸಿಕೊಳ್ಳಲು ಎಲ್ಲ ರೀತಿಯಲ್ಲೂ ಗಮನಹರಿಸಿರುವ ರಚಿತಾ ಅರುಂಧತಿಯಂತಹ ಪಾತ್ರ ಮಾಡುವ ಆಸೆ ಹೊಂದಿದ್ದಾರಂತೆ. ಮಾಮೂಲಿಯಾಗಿ ಹೀರೋಗಳ ಪ್ರೇಯಸಿ ಪಾತ್ರವನ್ನು ಮಾಡಿಕೊಂಡು ಬರುತ್ತಿದ್ದ ರಚಿತಾಗೆ ಏನೋ ಮಿಸ್ಸಿಂಗ್ ಅನಿಸುತ್ತಿದೆಯಂತೆ. ಹೀಗಾಗಿ ಅವರು ಟ್ರೆಡಿಷನಲ್ ಸಿನಿಮಾ ಮಾಡಲು ಹೊರಟಿದ್ದಾರೆ. ಡಿಂಪಲ್ ಕ್ವೀನ್ ಈಗ ತಮ್ಮ ಡ್ರೀಮ್ ರೋಲ್ ನ ರಿವೀಲ್ ಮಾಡಿದ್ದು, ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ ಮಾಡಿದ್ದ ಅರುಂಧತಿ ಪಾತ್ರವನ್ನು ತಾನು ಮಾಡಬೇಕೆಂಬ ಆಸೆ ಇದ್ಯಂತೆ.

ಇನ್ನು ರಚಿತಾ ರಾಜಕೀಯಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸ್ತಿದ್ದಾರಂತೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಅಡ್ದೆ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಈಗಾಗಲೇ ನಾನಾ ಭಾಷೆಯಲ್ಲಿ ಆಫರ್ ಬರ್ತಿರೋ ರಚಿತಾ ಸ್ಟೋರಿ ಸೆಲೆಕ್ಷನ್ ನಲ್ಲಿ ಬ್ಯುಸಿ ಆಗಿದ್ದಾರೆ.

-Ad-

Leave Your Comments