8ನೇ ತಾರೀಕು ಬಾಲಿವುಡ್ಡಿನ ವಿವಾದಕ್ಕೆ ಹೆಸರಾದ ನಟಿ ರಾಖಿ ಸಾವಂತ್ಗೆ ಮತ್ತೊಂದು ಕಾನೂನು ಕಂಟಕ ಎದುರಾಗಿದೆ. ಮಹರ್ಷಿ ವಾಲ್ಮೀಕಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರ ಆರೋಪದಲ್ಲಿ ಆಕೆಯ ವಿರುದ್ಧ ಪಂಜಾಬಿನ ಸ್ಥಳೀಯ ನ್ಯಾಯಾಲಯ ಜಾಮೀನುರಹಿತ ವಾರೆಂಟ್ ಹೊರಡಿಸಿದೆ. ಇದು ರಾಖಿಗೆ ಬಂಧನ ಭೀತಿ ತಂದಿದೆ .
ಹಿಂದೆಯೂ ವಾರೆಂಟ್ ಹೊರಟಿತ್ತು
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಖಿ ವಿರುದ್ಧ ಮಾರ್ಚ್ 9ರಂದು ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ವಿವಾದಿತ ನಟಿಯನ್ನು ಬಂಧಿಸಲು ಪಂಜಾಬ್ ಪೊಲೀಸರು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮುಂಬೈನಲ್ಲಿರುವ ಆಕೆಯ ನಿವಾಸಕ್ಕೆ ತೆರಳಿದ್ದರು. ಆದರೆ ಆಕೆ ಇರಲಿಲ್ಲ . ಪೊಲೀಸರು ಬರಿಗೈಯಲ್ಲಿ ವಾಪಾಸಾಗಿದ್ದರು.
ಏಪ್ರಿಲ್ 17ರಂದು ರಾಖಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದರು. ಈಗ ಹೊಸದಾಗಿ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ .. ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರೆಂಬ ಆರೋಪ ಸದ್ಯ ರಾಖಿಯ ತಲೆಯ ಮೇಲೆ ತೂಗುತ್ತಿದೆ .