ರಾಜಕುಮಾರನಿಗೆ ಕಂಕಣಭಾಗ್ಯ..! ರಾಜಕುಮಾರಿ ಯಾರು..?

ಸ್ಯಾಂಡಲ್ ವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಮದುವೆ ಸಂಭ್ರಮ ಮನೆ ಮಾಡಿದೆ.. ನಟ ಅನೂಪ್ ಸಾ ರಾ ಗೋವಿಂದ್ ಸಪ್ತಪದಿ ತುಳಿದ ಬೆನ್ನಲ್ಲೆ ಕನ್ನಡದ ಖ್ಯಾತ  ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಬೆಂಗಳೂರಿನ ಜೆ  ಪಿ ನಗರ 6ನೇ ಹಂತದಲ್ಲಿರುವ ಸಿಂಧೂರ್ ಚೌಲ್ಟ್ರಿಯಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಸುರಭಿ ಯನ್ನ ವರಿಸಲಿದ್ದು, ಬೆಳಗ್ಗೆ 11.30ಕ್ಕೆ ಮೂಹೂರ್ತ ನೆರವೇರಲಿದೆ. ಬ್ಲಾಕ್ ಬಾಸ್ಟರ್ ಸಿನಿಮಾಗಳಾದ ಮಿಸ್ಟರ್ ಆಂಡ್ ಮಿಸ್ಸೆಸ್ ರಾಮಚಾರಿ ಮತ್ತು ರಾಜಕುಮಾರ ಚಿತ್ರಗಳ ನಿರ್ದೇಶಕ ಆಗಿರುವ ಸಂತೋಷ್ ಆನಂದ್ ರಾಮ್ ಕಳೆದ ವರ್ಷ ನವೆಂಬರ್ 26 ರಂದು ಬಳ್ಳಾರಿಯಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ರು.
ಗ್ರೇ ಕಲರ್ ಸೂಟ್ ನಲ್ಲಿ ಸಂತೋಷ್ ಮಿಂಚಿದ್ರೆ ಪಿಂಕ್ ಕಲರ್ ಗೌನ್ ತೊಟ್ಟು ಸುರಭಿ ಗಮನ ಸೆಳೆದ್ರು. ಸ್ಯಾಂಡಲ್ ವುಡ್ ನ ಹಿರಿಯಣ್ಣ ಅಂಬರೀಶ್, ರಾಜಕುಮಾರ ಪುನೀತ್ ರಾಜಕುಮಾರ್, ಸಾ.ರಾ. ಗೋವಿಂದು, ರಂಗಾಯಣ ರಘು, ಬಾಲಾಜಿ, ನಿರ್ದೇಶಕ ರಘು, ನಟವಅಜಯ್ ರಾವ್, ರಾಮ್ ರಾವ್ , ನಟ ರಮೇಶ್ ಅರವಿಂದ್, ಪ್ರಣಯ ರಾಜ ಶ್ರೀನಾಥ್, ನಿರ್ದೇಶಕ ಟಿ.ಎನ್. ಸೀತಾರಾಂ, ವಿಜಯ್ ಸೂರ್ಯ, ಚಿಕ್ಕಣ್ಣ, ಮಿತ್ರ, ಕಾಮಿಡಿ ರವಿಶಂಕರ್, ತಬಲ ನಾಣಿ ಸೇರಿದಂತೆ ಸಾಕಷ್ಟು ಕಲಾವಿದರ ದಂಡೇ ನೆರೆದಿದ್ದು, ಈ ಅದ್ದೂರಿ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾದ್ರು..
ಈ ವೇಳೆ ಮಾತನಾಡಿದ ನಟ ಪುನೀತ್ ರಾಜ್ ಕುಮಾರ್, ಸಂತೋಷ್ ಆನಂದ್ ರಾಮ್  ಉತ್ತಮ ಸದಭಿರುಚಿಯ ನಿರ್ದೇಶಕನಾಗಿದ್ದು  ರಾಜಕುಮಾರ ಅಂತಹ ಒಳ್ಳೆ ಸಿನಿಮಾ ಮಾಡಿ ಕೊಟ್ಟಿದ್ದಾರೆ ಅಂತ ಖುಷಿ ವ್ಯಕ್ತಪಡಿಸಿದ್ರು. ಇದೇ ವೇಳೆ ಚಿನ್ನದ ಸರವನ್ನು ಹಾಕಿ ನವ ವಧುವಗಳಿಗೆ ಶುಭ ಹಾರೈಸಿದ್ರು..
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments