ಈ ಹುಡುಗಿ ಭಿಕ್ಷುಕಿ ಅಂದ್ರೆ ನಂಬುತ್ತೀರಾ ??

ಈ ಚೆಲುವೆ ಭಿಕ್ಷುಕಿನಾ ಅಂತ ನೋಡಿದವರಿಗೆ ಖಂಡಿತ ಅನ್ನಿಸೇ ಅನ್ನಿಸುತ್ತೆ. ಮುದ್ದಾದ ಹುಡುಗಿ ಪಾಪ ಯಾರೋ ದೊಡ್ಡವರ ಮನೆಯಿಂದ ಕದ್ದು ತಂದು, ತಲೆಕೆಡಿಸಿ ಭಿಕ್ಷೆಗೆ ಬಿಟ್ಟಿರಬಹುದೇನೋ ಅನ್ನೋ ಹಲವು ಕುತೂಹಲದ ಪ್ರಶ್ನೆಗಳು ಹುಟ್ಟುವುದಂತೂ ನಿಜ. ಆದ್ರೆ ಕಥೆ ಬೇರೇನೇ ಇದೆ. ಅದೇನದು ಅಂತ ಆಕೆಯೇ http://ciniadda.com ಜೊತೆ ಹಂಚಿಕೊಂಡಿದ್ದಾರೆ ನೋಡಿ.

ನನ್ನ ಹೆಸರು ರಾಧಿಕಾ . ನನ್ನನ್ನ ಪ್ಯಾಟೆ ಮಂದಿ ಕಾಡಿಗ್ ಬಂದ್ರು ಸೀಸನ್ -೨ ನಲ್ಲಿ ನೀವು ನೋಡಿರ್ತೀರ. ಸಿನಿಮಾ ಮೇಲಿನ ಆಸೆ, ಹೀರೋಯಿನ್ ಆಗ್ಬೇಕು ಅನ್ನೋ ಹಂಬಲ ನನ್ನನ್ನ ಬೀದಿಗಿಳಿದು ಭಿಕ್ಷುಕಿ ಆಗೋ ಥರ ಮಾಡಿತು. ಭಿಕ್ಷುಕಿ ಆಗೋದು ಸುಮ್ಮನೆ ಮಾತಲ್ಲ. ಎಷ್ಟೆಲ್ಲಾ ಅವಮಾನ ಸಹಿಸಿಕೊಳ್ಳಬೇಕು. ತುತ್ತು ಅನ್ನಕ್ಕಾಗಿ ಬೇಡಬೇಕು ಅನ್ನೋದನ್ನೆಲ್ಲ ಕಲಿಸಿಬಿಡ್ತು. ಕೈ ಒಡ್ಡಿ ಬೇಡುವುದೇ ಗೊತ್ತಿಲ್ಲದ ನನಗೆ ಬೇಡಿ ಬದುಕುವರ ಸ್ಥಿತಿ ಹೇಗಿರತ್ತೆ ಅನ್ನೋದನ್ನ ಗೊತ್ತು ಮಾಡಿಸಿದ್ದು ತಿಕ್ಲ ಸಿನಿಮಾ.

ಹೀರೋಯಿನ್ ಆಗ್ಬೇಕು ಅಂತ ಆಸೆ ಇದ್ದದ್ದು ,ಇರುವುದು ಎಲ್ಲಾ ನಿಜ . ಆದ್ರೆ ಮೊದಲ ಸಿನಿಮಾದಲ್ಲೇ ಮೇಕಪ್ ಇಲ್ಲದೆ , ಗ್ಲಾಮರಸ್ ಆಗಿ ಕಾಣಿಸಿಕೊಳ್ಳದೆ ಈ ರಂಗಕ್ಕೆ ಬರುವ ನಿರ್ಧಾರ ಸ್ವಲ್ಪ ಕಷ್ಟದ್ದೇ. ಆದ್ರೆ ತಿಕ್ಲ ಸಿನಿಮಾದ ನಾಯಕ ವಿಜಯ್ ವೆಂಕಟ್ ,ನಿರ್ದೇಶಕ ಆಂಜನೇಯ ಪ್ರತಿಕ್ಷಣ ಧೈರ್ಯ ತುಂಬುತ್ತಾ ಇದ್ರು. ಬೀದಿ ಬೀದಿಯಲ್ಲಿ ಬಿಸಿಲಲ್ಲಿ ಭಿಕ್ಷೆ ಬೇಡುವುದೆಂದರೆ ಸುಖದ ಕೆಲಸ ಖಂಡಿತ ಅಲ್ಲ. ನೈಜವಾಗಿ ಇರಲಿ ಅಂತ ನಿಜವಾಗಿಯೇ ಜನರ ಬಳಿ ಹೋಗಿ ಭಿಕ್ಷೆ ಬೇಡಿದ್ದೇನೆ. ಅವಮಾನ ಅನುಭವಿಸಿದ್ದೇನೆ. ಆದ್ರೆ ಒಂದು ಒಳ್ಳೆ ಕಥೆ ಇರೋ ತಿಕ್ಲ ಚಿತ್ರಕ್ಕಾಗಿ ಎಂಥಾ ಕಷ್ಟವಾದ್ರೂ ಸರಿ ಸಹಿಸಿಕೊಳ್ಳೋಣ ಅಂತ ತೀರ್ಮಾನ ಮಾಡಿ ಅಭಿನಯಿಸಿದ್ದೇನೆ.

ನಿರ್ದೇಶಕ ಆಂಜನೇಯ ಹೊಸಬರಾದರೂ ಒಳ್ಳೆ ಸಿನಿಮಾ ಮಾಡಿ ಸಿನಿಪ್ರೇಕ್ಷಕರನ್ನ ಗೆಲ್ಲಬೇಕು ಅನ್ನೋ ಹಂಬಲ ಇರೋ ಮನುಷ್ಯ. ಕಿತ್ತುತಿನ್ನೋ ಬಡತನದ ನಡುವೆಯೂ ಅರಳುವ ಪ್ರೀತಿ ಎಂಥೆಂಥ ಪರೀಕ್ಷೆಗಳನ್ನ ಎದುರಿಸಬೇಕಾಗಿ ಬರುತ್ತೆ , ಯಾವೆಲ್ಲ ತಿರುಗಳನ್ನ ಪಡೆದುಕೊಳ್ಳುತ್ತೆ ಅನ್ನೋದನ್ನ ತುಂಬಾ ಚೆನ್ನಾಗಿ ಅಂದ್ರೆ ನೋಡುಗರ ಮನಮುಟ್ಟುವ ಹಾಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ.

ನಿರ್ಮಾಪಕ ಜಕ್ಕನಹಳ್ಳಿ ಶಿವು ಅವರಂತೂ ಹಣ ಹಾಕ್ತಿನಪ್ಪ ಒಳ್ಳೆ ಸಿನಿಮಾ ಮಾಡಿಕೊಡಿ ಸಾಕು. ನೀವು ಹೇಗೆ ಮಾಡ್ತೀರಾ ? ಏನು ಮಾಡ್ತೀರಾ ? ಅಂತೆಲ್ಲ ನಿಮಗೆ ಕಾಟ ಕೊಡೊ ಕೆಲಸ ಮಾಡಲ್ಲ . ನಾನು ಕಷ್ಟಪಟ್ಟು ಸಂಪಾದಿಸಿದ ಹಣ ಕೊಟ್ಟಿದ್ದೇನೆ ಸಿನಿಮಾ ಚೆನ್ನಾಗಿ ಮಾಡಿ ಅಂತಂದವರು ಹಾಗೇ ನಡೆದುಕೊಂಡಿದ್ದಾರೆ. ಎಲ್ಲ ಕಲಾವಿದರನ್ನೂ  ಪ್ರೋತ್ಸಾಹಿಸಿದ್ದಾರೆ.

ಇದಾಗಲೇ ಆಡಿಯೋ ರೀಲೀಸ್ ಆಗಿದೆ. ಟ್ರೈಲರ್ ಬಿಡುಗಡೆ ಆಗಿದೆ. youtube ನಲ್ಲಿ ಲಭ್ಯ ಇದೆ ನೋಡಿ .

ಮುಂದಿನ ತಿಂಗಳು ತೆರೆಗೆ ಬರ್ತಿದೀವಿ . ನೀವು ನನ್ನ ಅಭಿನಯವನ್ನು ಮೆಚ್ಚಿಕೊಳ್ತೀರಾ.. ತಿಕ್ಲ ಸಿನಿಮಾ ಗೆಲ್ಲಿಸಿ ಕೊಡ್ತೀರಾ ಅನ್ನೋ ನಂಬಿಕೆ ನನಗಿದೆ.

 

-Ad-

Leave Your Comments