ಇವರು ದೇವರ ಸ್ವಂತ ಮಗು !  ರಜನಿಕಾಂತ್ ಶ್ಲಾಘನೆ.

Kabali Teaser Stills-Photos-Rajinikanth
ಕನ್ನಡಿಗ, ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡುವುದೇ ಕಡಿಮೆ. ಅದರಲ್ಲೂ ಮಾತನಾಡಿದರೆ ಅಳೆದು ತೂಗಿ ಮಾತನಾಡ್ತಾರೆ. ಅದರಲ್ಲೂ ಯಾರಿಗಾದರೂ ನೋವಾಗುತ್ತದೆಯೇ ಅನ್ನೋದನ್ನು ಚಿಂತನೆ ಮಾಡ್ತಾರೆ. ಇದೀಗ ರಜನಿಕಾಂತ್ ಒಂದು ಹೇಳಿಕೆಯನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. ಅದು ಸಾಕಷ್ಟು ಜನರಿಗೆ ಸಂತಸ ಉಂಟುಮಾಡಿದೆ.
ರಜನಿ ಕಣ್ಣಲ್ಲಿ ದೇವರ ಮಗ ಯಾರು ?
ಬಾಹುಬಲಿ 2 ಸಿನಿಮಾ ಪ್ರಪಂಚದಾದ್ಯಂತ ತಲ್ಲಣ ಸೃಷ್ಠಿಸಿದ ಮೇಲೆ ಸೂಪರ್ ಸ್ಟಾರ್ ತಲೈವ ಕೂಡ ಸಿನಿಮಾ ನೋಡಿದ್ದಾರೆ.. ನಿನ್ನೆ ಭಾನುವಾರ ಸಿನಿಮಾ ನೋಡಿಕೊಂಡು ಬಂದ ಬಳಿಕ ಅವರು ಈ ರೀತಿ ಹೇಳಿಕೊಂಡಿದ್ದಾರೆ. ‘ ಬಾಹುಬಲಿ 2 ಸಿನಿಮಾ ಭಾರತೀಯ ಚಿತ್ರರಂಗದ ಹೆಮ್ಮೆ. ದೇವರ ಸ್ವಂತ  ಮಗು ರಾಜಮೌಳಿ ಮತ್ತು ಅವರ ತಂಡಕ್ಕೆ ನನ್ನ ವಂದನೆ”
ಕಬಾಲಿ ಟ್ವೀಟ್ ಗೆ ಬಾಹುಬಲಿ ಟೀಂ ದಿಲ್ ಖುಷ್..
ಹೌದು, ರಜನಿಕಾಂತ್ ಅಂತಹ ಮೇರು ನಟರು ಶಹಬ್ಬಾಸ್ ಗಿರಿ ಕೊಟ್ಟರೆ ಯಾರು ತಾನೆ ಹೆಮ್ಮ ಪಡಲ್ಲ. ಇದೀಗ ಬಾಹುಬಲಿ 2 ಚಿತ್ರತಂಡದ ಸರದಿ ಅಷ್ಟೆ. ತಲೈವಾ ಟ್ವೀಟ್ ಮಾಡ್ತಿದ್ದ ಹಾಗೆ ರಾಣ ದಗ್ಗುಬಾಟಿ ಸೇರಿದಂತೆ ಹಲವಾರು ಮಂದಿ ರೀ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ. ಜೊತೆಗೆ ಯಾವಾಗ ರಾಜಮೌಳಿ ಹಾಗು ನೀವು ಜೊತೆಯಲ್ಲಿ ಕೆಲಸ ಮಾಡ್ತೀರಿ ಅಂತಾನು ಸಾಕಷ್ಟು ಜನ ಪ್ರಶ್ನಿಸಿದ್ದಾರೆ.
ಅದೇನೆ ಇರಲಿ ಈ ರೀತಿಯ ಒಳ್ಳೆ ಸಿನಿಮಾಗಳು ಬಂದಾಗ ಬೆನ್ನು ತಟ್ಟಿ ಪ್ರೋತ್ಸಾಹ ನೀಡುವ ಮನಸ್ಸು ರಜನಿಕಾಂತ್ ಬೆಳಸಿಕೊಂಡಿದ್ದಾರೆ. ಇದನ್ನೇ ಎಲ್ಲರೂ ಮಾಡಿದರೆ ಚಿತ್ರೋದ್ಯಮ ಸ್ನೇಹಮಯ ಆಗೋದ್ರಲ್ಲಿ ಅನುಮಾನವಿಲ್ಲ..
ರವಿಮೇಘ, ನಾಗಮಂಗಲ
-Ad-

Leave Your Comments