ಹುಟ್ಟಿದ ಊರಿನಿಂದ ಹೊಟ್ಟೆಪಾಡಿಗಾಗಿ ಎಷ್ಟೇ ದೂರ ಸರಿದರೂ ನೆಲದ ನಂಟು ಬಿಡಲಾರದು. ಅದಕ್ಕೆ ಸಾಕ್ಷಿ ಎಂಬಂತೆ ಭಾರತೀಯ ಚಿತ್ರರಂಗ ನಿಬ್ಬೆರಗಾಗುವಂಥಾ ಚಿತ್ರಗಳನ್ನು ನಿರ್ದೇಶಿಸಿದರೂ ರಾಜಮೌಳಿಗೆ ಕನ್ನಡದ ಮೇಲೆ ಪ್ರೀತಿ ಮಾಯವಾಗಿಲ್ಲ ಎನ್ನುವಂತಿದೆ ಅವರ ಇತ್ತೀಚಿನ ಕೆಲಸ.
ನನಗೆ ತುಂಬಾ ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರುವುದಿಲ್ಲ ಎನ್ನುವ ರಾಜಮೌಳಿ “ಶ್ರೀವಲ್ಲಿ” ಚಿತ್ರಕ್ಕೆ ಕನ್ನಡದಲ್ಲೇ ಹಿನ್ನೆಲೆ ಧ್ವನಿ ನೀಡಿದ್ದಾರೆ.

ಕನ್ನಡ ಹಾಗು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮುಕ್ತಾಯವಾಗಿದೆ. ಆಡಿಯೋ ರಿಲೀಸ್ ಕೂಡ ಆಗಿದೆ. ತೆರೆಗೆ ಬರುವುದಷ್ಟೇ ಬಾಕಿ.ಎರಡೂ ಭಾಷೆಗಳಲ್ಲೂ ಮುಖ್ಯ ಪಾತ್ರಗಳನ್ನು ತೆರೆಯ ಮೇಲೆ ಪರಿಚಯಿಸುವ ಕಾರ್ಯವನ್ನು ತಮ್ಮ ಧ್ವನಿಯ ಮೂಲಕ ರಾಜಮೌಳಿ ಮಾಡಿದ್ದಾರೆ.
ಅಂದಹಾಗೆ “ಶ್ರೀವಲ್ಲಿ” ನಿರ್ದೇಶಕ ಹಾಗು ಕಥೆಗಾರ ವಿಜಯೇಂದ್ರ ಪ್ರಸಾದ್ ರಾಜಮೌಳಿಯ ತಂದೆ ಎನ್ನುವುದು ಗೊತ್ತಿರುವ ವಿಚಾರವೇ . ರಾಜಮೌಳಿಯ ಯಶಸ್ಸಿನ ಹಿಂದಿನ ಕಥಾಶಕ್ತಿ ವಿಜಯೇಂದ್ರ ಪ್ರಸಾದ್. ಅವರ ನಿರ್ದೇಶನದ ಚಿತ್ರಕ್ಕೆ ತಾನು ಏನಾದರೂ ಮಾಡಲೇಬೇಕೆಂಬ ಹಂಬಲ ರಾಜಮೌಳಿಗೆ ಇತ್ತಂತೆ. ಆ ಕಾರಣದಿಂದ “ಶ್ರೀವಲ್ಲಿ” ಯ ಶುರುವಿಗೆ ಧ್ವನಿಯಾಗಿದ್ದಾರೆ .