ಭೋಜರಾಜಂಗೆ ಭುವನೇಶ್ವರಿ ಒಲಿಯಲು ಸಿದ್ದರಾಮಯ್ಯನವರೇ ಕಾಳಿದಾಸನಾಗಬೇಕಾಯಿತಲ್ಲ !

ಕನ್ನಡ ಚಿತ್ರರಂಗದ ಹೆಮ್ಮೆ, ಅಭಿಜಾತ ಕಲಾವಿದ  ಶ್ರೀನಿವಾಸ ಮೂರ್ತಿ. ಅವರ ಸುದೀರ್ಘ ಕಲಾ ಸಾಧನೆಗೆ ಸಿದ್ದರಾಮಯ್ಯನವರ ಸರ್ಕಾರ  ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕಲಾರಾಧಕ ಶ್ರೀನಿವಾಸ ಮೂರ್ತಿಯವರಿಗೆ ciniadda.com ತಂಡ ಹಾಗು ಅಭಿಮಾನಿಗಳ ಅಭಿನಂದನೆಗಳು .

 

ಮುವತ್ತು ವರುಷಕ್ಕೇ ನಾಯಕನಿಗೆ ತಂದೆಯಾಗಿ ನಟನೆಯಲ್ಲಿ ಪ್ರಬುದ್ಧತೆ ಮೆರೆದಿದ್ದ ಕಲಾವಿದ ಶ್ರೀನಿವಾಸ ಮೂರ್ತಿ. ದೊರೆಯಾಗಿ, ದೇವನಾಗಿ ,ಗೆಳೆಯನಾಗಿ, ಗಂಡನಾಗಿ ,ಮಗನಾಗಿ  ಹಾಸ್ಯನಟನಾಗಿ ಇತ್ತೀಚಿನ ” ದೊಡ್ಡಮನೆ ಹುಡುಗ “ದಲ್ಲಿ ಪುನೀತ್ ರ ಸಾಕು ತಂದೆಯ ಪಾತ್ರದವರೆಗೆ ನಾನಾ ರೂಪದಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದರೂ ಇವತ್ತಿಗೂ ಮನದಲ್ಲಿ ಅಚ್ಚಳಿಯದೆ ಉಳಿದಿರುವುದು ಕಾಳಿದಾಸ ಚಿತ್ರದ ಭೋಜರಾಜನಾಗಿಯೇ.

ಹಾಗಂತ ಅವರ ಆಸಕ್ತಿಗೆ, ಸಾಮರ್ಥ್ಯಕ್ಕೆ  ತಕ್ಕ ಅವಕಾಶಗಳ ಭೂರೀ ಭೋಜನವೇನು ದಕ್ಕಿಲ್ಲ ಎಂಬುದು ಅವರ ಆಳದ ಕೊರಗು. ಸಿದ್ದಲಿಂಗಯ್ಯ ಬೆನ್ನು ತಟ್ಟಿ ಬೆಳೆಸಿದ ಪ್ರತಿಭೆ , ಬಾಲಕೃಷ್ಣರಿಂದ ಭೇಷ್ !! ನಟಸಾರ್ವಭೌಮರಿಂದ ಶಹಬ್ಬಾಸ್ !! ಅನ್ನಿಸಿಕೊಂಡ ಅಪರೂಪದ ಕಲಾವಿದನೊಬ್ಬ ಸರ್ಕಾರದ ಕಣ್ಣಿಗೆ ಕಂಡು ಪುರಸ್ಕೃತನಾಗಲಿಕ್ಕೆ ಇಷ್ಟು ಕಾಲಬೇಕಾಯಿತಲ್ಲ ಅನ್ನುವ ಬೇಸರ ಒಂದುಕಡೆಯಾದರೆ ಈಗಲಾದರೂ ಬಂತಲ್ಲ ಎಂಬ ಸಮಾಧಾನ ಅವರಿಗೆ .

ಇಂಥಾ ಹೊತ್ತಿನಲ್ಲೇ ciniadda.com ಜೊತೆ ಬದುಕಿನಲ್ಲಿ ದಕ್ಕಿದ ಮಾನ- ಅವಮಾನ- ಸಮ್ಮಾನ ಗಳ ಸಂಗತಿಗಳನ್ನ ತೆರೆದಿಟ್ಟಿದ್ದಾರೆ. ರಾಜಕುಮಾರರ ಪ್ರೀತಿ, ವಿಷ್ಣುವರ್ಧನರ ರೀತಿ-ನೀತಿ , ಕೈಗೆ ಬಂದ ತುತ್ತು ಕಿತ್ತುಕೊಂಡವರ ಮನಸ್ಥಿತಿ ಎಲ್ಲವನ್ನೂ ಯಾವ ಅಳುಕಿಲ್ಲದೆ ಬಿಚ್ಚಿಟ್ಟಿದ್ದಾರೆ.

ವಿಡಿಯೋ ಸಂದರ್ಶನದ ತುಣುಕುಗಳು ಇಲ್ಲಿವೆ.

 

 

 

 

 

 

-Ad-

Leave Your Comments