ರಜನಿಕಾಂತ್ ನಟನೋ.. ಸಾಧುವೋ.. ರಾಜಕಾರಣಿಯೋ.. ?

ಕಾಲಿವುಡ್ ಸೂಪರ್​​ಸ್ಟಾರ್ ರಜಿನಿಕಾಂತ್ ಕರ್ನಾಟಕದಲ್ಲಿ ಹುಟ್ಟಿ ಬೆಳೆದರು ಖ್ಯಾತಿ ಪಡೆದಿದ್ದು ತಮಿಳುನಾಡಿನಲ್ಲಿ.. ರಜನಿಕಾಂತ್ ಸಿನಿಮಾ ಬರುತ್ತಿದೆ ಅಂದ್ರೆ ಪೂಜೆ ಪುನಸ್ಕಾರ  ಮಾಡುತ್ತಾ ಜಪ ತಪ ಮಾಡುವ ಅಭಿಮಾನಿಗಳು ತಮಿಳುನಾಡಿನಾದ್ಯಂತ ಸಾವಿರಾರು ಜನರು ಸಿಗ್ತಾರೆ.. ಏ ನಿರುಪ್ಪುಡ ಅಂತ ಕೈ ತಿರುಗಿಸಿದ್ರೆ ಥಿಯೇಟರ್ ನಲ್ಲಿ ತಲೈವಾಗೆ ಚಪ್ಪಾಳೆಗಳ ಸುರಿಮಳೆಯೇ ಆಗುತ್ತದೆ. ಕರ್ನಾಟಕದಲ್ಲಿ ರಾಜ್ ಕುಮಾರ್ ಅವರನ್ನು ಕನ್ನಡಿಗರು ಆರಾಧಿಸುವ ರೀತಿಯಲ್ಲೇ ತಮಿಳಿಗರು ರಜನಿಕಾಂತ್ ಅವರನ್ನು ಆರಾಧಿಸುತ್ತಾರೆ. ಆದ್ರೆ ಸಿನಿಮಾ ರಂಗದಲ್ಲಿ ಗಳಿಸಿದ ಖ್ಯಾತಿಗೆ ಫುಲ್ ಸ್ಟಾಪ್ ಇಟ್ಟಿರುವ ರಜನಿಕಾಂತ್, ಇದೀಹ ರಾಜಕಾರಣ ಶುರು ಮಾಡಿದ್ದಾರೆ.
ಇತ್ತೀಚಿಗಷ್ಟೇ ತಮಿಳುನಾಡು ರಾಜ್ಯ ಸುತ್ತಾಡಿದ ರಜನಿಕಾಂತ್, ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ತಮಿಳುನಾಡಿನ ಜನರಿಗೆ ಸರಿಯಾದ ಅಧಿಕಾರ ಮಡೆಸುವವರು ಸಿಕ್ಕಿಲ್ಕ ಅನ್ನೋ ಕಾರಣಕ್ಕೆ ನಾನು ರಾಜಕೀಯಕ್ಕೆ ಬರುತ್ತಿದ್ದೇನೆ. ತಮಿಳುನಾಡು ಹಾಗೂ ಇಲ್ಲಿನ ಜನರನ್ನು ಅಭಿವೃದ್ಧಿ ಮಾಡಬೇಕಿದೆ ಎಂದು ಹೇಳಿಕೊಂಡಿದ್ದರು. ಆದ್ರೆ ಇತ್ತೀಚೆಗೆ ಅಂದ್ರೆ ಭಾನುವಾರ ಹಿಮಾಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಮಾಲಯದಲ್ಲಿ ರಜಿನಿಗೆ ಅವರ ಆಪ್ತರು ಜೊತೆಗಿದ್ದು ಸ್ವಾಗತ ಕೋರಿದ್ದಾರೆ. ಎಂದಿನಂತೆ ಶ್ವೇತ ವರ್ಣದ ಶುಭ್ರ ವಸ್ತ್ರದಲ್ಲಿ ಕಾಣಿಸಿಕೊಂಡಿರುವ ರಜನಿಕಾಂತ್, ಹಿಮಾಚಲದ ಪದ್ಧತಿಯಂತೆ ತಲಗೆ ಟೋಪಿ ಧರಿಸಿರುವುದು ವಿಶೇಷವಾಗಿದೆ.
ವರ್ಷಕ್ಕೆ ಒಂದೆರಡು ಬಾರಿ ಧ್ಯಾನಕ್ಕಾಗಿ ಹಿಮಾಲಯಕ್ಕೆ ಹೋಗುತ್ತಿದ್ದ ರಜನಿಕಾಂತ್, ತುಂಬಾ ಗುಟ್ಟಾಗಿ ಹೋಗಿ ಬರುತ್ತಿದ್ರು.. ಆದ್ರೆ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಳಿಕ ಮೊದಲ ಬಾರಿಗೆ ತೆರಳಿರುವ ತಲೈವಾರನ್ನು ಸ್ವಾಗತಿಸಲು ರಜನಿಕಾಂತ್ ಸ್ನೇಹಿತರು ಅಲ್ಲಿದ್ರು‌.. ಜೊತೆಗೆ ಭಾರೀ ಪ್ರಚಾರವನ್ನು ಪಡೆದುಕೊಂಡಿದ್ದು, ಈ ಬಾರಿ ಐದು ದಿನಗಳ ಕಾಲ ತಪಸ್ಸು ಮಾಡಲಿದ್ದಾರೆ ಎನ್ನಲಾಗಿದೆ. ಹಿಮಾಲಯದಲ್ಲಿರುವ ರಜನಿಕಾಂತ್ ನಂಬಿರುವ ಬಾಬಾ ಹೇಳಿದ ಬಳಿಕವೇ ರಾಜಕೀಯಕ್ಕೆ ಧುಮುಕಿರುವ ರಜನಿಕಾಂತ್, ಇದೀಗ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೊದಲು ತಪಸ್ಸು ಮಾಡ್ತಿರೋದು ತಮಿಳುನಾಡಿನಲ್ಲಿ ಮಾತ್ರವಲ್ಲ, ಇಡೀ ಭಾರತೀಯರ ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯದಲ್ಲಿ ಗೆಲುವು ಸಾಧಿಸಲು ತಂತ್ರಗಾರಿಕೆ ಜನ ಬೆಂಬಲ ಚೆನ್ನಾಗಿರಬೇಕು. ಆದ್ರೆ ಹಿಮಾಲಯದಲ್ಲಿ ತಪಸ್ಸು ಮಾಡಿದ್ರೆ ಗೆಲುವು ಧಕ್ಕುತ್ತಾ ಅನ್ನೋದು ಜನರನ್ನು ಚಕಿತರನ್ನಾಗಿ ಮಾಡಿದೆ..
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments