ತಮಿಳುನಾಡು “ಶಶಿಕಲಾ” ಹಿಂದೆ ರಾಂಗೋಪಾಲ್ ವರ್ಮಾ ?

ಮೊನ್ನೆಮೊನ್ನೆಯಷ್ಟೇ  AIADMK ಜನರಲ್ ಸೆಕ್ರೆಟರಿ ಆಗಿ ಜಯಲಲಿತಾ ಆಪ್ತೆ ಸಸಿಕಲಾ ಆಯ್ಕೆಯಾಗುತ್ತಿದ್ದ ಹಾಗೆ ಇತ್ತ ತಮ್ಮ ಹೊಸ ಚಿತ್ರ  ” ಶಶಿಕಲಾ ” ನೊಂದಾಯಿಸಿದ್ದಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.

ಕನ್ನಡಕ್ಕೆ ಕಾಡುಗಳ್ಳ ವೀರಪ್ಪನ್ ಜೀವನ ಆಧರಿಸಿದ ಶಿವರಾಜ್ ಕುಮಾರ್ ಅಭಿನಯದ “ಕಿಲ್ಲಿಂಗ್ ವೀರಪ್ಪನ್” ನಂಥ ಯಶಸ್ವಿ ಚಿತ್ರ ಕೊಟ್ಟವರು ರಾಮ್ ಗೋಪಾಲ್ ವರ್ಮಾ. ನಿಜ ಜೀವನದ ಅದರಲ್ಲೂ ವಿವಾದಾತ್ಮಕ,  ವ್ಯಕ್ತಿಗಳ ಬದುಕನ್ನು ತೆರೆಗೆ ತರುವುದರಲ್ಲಿ ವರ್ಮಾ ನಿಷ್ಣಾತರು.

ramgopal

 ಶಶಿಕಲಾ ಬಂದದ್ದು..

ಜಯಲಲಿತಾ ಬದುಕನ್ನು ಜಯಲಲಿತಾ ಕಣ್ಣಿನಿಂದ ನೋಡುವುದಕ್ಕಿಂತ ಆಪ್ತ ಗೆಳತಿ, ಬಹುಕಾಲದ ಒಡನಾಡಿ ಸಸಿಕಲಾ ದೃಷ್ಟಿಯಿಂದ ನೋಡಿದರೆ ಇನ್ನೂ ಉತ್ತಮ. ಜಯಲಲಿತಾ ಬಗ್ಗೆ ನನಗೆ ಗೌರವ ಇದೆ. ಆದ್ರೆ ಅದಕ್ಕಿಂತ ಒಂದು ಪಟ್ಟು ಹೆಚ್ಚು ಗೌರವ ಸಸಿಕಲಾ ಅವರ ಮೇಲಿದೆ. ನನ್ನ ಸಿನಿಮಾಗೂ ಅವರ ನಿಜದ  ರಾಜಕೀಯ ಬದುಕಿಗೂ ಯಾವ ಸಂಬಂಧವಿಲ್ಲ. ಇದೊಂದು ಕಾಲ್ಪನಿಕ ಚಿತ್ರ. 

jaya_sasikala1

ಹೀಗೆ ಟ್ವೀಟ್ ಮಾಡಿರುವ ವರ್ಮಾ ಮತ್ತೊಂದು ಕಡೆ ಶಶಿಕಲಾ ಸಿನಿಮಾ ಅಮ್ಮ(ಜಯಲಲಿತಾ) ಜೊತೆಗಿನ ಸುದೀರ್ಘ ಪಯಣದ ಸಸಿಕಲಾ ಜೀವನಗಾಥೆ ಅಂತಾನೂ ಹೇಳಿದ್ದಾರೆ. ಚಿತ್ರಕ್ಕಾಗಿ 59 ವರುಷದ ಸಸಿಕಲಾರನ್ನು ಕಳೆದ ನಾಲ್ಕು ದಶಕಗಳಿಂದ ಬಲ್ಲ ಜನರನ್ನು ಸಂಪರ್ಕಿಸಿ ವಿಷಯ ಸಂಗ್ರಹಿಸುವ ಯೋಜನೆ ವರ್ಮದ್ದು.

ಈ ಮಧ್ಯೆ ಸಿನಿಮಾ ಹೆಸರು ರಿಜಿಸ್ಟರ್ ಮಾಡಿಸುವಾಗ ಸಣ್ಣ ಬುದ್ಧಿವಂತಿಕೆ ಉಪಯೋಗಿಸಿದಂತಿದೆ. ಜಯಲಲಿತಾ ಆಪ್ತೆಯ ಹೆಸರು ಸಸಿಕಲಾ . ವರ್ಮಾ sasikala ಗೆ ” h” ಸೇರಿಸಿ  Shashikala ಮಾಡಿದ್ದ್ದಾರೆ. ಕಿರಿಕ್ಕುಗಳಾದ್ರೆ ಸಮರ್ಥನೆಗೆ  ಇರಲಿ ಅಂತಲೂ ಇರಬಹುದು.

ಕಲ್ಪಿಸಿಕೊಂಡು ಕಥೆ ಹೆಣೆಯುವುದಕ್ಕಿಂದ ಕಣ್ಣೆದುರು ಸಂಘರ್ಷದ  ಜೀವನ ಮಾಡಿದ ವ್ಯಕ್ತಿಗಳ ಬದುಕನ್ನೇ ಚಿತ್ರಕಥೆ ಮಾಡಿದರೆ ಹೆಚ್ಚು ಭಾವನಾತ್ಮಕವಾಗಿರುತ್ತದೆ . ನೋಡುವವರ ಮನಸ್ಸಿಗೆ ಆಪ್ತವಾಗಿಸುವುದು ಸುಲಭ ಅಂತ ನಂಬಿರುವ ವರ್ಮಾ ಈಗ ಸಸಿಕಲಾ ಬದುಕಿನ ಹಿಂದೆ ಬಿದ್ದು ಶಶಿಕಲಾ ಮಾಡಲು ಹೊರಟಿದ್ದಾರೆ.

jaya-sasikala

ಜಯಲಲಿತಾ -ಸಸಿಕಲಾ ಮೊದಲ ಭೇಟಿಯಿಂದ ಹಿಡಿದು ಅಮ್ಮ ಸಾವಿನ ತನಕ ಸಿನಿಮಾ ತರುವ ಯೋಚನೆ ಮಾಡಿರುವ ರಾಮ್ ಸದ್ಯ ಕಥೆ ಹೆಣೆಯುವ ಕಾಯಕದಲ್ಲಿ ಮಗ್ನ.

ತಮಿಳರ ಹೃದಯಕ್ಕೆ ಹತ್ತಿರದ ಚಿತ್ರ ಶಶಿಕಲಾ ಅಂದಿರುವ ವರ್ಮಾ ಕೇವಲ ತಮಿಳಿಗೆ  ಮಾತ್ರ ಸೀಮಿತ ಮಾಡ್ತಾರೋ  ಅಥವಾ ತೆಲುಗು,ಹಿಂದಿಯಲ್ಲೂ ತರುತ್ತಾರೋ ಅನ್ನುವುದಿನ್ನು ನಿರ್ಧಾರವಾಗಿಲ್ಲ.

ಸಸಿಕಲಾ -ರಾಂಗೋಪಾಲ್ ವರ್ಮಾ ನಡುವೆ ಇರುವ ಸಾಮಾನ್ಯ ಸಂಗತಿ ಅಂದ್ರೆ ಇವರಿಬ್ಬರೂ ವಿಡಿಯೋ  ಕ್ಯಾಸೆಟ್ ಯುಗದಲ್ಲಿ ವಿಡಿಯೋ ಲೈಬ್ರರಿ ಅಂಗಡಿ ನಡೆಸುತ್ತಿದ್ದವರು.

ಹೆಸರಿನಲ್ಲೇ ರಾಮ ಇರೋದ್ರಿಂದ ರಾಮ ಮಂತ್ರ ಜಪಿಸುತ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ಸದ್ಯಕ್ಕಂತೂ ಶಶಿಕಲಾ ಜಪ ಮಾಡ್ತಿದ್ದಾರೆ ರಾಂಗೋಪಾಲ್ ವರ್ಮಾ.

 

 

-Ad-

Leave Your Comments