ರಾಜ್ ಕುಟುಂಬಕ್ಕೆ ‘ರಾಹು’ಲ್ ಕಾಲ..!

 

ಕರ್ನಾಟಕದ ಕಣ್ಮಿಣಿ ಡಾ ರಾಜ್ ಕುಟುಂಬಕ್ಕೆ ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಇತ್ತೀಚಿಗಷ್ಟೆ ರಾಜ್ ಬೆನ್ನೆಲುಬಾಗಿದ್ದ ಡಾ ಪಾರ್ವತಮ್ಮ ರಾಜ್‍ಕುಮಾರ್ ನಿಧನರಾದ ಹಿನ್ನೆಲೆಯಲ್ಲಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಸಂಜೆ 4.30ಕ್ಕೆ ಭೇಟಿ ಸಮಯ ನಿಗದಿಯಾಗಿದ್ದು, ಭದ್ರತಾ ಪಡೆಗಳು ಮನೆ ಬಳಿ ಜಮಾಯಿಸಿದ್ದಾರೆ. ಟ್ರಾಫಿಕ್ ಪೊಲೀಸರು ವಾಹನಗಳನ್ನು ತೆರವುಗೊಳಿಸಿದ್ದು, ಪೂರ್ಣಪ್ರಜ್ಞಾ ಶಾಲಾ ಆವರಣಕ್ಕೆ ರವಾನಿಸಿದ್ದಾರೆ.

ರಾಜ್ ಕುಟುಂಬಕ್ಕ ಸುತ್ತಿಕೊಳ್ಳಲಿದೆಯಾ ವಿವಾದ?

ಡಾ ರಾಜ್ ಕುಮಾರ್ ವಿವಾದಗಳಿಂದ ಸಂಪೂರ್ಣ ದೂರ ಉಳಿದಿದ್ರು. ಆದರೆ ರಾಜ್ ಬಳಿಕ ವಿವಾದ ಮನೆ ಮಾಡುವ ಲಕ್ಷಣಗಳು ಕಂಡು ಬಂದಿವೆ. ರಾಹುಲ್ ಗಾಂಧಿ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲ ರೈತರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಅಲ್ಲಿನ ರೈತರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಅಲ್ಲಿನ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಭೇಟಿಯನ್ನು ರಾಜ್ಯ ಸರ್ಕಾರಗಳು ನಿಷೇಧ ಮಾಡಿದರೂ ಬಗ್ಗದ ರಾಹುಲ್ ಪರಾಕ್ರಮಿಯಂತೆ ಭೇಟಿ ನೀಡಿದ್ದಾರೆ. ಆದರೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ರೀ ಲಾಂಚ್ ಗಾಗಿ ಬೆಂಗಳೂರಿಗೆ ಬಂದಿರುವ ರಾಹುಲ್ ಗಾಂಧಿ ರಾಜ್ ಕುಟುಂಬಕ್ಕೆ ಭೇಡಿ ನೀಡ್ತಿದ್ದಾರೆ. ರೈತರ ಕಷ್ಟ ಕಾಣ್ತಿಲ್ವಾ ಅನ್ನೋ ಕೂಗು ಎದ್ದಿದೆ.

ಈಗಾಗಲೇ ವಿವಾದ ಹುಟ್ಟಿಸಿರುವ ಅಂತ್ಯ ಕ್ರಿಯೆ

ಈಗಾಗಲೇ ಪಾರ್ವತಮ್ಮ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆ ವೇಳೆ ಕುಶಾಲತೋಪು ಸಿಡಿಸಿದ್ದು, ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಹೊದಿಸಿದ್ದು, ಕಂಠೀರವ ಸ್ಟೂಡಿಯೋ ದಲ್ಲಿ ಅಂತ್ಯಕ್ರಿಯೆಗೆ ಅವಕಾಶ ಕೊಟ್ಟಿರುವುದನ್ನ ಪ್ರಶ್ನಿಸಿ ದೂರು ದಾಖಲಾಗಿದೆ. ಸಾಮಾಜಿಕ ಜಾಲ ತಾಣದಲ್ಲೂ ವಿವಾದ ಭಾರೀ ಚರ್ಚೆಗೆ ಒಳಗಾಗಿದೆ. ಈಗ ಮತ್ತೊಮ್ಮೆ ರಾಹುಲ್ ಗಾಂಧಿ ಭೇಟಿ ಮಾಡುವ ವಿಚಾರ ವಿವಾದ ರೂಪ ತಾಳದೆ ಇರುವುದಿಲ್ಲ ಎನಿಸುತ್ತದೆ.

ಜ್ಯೋತಿ ಎಂ ಗೌಡ

-Ad-

Leave Your Comments