ಪ್ರಥಮ್ ಅಂಡ್ ಗ್ಯಾಂಗ್‌ಗೆ ಬೆದರಿದ ರಾಮಗೋಪಾಲ್ ವರ್ಮಾ..!?

ರಾಮಗೋಪಲ್ ವರ್ಮಾ, ಈ ವ್ಯಕ್ತಿ ಸಿನಿಮಾ ಮಾಡಿ ಅದೆಷ್ಟು ಹೆಸರು ಗಳಿಸಿದ್ದಾರೋ ಅಷ್ಟೇ ಅಪಖ್ಯಾತಿಯನ್ನು ತಾನು ಮಾಡುವ ಕಾಮೆಂಟ್‌ಗಳಿಂದಲೂ ಗಳಿಸಿದ್ದಾರೆ. ಕನ್ನಡದಲ್ಲಿ ನಟ ಶಿವರಾಜ್‌ಕುಮಾರ್ ಅಭಿನಯದಲ್ಲಿ ಮೂಡಿಬಂದ ಕಿಲ್ಲಿಂಗ್ ವೀರಪ್ಪನ್ ಚಿತ್ರ ನಿರ್ದೇಶನ ಮಾಡಿದ ಬಾಲಿವುಡ್ ನಿರ್ದೇಶಕರಿವರು.. ಇತ್ತೀಚೆಗೆ ಬಾಹುಬಲಿ ಸಿನಿಮಾಗೆ  ಕರ್ನಾಟಕದಲ್ಲಿ ಭಾರೀ ಯಶಸ್ಸು ಕೊಟ್ಟಿದ್ದಾರೆ, ಕರ್ನಾಟಕದಲ್ಲಿ ಬೇರೆ ಭಾಷೆ ಸಿನಿಮಾಗಳನ್ನು ಎರಡು ಮೂರು ಬಾರಿ ನೋಡ್ತಾರೆ. ಕನ್ನಡಿಗರಿಗೆ ಸ್ವಾಭಿಮಾನ ಇಲ್ಲ ಅಂತಾ ಟ್ವೀಟ್ ಮಾಡುವ ಮೂಲಕ ಕನ್ನಡಿಗರ ಕಣ್ಣು ಕೆಂಪಾಗುವಂತೆ ಮಾಡಿದ್ದರು. ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಬಾಲಿವುಡ್ ಜನರಿಗೆ ಯಾವಾಗಲೂ ಮಾಧ್ಯಮಗಳಲ್ಲಿ ಚರ್ಚಾ ವಿಷಯ ಅವರೇ ಆಗಿರಬೇಕು, ಜನ ನಮ್ಮ ಬಗ್ಗೆ ಯಾವಾಗಲೂ ಮಾತನ್ನಾಡುತ್ತಾ ಇರಬೇಕು ಅನ್ನೋದು ಖಯಾಲಿ. ಅದೇ ರೀತಿ ನಿರ್ದೇಶಕ ರಾಮಗೋಪಾಲ ವರ್ಮಾ ಕೂಡ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡುವ ಮೂಲಕ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಆಮೇಲೆ ಕ್ಷಮಾಪಣೆಯನ್ನೂ ಕೇಳಿಕೊಂಡಿದ್ರು. ೮ ವರ್ಷಗಳ ಕಾಲ ವಿವಾದಗಳನ್ನೇ  ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್‌ನಿಂದ ಹೊರಬಂದಿದ್ದಾರೆ. ನಾನಿನ್ನು ಟ್ವಿಟ್ಟರ್‌ನಲ್ಲಿ ಸಿಗೋದಿಲ್ಲ, ಇನ್ಸ್‌ಟ್ರಾಗ್ರಾಮ್‌ನಲ್ಲಿ ಸಿಗ್ತೇನೆ ಅಂತಾ ಹೇಳಿಕೊಂಡಿದ್ದಾರೆ.

ciniadda.com  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಅಪ್ರಬುದ್ಧ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿತ್ತು.  ಬಿಗ್ ಬಾಸ್ – ೪ ಕಾರ್ಯಕ್ರಮದ ವಿನ್ನರ್ ಪ್ರಥಮ್ ಬಳಿಯೂ  ಈ ಬಗ್ಗೆ ನೇರವಾಗಿ ಮಾತನಾಡಿಸಿ ಲೈವ್ ಟೆಲಿಕಾಸ್ಟ್ ಮಾಡಲಾಗಿತ್ತು. ಅವರೂ ಕೂಡ ರಾಮ್ ಗೋಪಾಲ್ ವರ್ಮಾರನ್ನು ರಾಮ್ ಗೋಪಾಲ್ ಕರ್ಮಾ, ಕನ್ನಡಿಗರನ್ನು ಕೆಣಕಬೇಡಿ, ಕನ್ನಡಿಗರಿಗೆ ತಾಳ್ಮೆಯಿದೆ, ಅದನ್ನು ಕಳೆದುಕೊಂಡರೆ ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ. ನಾನು ನಿಮ್ಮ ಜೊತೆ ಬಾತ್‌ರೂಮ್‌ನಲ್ಲಿ ಫೋಟೋ ತೆಗೆಸಿಕೊಂಡು ದೊಡ್ಡ ತಪ್ಪು ಮಾಡಿದ್ದೇನೆ. ಆ ಫೋಟೋವನ್ನು ಇವತ್ತೇ ಡಿಲೀಟ್ ಮಾಡ್ತೇನೆ ಅಂತಾ ಕಟುವಾಗಿ ಟೀಕಿಸಿದ್ರು.

ಇದೀಗ ಟ್ವಿಟ್ಟರ್‌ನಿಂದ ಹೊರಹೋಗುವ ಮುನ್ನ ರಾಮ್ ಗೋಪಾಲ್ ವರ್ಮಾ ಟ್ರೋಲ್‌ಗಳ ಕಾಟ ಜಾಸ್ತಿಯಾಗಿದೆ. ನಾನಿನ್ನು ಪಿಕ್ಚರ್ ಹಾಗೂ ವೀಡಿಯೋಗಳ ಮೂಲಕ ಇನ್ಸ್‌ಟ್ರಾಗ್ರಾಮ್‌ನಲ್ಲಿ ಮಾತನಾಡ್ತೇನೆ. ಟ್ವಿಟ್ಟರ್ ಸಾವಿಗೂ ಮುನ್ನ ಇದು ನನ್ನ ಕಡೆಯ ಮೆಸೇಜ್.. ಆದ್ರೆ ನಾನು ಇದಕ್ಕೆ ಸಂತಾಪ ಸೂಚಿಸಲ್ಲ @ಆರ್‌ಜಿವಿಜೂಮ್‌ಇನ್ ಬರ್ತ್: ಮೇ ೨೭, ೨೦೦೯, ಡೆತ್ ಮೇ ೨೭ ೨೦೧೭ ಅಂತಾ ಬರೆದುಕೊಂಡಿದ್ದಾರೆ. ಆದರೆ ಕರ್ನಾಟಕದ ಬಗ್ಗೆ ಮಾತನಾಡಿದ್ದಕ್ಕೆ ಟ್ರೋಲ್ ಮಾಡಲಾಗಿದೆ ಅನ್ನೋದನ್ನು ಹೇಳೋಕೆ ಮರೆತುಬಿಟ್ಟಿದ್ದಾರೆ ಅನ್ಸುತ್ತೆ. ಏನೇ ಆಗಲಿ ಇಷ್ಟುದಿನ ಇರಲಾರದವರು ಮೈ ಪರಚಿಕೊಂಡರು ಅನ್ನೋ ಹಾಗೆ ಟ್ವಿಟ್ಟರ್‌ನಲ್ಲಿ ಮಂಗಾಟ ಆಡ್ತಿದ್ದ ಬಾಲಿವುಡ್‌ನ ಖ್ಯಾತ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್‌ನಿಂದ ಹೊರಹೋಗಿದ್ದಾರೆ. ಇನ್ಸ್‌ಟ್ರಾಗ್ರಾಮ್‌ನಲ್ಲಿ ಇನ್ನೇನು ಮಾಡ್ತಾರೋ ಆ ದೇವರೇ ಬಲ್ಲ. ಇತ್ತಿಚಿಗಷ್ಟೇ ಖ್ಯಾತ ಬಹುಭಾಷಾ ಗಾಯಕ ಸೋನು ನಿಗಮ್ ಕೂಡ ಟ್ವಿಟ್ಟರ್‌ನಿಂದ ಹೊರಹೋಗಿದ್ದರು.

ಸರ್ವಸಮರ್ಥ, ನಾಗಮಂಗಲ

-Ad-

Leave Your Comments