ರಾಯರ ಮುಂದೆ ತಲೈವಾ ಶರಣು..! 

ತಮಿಳು ಸೂಪರ್ ಸ್ಟಾರ್ ತಲೈವಾ ಆಧ್ಯಾತ್ಮಿಕ ವಿಚಾರಗಳು ಅಂದ್ರೆ ಎತ್ತಿದ ಕೈ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಗುರು ರಾಯರ ಮಠ ಅಂದ್ರೆ ರಜಿನಿಕಾಂತ್ ಗೆ ಅಚ್ಚುಮೆಚ್ಚು. ಮಂಗಳವಾರ ಸೂಪರ್ ಸ್ಟಾರ್ ರಜಿನಿಕಾಂತ್ ಮಂತ್ರಾಲಯಕ್ಕೆ ಭೇಟಿ ನೀಡಿ, ಗುರು ರಾಘವೇಂದ್ರನ ದರ್ಶನ ಪಡೆದ್ರು. ಈ ವೇಳೆ ತಲೈವಾನನ್ನು ನೋಡಲು ಅಭಿಮಾನಿಗಳು ಮುಗಿಬಿದ್ರು.
 ವರ್ಷಕ್ಕೆ 2 ಬಾರಿ ರಾಯರ ದರ್ಶನ ಕಡ್ಡಾಯ..!
ನಟ ರಜಿನಿಕಾಂತ್ ತಮಿಳು ಚಿತ್ರರಂಗದಲ್ಲಿ ಒಂದೊಂದೆ ಮೆಟ್ಟಿಲು ಹತ್ತಿ ಸೂಪರ್ ಸ್ಟಾರ್ ಆಗ್ತಿದ್ದ ಹಾಗೆ ಆಧ್ಯಾತ್ಮದತ್ತಲೂ ಒಲವು ಹೆಚ್ಚಿಸಿಕೊಳ್ಳುತ್ತಾ ಸಾಗಿದ್ರು. ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ತಮಿಳುನಾಡಿನ ಸೂಪರ್ ಸ್ಟಾರ್ ರಜಿನಿಕಾಂತ್ ಒಂದು ವರ್ಷಕ್ಕೆ ಎರಡು ಬಾರಿ ಬಂದೇ ಬರುತ್ತಾರೆ. ಮಂಗಳವಾರ  ಬೆಳ್ಳಂಬೆಳಗ್ಗೆ 7.30ಕ್ಕೆ ಆಗಮಿಸಿ  ಗುರು ರಾಘವೇಂದ್ರರ ದರ್ಶನ ಪಡೆದ ತಲೈವಾ, ಬಳಿಕ ರಾಯರ ಮಠದ ಪೀಠಾಧ್ಯಕ್ಷರಾದ ಶ್ರೀ ಸುಭುದೇಂದ್ರ ಶ್ರೀಗಳ ಆಶೀರ್ವಾದ ಪಡೆದ್ರು. ನಂತರ ಬೃಂದಾವನಕ್ಕೆ ತೆರಳಿ ದರ್ಶನ ಪಡೆದ್ರು.  ಪೀಠಾಧ್ಯಕ್ಷರೊಂದಿಗೆ ಕೆಲ ಕಾಲ ಉಭಯ ಕುಷಲೋಪರಿ ವಿಚಾರಿಸಿದ್ರು. ಈ ವೇಳೆ ಮಠದಿಂದ ರಜಿನಿಕಾಂತ್ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯ್ತು.
 ಮಂತ್ರಾಲಯಕ್ಕೂ ಮುನ್ನ ಬೆಂಗಳೂರಿನಲ್ಲಿ ರಜಿನಿ
ಪ್ರತಿಬಾರಿ ಮಂತ್ರಾಲಯಕ್ಕೆ ತೆರಳುವಾಗಲು ಸೂಪರ್ ಸ್ಟಾರ್ ರಜಿನಿಕಾಂತ್‌, ಬೆಂಗಳೂರಿಗೆ ಬರ‌್ತಾರೆ. ಅದೇ ರೀತಿ ರಜಿನಿಕಾಂತ್ ಈ ಬಾರಿ ಕೂಡ ಬೆಂಗಳೂರಿಗೆ ಬಂದಿದ್ರು. ಸಂಬಂಧಿಕರ ಮನೆಯ ಕಾರ್ಯಕ್ರಮ ಇದ್ದಿದ್ರಿಂದ ರಜಿನಿಕಾಂತ್ ಸೋಮವಾರವೇ ಬೆಂಗಳೂರಿಗೆ ಆಗಮಿಸಿದ್ರು. ಸಂಬಂಧಿಕರ ಮನೆಯ ಕಾರ್ಯಕ್ರಮ ಮುಗಿಸಿದ ಬಳಿಕ ಬೆಂಗಳೂರಿನಲ್ಲೆ ತಂಗಿದ್ದ ರಜಿನಿಕಾಂತ್, ಇಲ್ಲಿಂದ ನೇರವಾಗಿ ರಾಯರ ಮಠಕ್ಕೆ ತೆರಳಿದ್ರು. ರಾಯರ ಸನ್ನಿಧಿಯಲ್ಲಿ ಅರ್ಧಗಂಟೆ ಕಾಲ ಧ್ಯಾನ ಪೂಜೆ ಮುಗಿಸಿ ಅಲ್ಲಿಂದ ನೇರವಾಗಿ ಚೆನ್ನೈನತ್ತ ಪ್ರಯಾಣ ಬೆಳೆಸಿದ್ರು.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments