ನನಸಾಯಿತು ಅಣ್ಣಾವ್ರು ಕಂಡ ಕನಸು !

ಕನ್ನಡ ಕಲಾವಿದರೆಲ್ಲಾ ಒಂದೇ ಸೂರಿನಡಿ ಇರಬೇಕು ಎನ್ನುವ ಕಲಾವಿದರ ಬಹುವರ್ಷಗಳ ಕನಸು ಇದೀಗ ನಸಸಾಗಿದೆ. ರೆಬೆಲ್ ಸ್ಟಾರ್ ಅಂಬರೀಶ್ ನೇತೃತ್ವದಲ್ಲಿ ಭವ್ಯ ಕಟ್ಟಡ ನಿರ್ಮಾಣವಾಗಿದ್ದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಡಾ ರಾಜ್ ಕುಮಾರ್ ಕಂಡ ಕನಸನ್ನು ರೆಬೆಲ್ ಸ್ಟಾರ್ ಅಂಬರೀಶ್ ನನಸು ಮಾಡಿದ್ದಾರೆ. ಸ್ವಂತ ಸೂರಿನಡಿ ಇಡೀ ಚಿತ್ರರಂಗ ಅವಿಭಕ್ತ ಕುಟುಂಬದ ರೀತಿ ಕಾಣ್ತಿದೆ.
ಹಲವಾರು ವರ್ಷಗಳಿಂದ ಕಲಾವಿದರ ಸಂಘದ ಅಧ್ಯಕ್ಷರಾಗಿರುವ ರೆಬೆಲ್ ಸ್ಟಾರ್ ಅಂಬರೀಶ್ ಆಶಯದಂತೆ, ಚಾಮರಾಜಪೇಟೆಯಲ್ಲಿ ಕಲಾವಿದರ ಭವನ ನಿರ್ಮಿಸಲಾಗಿದೆ. ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್ , ಸಂಘದ ಖಜಾಂಚಿ ದೊಡ್ಡಣ್ಣ ಹಗಲಿರುಳು ಪರಿಶ್ರಮ ವಹಿಸಿ ಐದು ಅಂತಸ್ಥಿನ ಭವ್ಯ ಕಟ್ಟಡ ನಿರ್ಮಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಗುರುವಾರ ಸಿಎಂ ಟೇಪ್ ಕತ್ತರಿಸಿ ಲೋಕಾರ್ಪಣೆ ಮಾಡಿದ ಬಳಿಕ ಶುಕ್ರವಾರ ಅಧಿಕೃತವಾಗಿ ಶಾಸ್ತ್ರ ಪೂಜೆ ಪುನಸ್ಕಾರಗಳನ್ನು ನಡೆಸಲಾಯ್ತು. ಗಣಹೋಮ, ಸುದರ್ಶನ ಹೋಮ ಮಾಡಿಸಲಾಯ್ತು. ನಟ ದೊಡ್ಡಣ್ಣ ದಂಪತಿ ಪೂಜೆ ನೆರವೇರಿಸಿದ್ರು . ಅಂಬರೀಶ್ ಮತ್ತು ಸುಮಲತಾ ಕೂಡ ಪೂಜೆಗೆ ಜೊತೆಯಾದ್ರು. ರಾಕ್‌ಲೈನ್ ವೆಂಕಟೇಶ್ ಎಲ್ಲರನ್ನ ಬರಮಾಡಿಕೊಂಡ್ರು. ತಾರೆಗಳೆಲ್ಲಾ ಹೊಸ ಮನೆ ಸುತ್ತಾಡಿ ಖುಷಿ ಪಟ್ರು.
ಹಿರಿಯ ನಟಿ ಲೀಲಾವತಿ , ನಟ ರಾಜೇಶ್, ಪದ್ಮಾ ವಾಸಂತಿ , ಹೇಮಾಚೌಧರಿ , ಲೋಕನಾಥ್, ಜೈಜಗದೀಶ್, ಅನುಪ್ರಭಾಕರ್ ದಂಪತಿ , ತಬಲಾ ನಾಣಿ , ಮಿತ್ರ ಸೇರಿದಂತೆ ಅನೇಕ‌ ನಟ-ನಟಿಯರು ಕಟ್ಟಡದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ರು. ದಕ್ಷಿಣ ಭಾರತ ಚಿತ್ರಂಗದಲ್ಲೇ ಪ್ರಪ್ರಥಮ ಬಾರಿಗೆ ಇಂಥದ್ದೊಂದು ಕಲಾವಿರ ಸಂಘ ಕಟ್ಟಿ ಅದಕ್ಕೊಂದು ದೊಡ್ಡ ಕಟ್ಟಡ ಕಟ್ಟಿದ ಹೆಮ್ಮೆ ಕನ್ನಡ ಚಿತ್ರರಂಗಕ್ಕೆ ಸಲ್ಲುತ್ತೆ ಅಂದ್ರೆ ಸುಳ್ಳಲ್ಲ. ನಿವೇಶನ ಕೊಡಿಸುವುದರ ಜೊತೆಗೆ ಕಟ್ಟಡ ನಿರ್ಮಾಣಕ್ಕೂ ರೆಬಲ್ ಸ್ಟಾರ್  ಅಂಬರೀಷ್ ಪರಿಶ್ರಮ ಮರೆಯುವಂತಿಲ್ಲ. 
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments