ರಾಧಿಕಾ ಪಂಡಿತ್ ಎಂಬ ಪ್ರತಿಭಾ ಸಂಪನ್ನೆಗೆ ಸಿಗಬೇಕಾದ ಮನ್ನಣೆ ಸಿಕ್ಕೀತೆ ?

ರಾಧಿಕಾ ಪಂಡಿತ್ ಪ್ರತಿಭೆಯಿಂದಲೇ ಪ್ರಶಸ್ತಿಗಳನ್ನು ಬಾಚಿಕೊಂಡ ಅದ್ಬುತ ಕಲಾವಿದೆ. ಈಕೆಗೆ ಈದಿನ ಹುಟ್ಟುಹಬ್ಬದ ಸಂತಸದ ದಿನ. ciniadda.com ಬಳಗದ ಪರವಾಗಿ ಎಲ್ಲ ಅಭಿಮಾನಿಗಳ ಪರವಾಗಿ ಪ್ರೀತಿಯ ಶುಭಾಶಯ.

yash radhika birthday photo

ಮೊಗ್ಗಿನ ಮನಸ್ಸು ಮೊದಲ ಸಿನಿಮಾ ನಿಜ . ಆದರೆ ಈಕೆ ನುರಿತ ಕಲಾವಿದೆಯಂತೆ ನಟಿಸಿ ಸಿನಿ ಪ್ರಿಯರ ಮನಸ್ಸಲ್ಲಿ ಸ್ಥಾನ ಗಿಟ್ಟಿಸಿಕೊಂಡುಬಿಟ್ಟರು .ಅಭಿನಯ  ರಾಜ್ಯ ಪ್ರಶಸ್ತಿಯನ್ನೂ ಗಳಿಸಿಕೊಟ್ಟಿತ್ತು. ಅಷ್ಟೇ ಅಲ್ಲದೆ ಮೂರು ಬಾರಿ ಅನಾಮತ್ತಾಗಿ  ಫಿಲಂ ಫೇರ್  ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡ ಅಪರೂಪ ,ಅನುರೂಪದ  ಕಲಾವಿದೆ ರಾಧಿಕಾ ಪಂಡಿತ್ .

radhika puneeth ಎದುರಿಗೆ ಎಂಥಾ ಹೀರೋನೆ ಇರಲಿ ತೆರೆಯ ಮೇಲೆ ತನ್ನ ಪ್ರತಿಭೆ ಮೆರೆಯುವಂತೆ ಮಾಡಬಲ್ಲ ಚತುರೆ ರಾಧಿಕಾ ಪಂಡಿತ್ !! ಯಾವ ಪಾತ್ರ ಸಿಕ್ಕರೂ ಪುಳಕ್ಕನೆ ಪರಕಾಯ ಪ್ರವೇಶ ಸಿದ್ಧಿಸಿಕೊಳ್ಳುವ ಕಲಾವಿದೆ ಈಕೆ. ವಿಪರ್ಯಾಸವೆಂದರೆ ಈಕೆಯ ಪ್ರತಿಭೆಯ ವಿಸ್ತಾರವನ್ನ ಬಳಸಿಕೊಳ್ಳುವ ನಿರ್ದೇಶಕರಿನ್ನೂ ಕನ್ನಡದಲ್ಲಿ ಬಂದಿಲ್ಲ. ಯಾವ ನಾಯಕನಟನಿಗೆ ಕಮ್ಮಿ ಇಲ್ಲದಂತೆ ನಟಿಸುವ ರಾಧಿಕಾಗೆ ಎಂದೂ ಹೀರೋಗೆ ಸಿಗುವ ಸಂಭಾವನೆಯಾಗಲಿ, ಮನ್ನಣೆಯಾಗಲಿ ಸಿಕ್ಕಿಲ್ಲ. ಆಕೆಯೇ ಪ್ರಧಾನ ಎನ್ನುವಂಥಾ ಪಾತ್ರಗಳೂ ಸಿಕ್ಕಿಲ್ಲ.

ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ.ಆಧುನಿಕ ಜಗತ್ತಿಗೆ ಮಹಿಳೆ ಸಾಕಷ್ಟು ತೆರೆದುಕೊಳ್ಳುತ್ತಿದ್ದಾಳೆ. ಆದರೆ ಚಿತ್ರರಂಗವಿನ್ನೂ ಪುರುಷರ ಅಧೀನದಲ್ಲೇ ಇದೆ. ಕನ್ನಡ ಚಿತ್ರರಂಗ ತಾಂತ್ರಿಕವಾಗಿ ಬಹಳಷ್ಟು ಮುಂದುವರೆದಿದೆ. ಹೊಸ ರೀತಿಯ ಚಿತ್ರಗಳು ಬರುತ್ತಿವೆ. ಆದ್ರೆ ನಾಯಕಿಯರ ಪ್ರತಿಭೆಯನ್ನು ಬಳಸಿಕೊಳ್ಳುವ ,ಅವರಿಂದಲೇ ಚಿತ್ರಗಳನ್ನು ಗೆಲ್ಲಿಸುವ ಸಂಪ್ರದಾಯದ ಬರ ಮಾತ್ರ ನೀಗಿಲ್ಲ.

ಮಂಜುಳಾ, ಮಾಲಾಶ್ರೀಯ ನಂತರ ನಾಯಕಿ ಇದ್ದರೆ ಸಾಕು ನಾಯಕ ಸುಮಾರಾಗಿದ್ದರು ನಡೆಯುತ್ತೆ ಅನ್ನುವಂತಹ ಮಾತುಗಳು ಮತ್ತೆ ಕೇಳಿಬಂದಿಲ್ಲ. ಇದು ಮನಃಸ್ಥಿತಿಯ ಕೊರತೆ ಅಲ್ಲದೆ ಮತ್ತೇನಲ್ಲ . ರಾಧಿಕಾ ಪಂಡಿತ್ ಕನ್ನಡ ಆಸ್ತಿ, ಹೆಮ್ಮೆ  ಎನ್ನುವುದರಲ್ಲಿ ಸಂಶಯವಿಲ್ಲ. ಆದರೂ ಆಕೆಗೆ ಹೀರೋಗಳಿಗೆ ಇರುವಷ್ಟು ಅಭಿಮಾನಿಗಳ ದಂಡು ಏಕಿಲ್ಲವೋ ? ಒಬ್ಬ ಹೀರೋನ ಹುಟ್ಟಿದ ಹಬ್ಬವೆಂದರೆ ರಾತ್ರಿ ಹಗಲು ಕಾದು ಕೇಕ್  ಕತ್ತರಿಸಿ ,ಕೊರಳೇ ಬಿಗಿಯುವಂಥ ಹಾರ -ತುರಾಯಿ ತೊಡಿಸುವ ಅಭಿಮಾನಿಗಳು ರಾಧಿಕಾರಂಥ ಸುಸಂಸ್ಕೃತ, ಅಪ್ಪಟ ಪ್ರತಿಭಾವಂತ ಹೆಣ್ಣುಮಗಳ ಪಾಲಿಗೆ ದೇವರುಗಳು ಯಾಕಾಗಲಿಲ್ಲವೋ ಕಾಣೆ. ದೇವರುಗಳಿಗೆ  ಮಹಿಳಾ ಕಲಾವಿದೆಯರ ಮೈ ಕಾಣುವಷ್ಟು ಅವರ ಪ್ರತಿಭೆ-ಸಾಮರ್ಥ್ಯ ಕಾಣಲಾರದೇನೋ.

radhika yash 1

ರಾಧಿಕಾಗೆ ಮದುವೆ ಆಗಿದೆ ನಿಜ. ಹಾಗಂತ ಪ್ರತಿಭೆ ಮಾಸುವುದಿಲ್ಲವಲ್ಲ. ಮದುವೆ  ಆದ ಕಲಾವಿದೆಯರನ್ನ ನಾಯಕಿಯಾಗಿ ಜನ ಮೆಚ್ಚಿಕೊಳ್ಳುವುದಿಲ್ಲ ಎನ್ನುವ ಗಾಂಧಿನಗರದ ಮಂದಿಯ ಬುರುಡೆ ಪುರಾಣವನ್ನ ಬದಿಗಿಟ್ಟು ರಾಧಿಕಾ ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಾಯಕಿಯಾಗಿ ಮೆರೆಯಬೇಕು. ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಬೇಕು. ಯತ್ರ ನಾರ್ಯಸ್ತು poojyante ರಮಂತೇ ತತ್ರದೇವತಾಃ (ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸವಾಗಿರ್ತಾರಂತೆ ) ಎಂದು ಪದೇ ಪದೇ ದೇಶದ ಸಂಸ್ಕೃತಿಯ ಬಗ್ಗೆ ಮಾತನಾಡುವ ಪುರುಷಪುಂಗವರು ಪಕ್ಕಕ್ಕೆ ಸರಿದು , ಅಥವಾ ಜೊತೆಗೇ ನಿಂತು ರಾಧಿಕಾ ಪಂಡಿತ್ ರಂಥ ಪ್ರತಿಭಾವಂತ ಕಲಾವಿದೆಯರಿಗೆ ದಾರಿ ಬಿಡಲಿ. ಚಿತ್ರರಂಗವನ್ನು ಆಳುವ ನಾಯಕಿಯರ ಸಂತತಿ ಬೆಳೆಯಲಿ.

ರಾಧಿಕಾ, ರಂಗುರಂಗಿನ ಈ ಪ್ರಪಂಚದಲ್ಲಿ ಎಲ್ಲ ಮಿತಿಗಳನ್ನು ಮೀರಿ ನಿಮ್ಮ ಪ್ರತಿಭೆಗೆ ಮನ್ನಣೆ ಕನ್ನಡ ಸಿನಿಪ್ರೇಮಿಗಳಿಂದ ಸಾಗರೋಪಾದಿಯಲ್ಲಿ ಹರಿದು ಬರಬೇಕು. ನೀವು ಬೆಳಗಬೇಕು .ಇದೇ ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮ ಪ್ರೀತಿಯ ಹಾರೈಕೆ .

 

-Ad-

Leave Your Comments