ಅನಿಲ್ -ಉದಯ್ ಕುಟುಂಬದ ನೆರವಿಗೆ ನಿಂತರು ರಾಜೀವ್ ಚಂದ್ರಶೇಖರ್.ಜೀವದ ಗೆಳೆಯರು ಎಲ್ಲಿದ್ದಾರೋ ಭಗವಂತ ?

ತಮ್ಮದಲ್ಲದ ತಪ್ಪಿಗೆ ಜೀವ ತೆತ್ತ ಅಮಾಯಕ ಕಲಾವಿದರು  ಅನಿಲ್- ಉದಯ್. ಎಂಟತ್ತು ದಿನ ಅಯ್ಯೋ ಪಾಪ ಅಂದಿದ್ದು ಆಯ್ತು. ಪಾಪ ಸಾಮಾನ್ಯ ಜನ ಮರುಕ ಪಡುವುದು ಬಿಟ್ಟು ಮತ್ತೇನು ಮಾಡಲಾದೀತು?  ಅವರ ಕುಟುಂಬಕ್ಕೆ ಅಲ್ಪಸ್ವಲ್ಪ ಹಣದ ಸಹಾಯ ಮಾಡಿದರೆ ಅದೇ ಹೆಚ್ಚು. ಆದರೆ ತಪ್ಪು ಮಾಡಿದವರ ಕಡೆಯಿಂದಲಾಗಲಿ, ಚಿತ್ರರಂಗದ ಕಡೆಯಿಂದಲಾಗಲಿ ಸಹಾಯ ಸಿಕ್ಕಿದ್ದಂತು ಇಲ್ಲ. ರಾಜ್ಯ ಸರ್ಕಾರ ತಲಾ 5 ಲಕ್ಷ ಕೊಡುತ್ತೇವೆ ಎಂದಿದ್ದರೂ ಚೆಕ್ ಸುತ್ತಿ ಬಳಸಿಕೊಂಡು ಮನೆಯವರ ಕೈಗೆ ಬರುವುದು ಯಾವ ಕಾಲಕ್ಕೋ?

uday-and-anil

ಇಂಥಾ ಸಮಯದಲ್ಲಿ ನಿಜಕ್ಕೂ ಎಲ್ಲರೂ ಮೆಚ್ಚಿಕೊಳ್ಳುವಂಥಾ ಕೆಲಸ ಮಾಡಿರುವುದು ಸಂಸದ ರಾಜೀವ್ ಚಂದ್ರಶೇಖರ್! ಅನಿಲ್ ಹಾಗು ಉದಯ್ ಕುಟುಂಬಕ್ಕೆ ತಲಾ 5 ಲಕ್ಷ ಮೊತ್ತದ ಚೆಕ್ ನೀಡಿ ಎರಡು ಮನೆಯವರು ಜೀವನಪರ್ಯಂತ ನೆನಪಿಸಿಕೊಳ್ಳುವಂತ ಸಹಾಯ ಮಾಡಿದ್ದಾರೆ.

ಬದಲಾದ ನಿರ್ಧಾರ

rajeev-1

ರಾಜೀವ್ ಚಂದ್ರಶೇಖರ್ ಈ ಮೊದಲು ಅನಿಲ್-ಉದಯ್ ನಂಬಿದ ಮನೆಮಂದಿಗೆ ಎರಡೆರಡು ಲಕ್ಷ ಕೊಡುವಂತ ಯೋಚನೆ ಮಾಡಿದ್ದರಂತೆ. ಯಾವಾಗ ಈ ಕುಟುಂಬ ಕಷ್ಟದಲ್ಲಿದೆ ಇದುವರೆಗೆ ಯಾರಿಂದಲೂ ಸರಿಯಾದ ಸಹಾಯ ಸಿಕ್ಕಿಲ್ಲ ಎಂದು ತಿಳಿದ ಮೇಲೆ ತಮ್ಮ ನಿರ್ಧಾರ ಬದಲಿಸಿ ಇಬ್ಬರಿಗೂ ಸೇರಿ ಹತ್ತು ಲಕ್ಷ ಕೊಡಲು ನಿರ್ಧರಿಸಿದರಂತೆ.

ನಾನೇ ಬರ್ತೀನಿ

ambareesh ವಿಷಯ ತಿಳಿದ ಅಂಬರೀಷ್  ರಾಜೀವ್ ನಡೆಯನ್ನು ಮೆಚ್ಚಿ,ತಾನೇ ಖುದ್ದಾಗಿ ವಾಣಿಜ್ಯ ಮಂಡಳಿಗೆ ಬರುವುದಾಗಿ ತಿಳಿಸಿದ್ದಾರೆ. ದೆಹಲಿಯಿಂದ ವಿಮಾನ ಹೊರಡುವುದು ತಡವಾಗಿ ರಾಜೀವ್ ಚಂದ್ರಶೇಖರ್ ಬರುವುದು ಸಾಧ್ಯವಾಗಿಲ್ಲ. ನಮ್ಮ ಚಿತ್ರರಂಗಕ್ಕೆ ಯಾವ ರೀತಿಯಲ್ಲೂ ಸಂಬಂಧ ಪಡದ ರಾಜೀವ್ ಚಂದ್ರಶೇಖರ್ ಮಾನವೀಯ ನೆಲೆಗಟ್ಟಿನಲ್ಲಿ ಇಷ್ಟು ದೊಡ್ಡ ಮನಸ್ಸು ಮಾಡಿದ್ದಾರೆ ಅವರಿಲ್ಲದೆ ಹೇಗೆ ? ಕಾಯೋಣ ಅಂದಿದಾರೆ ಅಂಬರೀಶ್ . ಕೊನೆಗೆ ಮನೆಯವರಿಗೆ ಏನು ಕಷ್ಟವಿದೆಯೋ ಮೊದಲು ತಲುಪಿಸಿ ನನಗಾಗಿ ಕಾಯುವುದು ಬೇಡ ಎಂಬ ಸಂದೇಶ ರಾಜೀವ್ ಅವರಿಂದ ಬಂದ ಮೇಲೆ ಅನಿಲ್ ತಂದೆ ಹಾಗು ಉದಯ್ ಸಹೋದರನಿಗೆ ಅಂಬರೀಷ್ ಚೆಕ್ ವಿತರಿಸಿದ್ದಾರೆ.

ಕಡೆಗೂ ಬಂದೀತೇ ?

ವಾಣಿಜ್ಯ ಮಂಡಳಿ ಅಧ್ಯಕ್ಷ  ಸಾ ರಾ ಗೋವಿಂದು, ರಾಕ್ ಲೈನ್ ವೆಂಕಟೇಶ್, ರಾಜೇಂದ್ರ ಸಿಂಗ್ ಬಾಬು , ದೊಡ್ಡಣ್ಣ, ಮುಂತಾದವರ ಉಪಸ್ಥಿತಿಯಲ್ಲಿ ಕೆಲವೇ ದಿನಗಳಲ್ಲಿ ಚಿತ್ರರಂಗದ ವತಿಯಿಂದ ದೊಡ್ಡ ಮೊತ್ತದ ಹಣ ಎರಡೂ ಕುಟುಂಬಗಳಿಗೆ ನೀಡುವುದಾಗಿ ಭರವಸೆ ಬಂದಿದೆ. ಈಡೇರುವ ಕಾಲ ಎಂದು ಬಂದೀತೋ ನೋಡಬೇಕು.

ಹೊರಗಿನವರು ಕೊಟ್ಟ ಮೇಲಾದರೂ ತಮ್ಮ ಮಾನವೀಯತೆ ಎಲ್ಲಿ ಹೋಯಿತು ಅಂತ ತಡಕಾಡಿಕೊಂಡು ಚಿತ್ರರಂಗದ ಘಟಾನುಘಟಿಗಳು, ಜೀವದ ಗೆಳೆಯರೆಂದು ಗೋಳುಗರೆದವರು ಮನುಷ್ಯತ್ವ ಮೆರೆದರೆ ಸಾಕು.

ಅಂದಹಾಗೆ ಸಾಲು ಮರದ ತಿಮ್ಮಕ್ಕ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಅಪಲೋ ಆಸ್ಪತ್ರೆ ಸೇರಿದಾಗ ವೆಚ್ಚ ಭರಿಸಿದ್ದು ಇದೇ  ರಾಜೀವ್ ಚಂದ್ರಶೇಖರ್ .

-Ad-

Leave Your Comments