ಕಳೆದು ಹೋದ ಪ್ರೇಮದ ನೆನಪು ತರುವ “ರಾಜರಥ”ದ ಕಾಲೇಜ್ ಡೇಸ್ !

ರಾಜರಥ ಸಾಕಷ್ಟು ಕುತೂಹಲ ಕೆರಳಿಸುತ್ತಿರುವ ಸಿನಿಮಾ. ಈಗಾಗ್ಲೇ ಈ ಚಿತ್ರದ ಟ್ರೈಲರ್ ರಿಲೀಸಾಗಿದೆ .ಇದೀಗ ಚಿತ್ರತಂಡ ಸಿನಿಮಾದ ಹಾಡೊಂದನ್ನು  ರಿವೀಲ್ ಮಾಡಿದ್ದಾರೆ.  ಈ ಹಾಡನ್ನ ಪ್ರೀತಿಯಲ್ಲಿ ಫೇಲ್ ಆದವರು ತಪ್ಪದೆ ಕೇಳಬಹುದು.
ಕಾಲೇಜು ದಿನಗಳ ಕುರಿತಾದ ಹಾಡಾಗಿರೋದ್ರಿಂದ ಸ್ಯಾಂಡಲ್‍ವುಡ್‍ನ ಕಾಲೇಜ್‍ಕುಮಾರ, ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅವರಿಂದಾನೇ ಬಿಡುಗಡೆ ಮಾಡಿಸಿದ್ದಾರೆ . ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ಈ ಸಾಂಗನ್ನ ಬಿಡುಗಡೆ ಮಾಡಿದ್ದಾರೆ.
ಭಂಡಾರಿ ಬ್ರದರ್ಸ್ ಈಗಾಗ್ಲೇ ರಂಗಿತರಂಗ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಸಕ್ಸಸ್ ಸ್ಟೋರಿ ಬರೆದಿದ್ದಾರೆ . ಇದೀಗ ರಾಜರಥ ಚಿತ್ರದ ಮೂಲಕ ಚಂದನವನದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಲು ತಯಾರಾಗಿದ್ದಾರೆ .
ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ, ನಿರೂಪ್ ಭಂಡಾರಿ, ಅವಂತಿಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ . ಇನ್ನು 4 ವರ್ಷದ ಲವ್‍ಸ್ಟೋರಿಯನ್ನ ಹೇಳುವ ಈ ಹಾಡು  ಲವ್‍ಫೇಲ್ಯೂರ್ ಆಗಿರೋ ಹುಡುಗರಿಗೆ ಬಹಳ ಆಪ್ತ ಅನ್ನಿಸುತ್ತೆ .  ಅನೂಪ್ ಭಂಡಾರಿ ಬರೆದಿರೋ ಈ ಹಾಡಿಗೆ ನಕುಲ್ ಅಭಯಂಕರ್ ಮ್ಯೂಸಿಕ್ ನೀಡಿದ್ದಾರೆ.
-Ad-

Leave Your Comments