ಮತ್ತೆ ರಾಧಿಕಾ ಪಂಡಿತ್ ನಂಬರ್ 1 ….?

ಸ್ಯಾಂಡಲ್‍ವುಡ್‍ನ ರಾಣಿ ರಮ್ಯಾ ಮಂಡ್ಯಾಕ್ಕೆ ಬಸ್ಸು ಹತ್ತಿದ ನಂತರ ಇಲ್ಲಿ ನಂವರ್ 1 ನಟಿ ಯಾರು ಅಂದ್ರೆ ಎಲ್ಲರು ನೇರವಾಗಿ ಹೇಳ್ತಿದ್ದು ರಾಧಿಕಾ ಪಂಡಿತ್. ಆದ್ರೆ ಯಾವಾಗ ರಾಧಿಕಾ ಸ್ಕ್ರಿಪ್ಟ್ ಆಯ್ಕೆಯಲ್ಲಿ ಚ್ಯೂಸಿಯಾಗಿ, ವರ್ಷಕ್ಕೆ ಒಂದೇ ಸಿನಿಮಾ ಮಾಡೊದಕ್ಕೆ ಶುರುಮಾಡಿದ್ರೋ, ಆ ಗ್ಯಾಪ್‍ನಲ್ಲಿ ಒಂದಷ್ಟು ನಟಿಯರು ಪೈಪೋಟಿ ಕೊಟ್ಟಿದ್ದಂತು ಸುಳ್ಳಲ್ಲ. ಆದ್ರೀಗ ಮತ್ತೆ ರಾಧಿಕಾ ಕರೀಯರ್ ಜೋರಾಗಿದ್ದು, ಬ್ಯಾಕ್ ಟು ಬ್ಯಾಕ್ ಬಹು ನಿರೀಕ್ಷಿತ ಸಿನಿಮಾಗಳು ರಿಲೀಸ್‍ಗೆ ರೆಡಿಯಾಗಿವೆ..ಹಾಗಾದ್ರೆ ಈ ಚಿತ್ರಗಳು ಆಕೆಯನ್ನ ಮತ್ತೆ ನಂಬರ್ ಒನ್ ಮಾಡುತ್ತಾ..?

ರಾಧಿಕಾ ಪಂಡಿತ್ ಸ್ಯಾಂಡಲ್‍ವುಡ್‍ನ ಪ್ರತಿಭಾನ್ವಿತ ನಟಿ.. ಬೆಳೆಯುವ ಸಿರಿ ಮೊಳಕೆಯಲ್ಲಿ ಅಂತಾರಲ್ಲಾ ಹಾಗೆ ಆಕೆಯ ಮೊದಲ ಸಿನಿಮಾ ಮೊಗ್ಗಿನ ಮನಸ್ಸು, ಆಕೆಯ ಅಭಿನಯ ಚಾತುರ್ಯವನ್ನ ತೆರೆದಿಟ್ಟಿತ್ತು.. ಅಂದೇ ಕನ್ನಡ ಚಿತ್ರರಂಗಕ್ಕೊಬ್ರು ಅದ್ಭುತ ನಟಿ ಸಿಕ್ಕಿದ್ರು ಅಂತಾ ಗಾಂಧಿನಗರ ಮಾತಾಡಿಕೊಂಡಿತ್ತು.. ಆಕೆಯ ಚಲುವೆಗೆ, ಮನೋಜ್ಞ ನಟಿನಗೆ ಮಾರು ಹೋಗಿತ್ತು.

SandalwoodA

ಮೊಗ್ಗಿನ ಮನಸ್ಸಿನ ನಂತರ ಒಂದರ ಹಿಂದೆ ಒಂದರಂತೆ ಬಂದ ಹಿಟ್ ಚಿತ್ರಗಳು ರಾಧಿಕಾ ಕೆರಿಯರ್‍ನ್ನ ಮತ್ತಷ್ಟು ಉತ್ತುಂಗಕ್ಕೇರಿಸಿದ್ವು.. ಹಾಗಂತಾ ಅಂದು ರಾಧಿಕಾಗ್ಯಾರು ಪೈಪೋಟಿ ಕೊಡುವವರ್ಯಾರು ಇರ್ಲಿಲ್ವಾ ಅಂತಾ ಕೇಳ್ಬಹುದು.. ಯಾಕೆಂದ್ರೆ ರಾಧಿಕಾ ಜೊತೆ ಒಂದಷ್ಟು ನಟಿಯರು ಎಂಟ್ರಿಕೊಟ್ರೆ, ಅದಾಗಲೇ ರಮ್ಯಾ ನಂಬರ್ ನಟಿಯಾಗಿ ಮಿಂಚ್ತಿದ್ರು.. ಜೊತೆಗೆ ಪರಭಾಷಾ ನಟಿಯರ ಹಾವಳಿ ಕೂಡ ಜಾಸ್ತಿನೆ ಇತ್ತು..

ಈ ನಡುವೆ ರಮ್ಯಾ ಕನ್ನಡದ ಟಾಪ್ ಒನ್ ನಟಿಯಾಗಿದ್ದಾಗಲೆ ರಾಜಕೀಯಕ್ಕೆ ಥಟ್ಟನೆ ಎಂಟ್ರಿಕೊಟ್ಟಿದ್ದು, ಎಲ್ಲರಲ್ಲೂ ಆಶ್ಚರ್ಯ ತಂದಿದ್ರೆ, ಇತ್ತ ರಮ್ಯಾನ ಸ್ಥಾನವನ್ನ ತುಂಬೋರು ಯಾರು ಅನ್ನೋ ಪ್ರಶ್ನೆ ಹುಟ್ಟಿದ್ದಂತು ಸುಳ್ಳಲ್ಲಾ.. ಹಾಗ ಎಲ್ಲರ ಪ್ರಶ್ನೆಗೆ ಉತ್ತರವಾಗಿ ಸಿಕ್ಕಿದ್ದು ಇದೇ ಮೊಗ್ಗಿನ ಮನಸ್ಸಿನ ಹುಡುಗಿ ರಾಧಿಕಾ ಪಂಡಿತ್..

ರಾಧಿಕಾ ಸ್ಕ್ರಿಪ್ಟ್‍ನಲ್ಲಿ ಅದೆಷ್ಟು ಚ್ಯೂಸಿಯಾಗಿದ್ರು ಅಂದ್ರೆ, ವರ್ಷಕ್ಕೆ ಒಂದೇ ಸಿನಿಮಾ ಅನ್ನುವಂತಾಗಿತ್ತು.. ಅಲ್ಲದೆ ಅವರ ಡೆಡಿಕೇಷನ್ ಹೇಗಿತ್ತು ಅಂದ್ರೆ, ಒಂದು ಸಿನಿಮಾ ಮುಗಿಯುವವರೆಗೂ ಮತ್ತೊಂದು ಸಿನಿಮಾವನ್ನ ಒಪ್ಪಿಕೊಳ್ತಿರ್ಲಿಲ್ಲಾ.. ಆ ಗ್ಯಾಪ್‍ನಲ್ಲಿ ರಾಧಿಕಾ ನಂತ್ರ ಬಣ್ಣದ ಲೋಕಕ್ಕೆ ಬಂದ ನಟಿಯರೆಲ್ಲಾ, ನಂಬರ್ ಒನ್ ಸ್ಟಾನಕ್ಕೆ ಪೈಪೋಟಿ ಕೊಡುವುದಿಕ್ಕೆ ಶುರುಮಾಡಿದ್ರು.. ಆದ್ರೆ ಅದೆಲ್ಲವನ್ನ ಸಮಾಧಾನವಾಗಿ ನೋಡಿಕೊಂಡು ಬಂದ ರಾಧಿಕಾ, ಈಗ ನಿಜವಾದ ಸವಾಲಾಕ್ತಿದ್ದಾರೆ..

ಸದ್ಯ ಜೂಮ್ ಸಕ್ಸಸ್‍ನಲ್ಲಿರೊ ಈ ಚೆಲುವೆ ದೊಡ್ಮನೆ ಹುಡುಗನ ಜೊತೆ ಬೆಳ್ಳಿತೆರೆ ಏರಲು ರೆಡಿಯಾಗಿದ್ದಾರೆ.. ಪವರ್‍ಸ್ಟಾರ್ ಪುನೀತ್- ದುನಿಯಾ ಸೂರಿ ಕಾಂಬಿನೇಷನ್‍ನ ಹ್ಯಾಟ್ರಿಕ್ ಚಿತ್ರ ಇದಾಗಿದ್ದು, ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ..ರೆಬೆಲ್‍ಸ್ಟಾರ್ ಅಂಬರೀಷ್, ಸುಮಲತಾ ಅಂಬರೀಷ್, ಡಾ.ಭಾರತಿ ವಿಷ್ಣುವರ್ಧನ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇಲ್ಲಿದ್ದು ಚಿತ್ರ ಸಖತ್ ನಿರೀಕ್ಷೆ ಹುಟ್ಟುಹಾಕಿದೆ..ಈ ಚಿತ್ರ ರಾಧಿಕಾ ಕರಿಯರ್‍ನಲ್ಲಿ ದೊಡ್ಡ ಹಿಟ್ ಆಗೇ ಆಗುತ್ತೆ ಅನ್ನೋ ಲೆಕ್ಕಾಚಾರ ಗಾಂಧಿನಗ್ರ ಪಂಡಿತರದ್ದು..

ssfr

ದೊಡ್ಮನೆ ಹುಡುಗ ಸಿನಿಮಾ ಹಿಂದಿನೆ ಬರ್ತಿರೊ ಮತ್ತೊಂದು ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರ ಸಂತು ಸ್ಟ್ರೈಟ್ ಫಾವರ್ಡ್..ನಾಲ್ಕನೆ ಬಾರಿ ರಾಕಿಂಗ್ ಜೋಡಿ ಯಶ್ ಅಂಡ್ ರಾದಿಕಾ ಚಿತ್ರದಲ್ಲಿ ಒಂದಾಗಿದ್ದು, ಇಲ್ಲಿಯೂ ಗೆಲುವು ನಿಶ್ಚಿತ ಅಂತಾ ಹೇಳಲಾಗ್ತಿದೆ..ಯಾಕೆಂದ್ರೆ ಈ ಜೋಡಿ ಮಾಡಿರುವ ಯಾವ ಸಿನಿಮಾ ಕೂಡ ಇಲ್ಲಿವರೆಗೂ ಸೋತಿಲ್ಲಾ.. ಹಾಗಾಗಿ ಈ ಬಾರಿ ಖಂಡಿತಾ ರಾಧಿಕಾ ಹ್ಯಾಟ್ರಿಕ್ ಬಾರಿಸ್ತಾರೆ ಜೊತೆಗೆ ನಂಬರ್ ಒನ್ ಸ್ಥಾನದಲ್ಲಿ ನಿಲ್ತಾರೆ ಅನ್ನೋದು ಅವ್ರ ಅಭಿಮಾನಿಗಳ ನಂಬಿಕೆ..

Team Ciniadda.com

-Ad-

Leave Your Comments