ಕನ್ನಡ ಪಠ್ಯದಲ್ಲಿ ಕನ್ನಡದ ಕಣ್ಮಣಿ ಡಾ.ರಾಜ್ ಜೀವನ ಚರಿತ್ರೆ !

ಮೇರು ನಟನಾಗಿ ಮಾತ್ರವಲ್ಲದೆ ಓರ್ವ ವ್ಯಕ್ತಿಯಾಗಿ ತನ್ನ ನಯ-ವಿನಯ, ಸಾಧನೆಯಿಂದ ಅಭಿಮಾನಿಗಳ ಆರಾಧ್ಯದೈವವಾದವರು ಡಾ. ರಾಜ್ ಕುಮಾರ್ . ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ಕಲೆಗಾಗಿ ತಪಗೈದ ಮಹನೀಯ. ಅವರ ಸಾಧನೆ, ಕಷ್ಟಗಳನ್ನು ಮೆಟ್ಟಿ ನಿಂತು ಭಾರತೀಯ ಚಿತ್ರರಂಗದಲ್ಲಿ ಕಳಶಪ್ರಾಯರಾದ ರೀತಿ ಅನುಕರಣೀಯ. ಅಂಥಾ ಮಹಾನ್ ನಟನ ಬದುಕಿನ ಮಜಲುಗಳನ್ನು ಓದಿ ಸ್ಪೂರ್ತಿ ಪಡೆಯುವ ಅವಕಾಶವೀಗ 6ನೇ ತರಗತಿಯ ಮಕ್ಕಳಿಗೆ ಒದಗಿ ಬಂದಿದೆ.

ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಕೆ. ಗೋಪಾಲಯ್ಯ ಪ್ರಶ್ನೆಗೆ ಉತ್ತರಿಸಿದ ಶಿಕ್ಶಣ ಸಚಿವ ತನ್ವಿರ್ ಸೇಠ್ ಆರನೇ ತರಗತಿಯ ಕನ್ನಡ ಪ್ರಥಮ ಭಾಷಾ ಪಠ್ಯದಲ್ಲಿ ಡಾ.ರಾಜ್ ಕುಮಾರ್ ಅವರ ಜೀವನ  ಚರಿತ್ರೆ ಸೇರಿಸಲಾಗಿದೆ ಎಂದಿದ್ದಾರೆ.

 

-Ad-

Leave Your Comments