ಡಾ. ರಾಜ್ ಕುಮಾರ್ ಕನ್ನಡದ ಕಣ್ಮಣಿ. ದೈತ್ಯ ಪ್ರತಿಭೆ ಇದ್ದಾಗ್ಯೂ ಅನ್ಯ ದೈವವನೊಲ್ಲೆ ಎಂದು ಕನ್ನಡಚಿತ್ರರಂಗಕ್ಕೇ ಅರ್ಪಿಸಿಕೊಂಡ ಮಹಾನ್ ಕಲಾವಿದ. ಹೀಗಿದ್ದೂ ದೇಶದೇಶಗಳ ಎಲ್ಲೇ ದಾಟಿ ಅವರ ಕೀರ್ತಿ ಹಬ್ಬಿರುವುದಕ್ಕೆ ಸಾಕ್ಷಿ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೊ ನಗರದ ರೆಸ್ಟೋರೆಂಟ್ ನಲ್ಲಿ ಮಿಂಚುತ್ತಿರುವ ಅಣ್ಣಾವ್ರ ಫೋಟೋ !
ಅವರ ಎಂದಿನ ಮಂದಹಾಸವಿರುವ ಈ ಪಟವಂತೂ ಅಭಿಮಾನಿಗಳಿಗೆ ಅಚ್ಚುಮೆಚ್ಚು. ರಾಜಣ್ಣನವರ ಭಾವಚಿತ್ರವನ್ನ ಹಲವು ವರುಷಗಳಿಂದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ತನ್ನ ರೆಸ್ಟೋರೆಂಟ್ನಲ್ಲಿ ಇಟ್ಟು ಅಭಿಮಾನ ಮೆರೆಯುತ್ತಿದ್ದಾರೆ ಹೋಟೆಲ್ ಮಾಲೀಕರು. ಬಂಗಾರದ ಮನುಷ್ಯ ಚಿತ್ರದ ಹಾಡು ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಅವರಿಗೆ ಪ್ರೇರಣೆ ಆಗಿದೆಯಂತೆ .ಅಷ್ಟೇ ಅಲ್ಲದೆ ಅಲ್ಲಿಗೆ ಬರುವ ಕೂತೂಹಲದ ಮಂದಿಗೆ ಅಣ್ಣಾವ್ರ ಬಗ್ಗೆ ಹೇಳುವ ಕೆಲಸವನ್ನು ಮಾಡುತ್ತಿದ್ದರಂತೆ.
ಅವರ ಸಿನಿಮಾಗಳು ಮಾಡಿದ ಸಾಮಾಜಿಕ ಕ್ರಾಂತಿಯ ಬಗ್ಗೆಯೂ ಅಲ್ಲಿನ ಜನರಿಗೆ ಪರಿಚಿಯಿಸುತ್ತಾರಂತೆ. ಒಟ್ಟಿನಲ್ಲಿ ನಮ್ಮ ರಾಜಣ್ಣ ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಸಾಗರದಾಚೆಗಿನ ನಾಡಿನಲ್ಲಿ ಪ್ರೇರಕ ಶಕ್ತಿಯಾಗಿರುವುದು ಕನ್ನಡಿಗರಿಗೆ ಹೆಮ್ಮೆ ಅಲ್ಲವೇ ?