ರಜಿನಿ ಸಾಕಿರುವ ಕಾಳ ಇವತ್ತೇ ಬರ್ತಾನೆ..!!

ತಮಿಳುನಾಡಿನ ಸೂಪರ್ಸ್ಟಾರ್ ಕಮ್ ಪೊಲಿಟೀಷಿಯನ್ ರಜನಿಕಾಂತ್ ಅಭಿನಯದ ಕಾಳಾ ಚಿತ್ರದ ಟೀಸರ್ ಇಂದು ಬಿಡುಗಡೆ ಆಗಿಲಿದೆ.. ಸಿನಿಮಾ ರಂಗದಿಂದ ದೂರ ಆಗ್ತಿರುವ ಈ ವೇಳೆಯಲ್ಲಿ ಚಿತ್ರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ರಜಿನಿಕಾಂತ್ ಸಿನಿಮಾ ಬರುತ್ತಿದೆ ಅಂದ್ರೆ ವಾರದಿಂದಲೇ ಸಿದ್ದತೆ ಮಾಡ್ತಿದ್ದ ಅಭಿಮಾನಿಗಳು ಇದೀಗ ಟೀಸರ್ ಬಿಡುಗಡೆಗೂ ಕಾಯುವಂತಾಗಿದೆ. ಕಾಳಾ ಸಿನಿಮಾ ರಿಲೀಸ್ಗೆ ರೆಡಿಯಾಗಿದ್ದು, ಚಿತ್ರತಂಡ ಇವತ್ತು ಫಸ್ಟ್ ಟೀಸರ್ ರಿಲೀಸ್ ಮಾಡುತ್ತಿದೆ.
ಈ ಹಿಂದೆ ರಜಿನಿಕಾಂತ್ ಅಭಿನಯದ ಕಬಾಲಿ ಚಿತ್ರ ನಿರ್ದೇಶನ ಮಾಡಿದ್ದ ಪಾ ರಂಜಿತ್, ಕಾಳಾ ಚಿತ್ರಕ್ಕೂ ಡೈರೆಕ್ಷನ್ ಮಾಡಿದ್ದಾರೆ. ಸದ್ಯ ಪೋಸ್ಟರ್ ಬಿಡುಗಡೆಗೊಂಡಿದ್ದು ರಜಿನಿ ಫಸ್ಟ್ಲುಕ್ನಿಂದ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿರುವ ರಜಿನಿ ಕಾಳಾ ಚಿತ್ರದ ಟೀಸರ್ ಹೇಗಿರಲಿದೆ, ರಜಿನಿ ಯಾವ ರೀತಿ ಕಾಣಿಸಿಕೊಂಡಿದ್ದಾರೆ ಅನ್ನೋ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ.
ರಜಿನಿ ಅಳಿಯ ನಟ ಧನುಷ್ ನಿರ್ಮಾಣ ಮಾಡಿರುವ ಕಾಳಾ ಚಿತ್ರ ಬಿಗ್ ಬಜೆಟ್ ನ ಸಿನಿಮಾ ಎನ್ನಲಾಗ್ತಿದೆ.. ರಜಿನಿಕಾಂತ್ ಜೊತೆಗೆ ಹುಮಾಖುರೇಶಿ, ನಾನಾ ಪಟೇಖರ್, ಸಮೃತಿಖಣಿ, ಅಂಜಲಿ ಪಾಟೀಲ್ ಸೇರಿದಂತೆ ಹಲವು ಖ್ಯಾತ ನಾಮರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಏಪ್ರಿಲ್ 27ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗಲು ಸಜ್ಜಾಗಿರುವ ಕಾಳಾ ಜನರಿಗೆ ಯಾವ ರೀತಿ ಹತ್ತಿರವಾಗ್ತಾನೆ ಅನ್ನೋದನ್ನು ಕಾದು ನೋಡ್ಬೇಕು. ಆದ್ರೆ ಕಾಳನಿಗಿಂತಲೂ ಮೊದಲೇ ಶೂಟಿಂಗ್ ಶುರು ಮಾಡಿಕೊಂಡಿದ್ದ 2.0 ಚಿತ್ರ ಕೂಡ ಬಿಡುಗಡೆಗೆ ಬರಲಿದ್ದು, ಮೊದಲು ಕಾಳನ ಎಂಟ್ರಿ.
-Ad-

Leave Your Comments