ರಘು ದೀಕ್ಷಿತ್ ಮಗಳ ಕಥೆ ಬಲ್ಲಿರಾ ?

ಸಂಗೀತಗಾರ, ಕಲಾವಿದ, ನಟ, ಇಂಜಿನಿಯರ್, ಡಾಕ್ಟರ್, ರೈಟರ್, ನಿರ್ದೇಶಕ ಇವೆಲ್ಲಕ್ಕಿಂತ ಮೊದಲು ಮನುಷ್ಯ. ಅವರವರ ಕ್ಷೇತ್ರದಲ್ಲಿ ಎಷ್ಟೇ ಸಾಧನೆ ಮಾಡಿದರೂ ಅವರು ಮೊದಲು ಮನುಷ್ಯರಾಗಿರಬೇಕು. ಮಾನವೀಯತೆ ಇರಬೇಕು. ಆದರೆ ಖ್ಯಾತಿ ಜಾಸ್ತಿಯಾದಂತೆ ತುಂಬಾ ಜನರಿಗೆ ನಾನು ಅನ್ನುವುದೇ ಜಾಸ್ತಿಯಾಗುತ್ತದೆ. ಮೊದಲು ನಾವು ಮನುಷ್ಯರು ಅನ್ನುವುದು ಮರೆತುಹೋಗುತ್ತದೆ. ಆದರೆ ಇಲ್ಲೊಬ್ಬ ಅಪರೂಪದ ವ್ಯಕ್ತಿ ಇದ್ದಾರೆ. ಎಲ್ಲಕ್ಕಿಂತ ಡಿಫರೆಂಟು. ನಿಮಗೆಲ್ಲರಿಗೂ ಗೊತ್ತಿರುವ ಹೃದಯವಂತ. ಅವರ ಹೆಸರೇ ರಘು ದೀಕ್ಷಿತ್.
ರಘು ದೀಕ್ಷಿತ್‌ರ ವಾಯ್ಸು ಇಡೀ ಕರ್ನಾಟಕವನ್ನೇ ಮಂತ್ರಮುಗ್ಧಗೊಳಿಸಿತ್ತು. ಆಮೇಲೆ ಅವರು ಕಂಪೋಸ್ ಮಾಡಿದ ಸಂಗೀತಕ್ಕೂ ಲಕ್ಷಾಂತರ ಅಭಿಮಾನಿಗಳು ಹುಟ್ಟಿಕೊಂಡರು. ಈಗ ಅವರು ಮಾಡಿರುವ ಒಳ್ಳೆಯ ಕೆಲಸಕ್ಕೂ ಜನ ಮೆಚ್ಚಿ ತಲೆತೂಗುವುದರಲ್ಲಿ ಅಚ್ಚರಿಯಿಲ್ಲ.
ಯಾರು ಈ ತುಂಟಿ ಮರಿ ?
ಇತ್ತೀಚೆಗೆ ರಘು ದೀಕ್ಷಿತ್ ತಮ್ಮ ಇನ್‌ಸ್ಟಗ್ರಾಮ್‌ನಲ್ಲಿ ಒಂದು ಪುಟ್ಟ ನಾಯಿ ಮರಿಗೆ ಜೊತೆ ಇರುವ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಆ ನಾಯಿಮರಿ ಖುಷಿಯಾಗಿ ಬದುಕಲು ಬೇಕು ಬೇಕಾದ ವ್ಯವಸ್ಥೆಗಳನ್ನೆಲ್ಲಾ ಮಾಡಿಕೊಟ್ಟಿದ್ದರು. ಅದರ ಫೋಟೋಗಳನ್ನೆಲ್ಲಾ ಹಾಕುತ್ತಿದ್ದರು. ಇಂಟರೆಸ್ಟಿಂಗ್ ವಿಷಯ ಏನ್ ಗೊತ್ತಾ? ಆ ನಾಯಿಮರಿಯೇ ರಘು ದೀಕ್ಷಿತ್ ಅವರ ಮಗಳು.
ಆ ನಾಯಿಮರಿಯನ್ನು ತನ್ನ ಮಗಳು ಅಂತಲೇ ಮುದ್ದು ಮಾಡುವ ರಘು ಅದಕ್ಕೆ ತುಂಟಿ ಅಂತ ಹೆಸರಿಟ್ಟಿದ್ದಾರೆ. ಅವರ ಇನ್‌ಸ್ಟಗ್ರಾಮ್ ಅಕೌಂಟ್ ನೋಡಿದರೆ ಅದರಲ್ಲಿ ಅವರ ಬೇರೆ ಫೋಟೋಗಳಿಗಿಂತ ಜಾಸ್ತಿ ನಾಯಿಮರಿಗೆ ಜೊತೆಗಿರುವ ಫೋಟೋನೇ ಇದೆ. ಅವರು ತುಂಟಿಯನ್ನು ಎಷ್ಟು ಪ್ರೀತಿಸುತ್ತಾರೆ ಅನ್ನುವುದಕ್ಕೆ ಅದೇ ಸಾಕ್ಷಿ.
ಇಷ್ಟೇ ಆಗಿದ್ದರೆ  ರಘು ಗ್ರೇಟ್ ಅನಿಸುತ್ತಿರಲಿಲ್ಲ. ಅವರು ಯಾಕೆ ಗ್ರೇಟ್ ಅನ್ನುವುದರ ಹಿಂದೆ ಒಂದು ಕತೆ ಇದೆ.
ಕೆಲವು ದಿನಗಳ ಹಿಂದೆ ಲೆಟ್ಸ್ ಲಿವ್ ಟುಗೆದರ್ ಎಂಬ ಸಂಸ್ಥೆ ಅನಾಥ ನಾಯಿಗಳ ಬಗ್ಗೆ ರಘು ಅವರ ಗಮನ ಸೆಳೆದಿತ್ತು.ದಿಕ್ಕುದೆಸೆ ಇಲ್ಲದ ನಾಯಿಗಳನ್ನು ನೋಡಿದ ರಘು ದೀಕ್ಷಿತ್ ಮರುಗಿ ಒಂದು ನಾಯಿ ಮರಿಯನ್ನು ದತ್ತು ಪಡೆದುಕೊಂಡಿದ್ದಾರೆ. ಆ ನಾಯಿಮರಿಯನ್ನು ಮನೆಗೆ ತಂದು ಚೆಂದಾಗಿ  ಸಾಕುತ್ತಿದ್ದಾರೆ. ಆ ನಾಯಿಮರಿಯೇ ತುಂಟಿ.
ಆ ನಾಯಿಮರಿ ಮೇಲೆ ಎಷ್ಟೊಂದು ಪ್ರೀತಿಯೆಂದರೆ ಆ ನಾಯಿಮರಿಗೆಂದೇ ಇನ್ಸ್ಟಾಗ್ರಾಮ್‌ನಲ್ಲಿ ಒಂದು ಅಕೌಂಟ್ ತೆರೆದಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಅದರಲ್ಲಿ ತುಂಟಿಯ ಕತೆಗಳನ್ನು ಬರೆದು ಹಾಕುತ್ತಾರೆ. ನೀವೂ ತುಂಟಿ ಕತೆಗಳನ್ನು ಓದಬಹುದು.
ಪುಟ್ಟ ನಾಯಿಯ ನೋವಿಗೆ ಮರುಗಿ ಹೃದಯವಂತಿಕೆ ಮರೆದ ರಘು ದೀಕ್ಷಿತ್ ವ್ಯಕ್ತಿತ್ವ ನಾಲ್ಕು ಜನಕ್ಕೆ ಗೊತ್ತಾಗಲಿ. ಶೇರ್ ಮಾಡಿ.
-Ad-

Leave Your Comments