ಹೊಸ ಪ್ರಯೋಗದತ್ತ ಬರ್ಫೀ ಬಾಯ್ ರಣಬೀರ್ ಕಪೂರ್..

ಒಂದ್ರ ಹಿಂದೊಂದು ಸಿನಿಮಾ ಸೋತಿದ್ದೇ ಸೋತಿದ್ದು ಬಿಟೌನ್‍ನ ಈ ಹ್ಯಾಂಡ್‍ಸಮ್ ಹೀರೋ ಅಲರ್ಟ್ ಆಗ್ಬಿಟ್ಟಿದ್ದಾರೆ. ಅಂತಿಂಥ ಸ್ಟೋರಿಗಳನ್ನ ಇವ್ರು ಒಪ್ಪಿಕೊಳ್ತಿಲ್ಲ. ಸಕ್ಸಸ್‍ನ ಅಲೆಯಲ್ಲಿ ತೇಲ್ತಿರೋ ನಿರ್ದೇಶಕರೇ ಕಥೆ ಹೇಳ್ಬೇಕಿದೆಯಂತೆ. ಇಂತಹ ಪ್ರಯತ್ನದಲ್ಲೊಂದು ವಿಶಿಷ್ಟ ಪಾತ್ರ ಇವ್ರ ಕೈಗೆ ಸಿಕ್ಕಿದೆಯಂತೆ. ಅಂದ್ಹಾಗೆ ಈ ನಾಯಕನಿಗೆ ಈ ಬಾರಿ ಆಕ್ಷನ್ ಕಟ್ ಹೇಳ್ತಿರೋದು ಪೀಕು ಚಿತ್ರದ ಡೈರೆಕ್ಟರ್ ಸುಜಿತ್ ಸರ್ಕಾರ್.

ಮತ್ತೊಂದು ಪ್ರಯೋಗದತ್ತ ಬರ್ಫೀ ಹುಡುಗ ರಣಬೀರ್ ಕಪೂರ್..

ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಹೊಸ್ತಿಲಲ್ಲಿ ರಣಬೀರ್ ಕಪೂರ್ ತನ್ನ ಅಜ್ಜನನ್ನ ಮೀರಿಸ್ತಾನೆ ಅಂತ್ಲೇ ಬಲವಾಗಿ ನಂಬಲಾಗಿತ್ತು. ಬಿಟೌನ್‍ನಲ್ಲಿ ರಣಬೀರ್ ಮೂಡಿಸಿದ ಭರವಸೆ ಹಾಗಿತ್ತು.. ಆದ್ರೆ ಇತ್ತೀಚೆಗ್ಯಾಕೋ ಈ ನಟನ ಸಿನಿಮಾಗಳು ಬಾಕ್ಸ್ ಆಫೀಸ್‍ನಲ್ಲಿ ಮೋಡಿ ಮಾಡೋದನ್ನೇ ನಿಲ್ಲಿಸಿವೆ. ಮೊನ್ನೆ ತಾನೆ ತೆರೆಕಂಡ ಇಮ್ತಿಯಾಸ್ ಅಲಿ ನಿರ್ದೇಶಿಸಿದ ತಮಾಷ ಕೂಡ ಗಲ್ಲಿ ಪೆಟ್ಟಿಗೆ ಮಗುಚಿಕೊಳ್ತು. ಅಲ್ಲಿಂದ ಈ ನಟನ ವರಸೆ ಬದ್ಲಾಗಿದೆ ಅಂತ್ಲೇ ಮಾತು.

ಹಾಗ್ನೋಡೋಕೆ ಹೋದ್ರೆ, ಬಿಟೌನ್‍ನಲ್ಲಿ ಪಾತ್ರಗಳಲ್ಲೂ ಮತ್ತು ಸ್ಟೋರಿಯಲ್ಲೂ ಎಕ್ಸ್‍ಪೆರಿಮೆಂಟ್ ಮಾಡ್ತಿರೋ ನಾಯಕರಲ್ಲಿ ಮುಂದಿರೋದು ರಣಬೀರ್ ಕಪೂರ್. ತಮಾಷಗೂ ಮುನ್ನ ತೆರೆಕಂಡ ರಾಯ್ ಕೂಡ ಇವ್ರ ಕೆರಿಯರ್‍ನಲ್ಲಿ ಪ್ರಯೋಗವಾದ ಸಿನಿಮಾವೇ. ಆದ್ರೆ ಜನ ಯಾಕೋ ಈ ಚಿತ್ರವನ್ನ ಇಷ್ಟ ಪಡದೆ ಪಕ್ಕಕ್ಕೆ ತಳ್ಳಿ ಬಿಟ್ರು. ಹೀಗಾಗಿ ರಣ್ಬೀರ್ ತನ್ನ ಲವ್ ಸ್ಟೋರಿ, ಬ್ರೇಕ್ ಸುದ್ದಿಗಳಿಗೆ ತಿಲಾಂಜಲಿ ಹೇಳಿ ಹೊಸ ಆಲೋಚನೆಯಲ್ಲಿ ತೊಡಗಿದ್ದಾರಂತೆ. ಅದ್ರ ಮೊದಲ ಹೆಜ್ಜೆಯೇ. ಫೀಕು ನಿರ್ದೇಶಕ ಶೂಜಿತ್ ಸಿರ್ಕಾರ್ ಸಿನಿಮಾಗೆ ಸಹಿ ಹಾಕಿರೋದು.

ರಣಬೀರ್ ಕೇವಲ ಸಿನಿಮಾದಲ್ಲಷ್ಟೇ ಅಲ್ಲ. ಆಟ ಆಡೋದ್ರಲ್ಲೂ ಫೇಮಸ್ಸು ಅಂತ ಈಗಾಗ್ಲೇ ನಿಮ್ಗೂ ಗೊತ್ತಾಗಿದೆ. ಇವ್ರ ಈ ವಿಶಿಷ್ಟ ಕಲೆಯನ್ನೇ ಮುಂದಿಟ್ಟುಕೊಂಡು ಕಥೆ ಹೆಣೆದಿದ್ದಾರೆ ಶೂಜಿತ್ ಸಿರ್ಕಾರ್. ಇನ್ನು ರಣ್ಬೀರ್ ಯಾವ ಆಟ ಆಡ್ತಾರೆ ಅನ್ನೋದನ್ನ ಹೊಸದಾಗಿ ಹೇಳ್ಬೇಕಿಲ್ಲ. ಮೈದಾನಕ್ಕಿಳಿದರೆ ಆಯಾಸ ಮಾಡಿಕೊಳ್ಳದೆ ಲವಲವಿಕೆಯೊಂದಿರೋ ಛಲಗಾರ. ಹೌದು ನಾವು ಹೇಳ್ತಿರೋದು ರಣಬೀರ್ ಫುಟ್‍ಬಾಲ್ ಆಟದ ಬಗ್ಗೆ. ನಮ್ಮ ಸೀನಿಯರ್ ಕ್ರಿಕೆಟರ್ ತಂಡದೊಂದಿಗೆ ಕಾಲ್ಚೆಂಡಿನ ಕಾದಟಕ್ಕೆ ಇಳಿದಿದ್ದ ಈ ನಟ ಅಲ್ಲೂ ಹಂಡ್ರೆಡ್ ಪರ್ಸೆಂಟ್ ಪ್ರೇಕ್ಷಕರ ಮನಗೆದ್ದಿದ್ರು. ಅದೇ ಈಗ ಶೂಜಿತ್ ಸಿರ್ಕಾರ್ ಅವ್ರ ಸಿನಿಮಾದ ಕಾನ್ಸೆಪ್ಟ್.

ಬಿಟೌನ್ ಮಾಹಿತಿಯ ಪ್ರಕಾರ ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ಅತಿ ಉತ್ಸಾಹಿ ಫುಟ್‍ಬಾಲ್ ಪ್ಲೇಯರ್ ಆಗಿ ರಣ್ಬೀರ್ ಕಾಣಿಸಿಕೊಳ್ಳಲಿದ್ದಾರಂತೆ. ಅದಕ್ಕಾಗಿ ನಿರ್ದೇಶಕ ಶೂಜಿತ್ ಸಿರ್ಕಾರ್ ಕೂಡ ಈ ನಟನಿಗೆ ಫಿಟ್ನೆಸ್ ಹೆಚ್ಚಿಸಿಕೊಳ್ಳಲು ಸಲಹೆ ನೀಡಲಾಗಿದ್ಯಂತೆ. ಈ ಮೂಲಕನಾದ್ರೂ ರಣಬೀರ್ ಗೆ ಬ್ರೇಕ್ ಸಿಗ್ಬಹುದಾ? ಅನ್ನೊ ಪ್ರಶ್ನೆ ಎಲ್ಲರಲ್ಲೂ ಇದೆ.

-Ad-

Leave Your Comments