ರಂಗಿತರಂಗದ ಬೆಡಗಿ ಅವಂತಿಕಾಗೆ ಬರ್ತ್‌ಡೇ ಸಂಭ್ರಮ !

ರಂಗಿ ತರಂಗದಲ್ಲಿ ನೆನಪು ಕಳೆದು ಹೋದ ತನ್ನ ಗೆಳೆಯನನ್ನು ಹುಡುಕಿಕೊಂಡು ಹೋಗುವ ಅಮರ ಪ್ರೇಮಿಯಾಗಿ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದ ರಂಗ್‌ಬಿರಂಗಿ ಬೆಡಗಿ ಅವಂತಿಕಾ ಶೆಟ್ಟಿಗೆ, ಇಂದು ಬರ್ತ್‌ಡೇಸಂಭ್ರಮ.

avanthika
 ಅವಂತಿಕಾ ಶೆಟ್ಟಿ ಮೂಲತಃ ಮಂಗಳೂರಿನವರು, ಆದರೆ ಓದಿದ್ದು,ಸೆಟೆಲ್ ಆಗಿರುವುದು ಎಲ್ಲವೂ ಮುಂಬೈನಲ್ಲಿ.
ಸಾಕಷ್ಟು ಜಾಹಿರಾತುಗಳು, ಕಿರು ಚಿತ್ರಗಳಲ್ಲಿ ನಟಿಸಿ ಅನುಭವವಿದ್ದ ಇವರಿಗೆ ರಂಗಿತರಂಗ ಮೊದಲ ಸಿನಿಮಾ. ಆ ಸಿನಿಮಾದಲ್ಲಿ ಇವರ ಅಭಿನಯ ಮೆಚ್ಚಿಕೊಂಡ ಕನ್ನಡದ ಮಂದಿ ಇವರಗೆ ಸಾಲು ಸಾಲು ಆಫರ್‌ಗಳನ್ನಿಟ್ಟಿದ್ದಾರೆ.
ಮಂಗಳೂರಿನಲ್ಲಿ ನರ್ಸರಿ ಮಟ್ಟದ ವಿದ್ಯಾಭ್ಯಾಸ ಮುಗಿಸಿದ ಅವಂತಿಕಾ, ನಂತರ ಕುಟುಂಬದೊಡನೆ  ಮುಂಬೈಗೆ ಹೋಗಿ ಸೆಟಲ್ ಆದರು. ಅಲ್ಲಿ ಕಿರು ಚಿತ್ರಗಳು, ಧಾರಾವಹಿಗಳು ಸೇರಿಂದಂತೆ  ಸಾಕಷ್ಟು ಫೇಮಸ್ ಜಾಹಿರಾತುಗಳಲ್ಲಿ ಮಾಡೆಲ್ ಆಗಿ ವರ್ಕ್ ಮಾಡಿದ್ದರು.

 

ರಂಗಿತರಂಗ

 ರಂಗಿತರಂಗ ಸಿನಿಮಾಕ್ಕೆ ಆಯ್ಕೆಯಾಗಿದ್ದು ಅವರ ಅದೃಷ್ಟವೇ ಸರಿ. ಏಕೆಂದರೆ ಅವರಿಗಿಂತಲೂ ಮುಂಚೆ ಆ ಪಾತ್ರಕ್ಕಾಗಿ ಮಿಸ್ ಫೆಮಿನಾ, ಮಿಸ್ ಕರ್ನಾಟಕ ಸೇರಿದಂತೆ ಸುಮಾರು ೨೦೦ಕ್ಕೂ ಹೆಚ್ಚು ಹುಡುಗಿಯರಿಗೆ ನಿರ್ದೇಶಕ ಅನೂಪ್ ಬಂಢಾರಿ ಆಡಿಷನ್ ಮಾಡಿದ್ದರು. ಆದರೆ ಅವರಲ್ಲಿ ಯಾರನ್ನು ಸೆಲೆಕ್ಟ್ ಮಾಡದೆ, ಅವಂತಿಕಾ ಅವರ ಫೋಟೊ ನೋಡಿ ಅವರನ್ನು ಆಯ್ಕೆ ಮಾಡಿದ್ದರು.
avanthi (1)
ಅಲ್ಲು ಅರ್ಜುನ್ ಜತೆಯಲ್ಲಿ ಮ್ಯೂಸಿಕ್ ಆಲ್ಬಮ್ ಒಂದರಲ್ಲಿ ನಟಿಸಿದ್ದಾರೆ. ರಂಗಿತರಂಗದ ಯಶಸ್ಸು ಅವರಿಗೆ ತೆಲುಗು ತಮಿಳು, ಹಿಂದಿಯಿಂದಲೂ ಆಫರ್ ಬರುವಂತೆ ಮಾಡಿದೆ. ಆದರೆ ಸಧ್ಯ ಕನ್ನಡ ಚಿತ್ರಗಳನ್ನು ಬಿಟ್ಟು ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ.
ರಂಗಿತರಂಗ ಬಿಡುಗಡೆಯಾಗಿ ಯಶಸ್ವಿಯಾಗಿದ್ದೇ ತಡ, ಕನ್ನಡದ ಸಾಕಷ್ಟು ನಿರ್ಮಾಪಕರು ಅವರನ್ನು ಸಂಪರ್ಕಿಸಿದರು. ಆದರೆ ಪಾತ್ರಗಳಲ್ಲಿ ಏಕತಾನತೆ ಇರುವ ಕಾರಣ ಎಲ್ಲವನ್ನು ಒಪ್ಪಿಕೊಳ್ಳಲಿಲ್ಲ.

ಕಲ್ಪನಾ -೨

kalpana-2_146822657770
ಇತ್ತೀಚಿಗೆ ಬಿಡುಗಡೆಯಾದ ಕಲ್ಪನಾ-೨ ಚಿತ್ರದಲ್ಲಿ ವಿಭಿನ್ನ ಪಾತ್ರವನ್ನು ಅವರು ಪೋಷಣೆ ಮಾಡಿದ್ದರು.
ಅನುಮಪ್ ಖೇರ್ ನಟನಾ ಶಾಲೆಯಲ್ಲಿ ಆ್ಯಕ್ಟಿಂಗ್ ಕಲಿತಿರುವ ಅವಂತಿಕಾ, ಸಮೂಹ ಮಾಧ್ಯಮದಲ್ಲಿ ಪದವಿ ಪಡೆದಿದ್ದಾರೆ.
ಓದಿದ್ದು ಮಾಸ್ ಕಮ್ಯೂನಿಕೇಷನ್ ಆದ್ದರಿಂದ ಕಲ್ಪನಾ- ೨ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸಲು ಅನುಕೂಲವಾಯಿತು ಎಂದು ಹೇಳಿಕೊಂಡಿದ್ದಾರೆ.
ಇನ್ನು ಫಸ್ಟ್ ರಾಂಕ್ ರಾಜು ಖ್ಯಾತಿಯ ನರೇಶ್‌ಕುಮಾರ್ ಮತ್ತು ನಾಯಕನಟ ಗುರುನಂದನ್ ಅವರ ಕಾಂಬಿನೇಷನ್‌ನ ರಾಜು ರಂಗಿತರಂಗ, ಅನೂಪ್ ಭಂಡಾರಿಯ ರಾಜ ರಥ ಚಿತ್ರಗಳು ಅವಂತಿಕಾ ಕೈಯಲ್ಲಿವೆ.
ಇನ್ನೂ ಕೆಲವು ಡಿಸ್ಕಶನ್ ಹಂತದಲ್ಲಿವೆ.
ಒಟ್ಟಿನಲ್ಲಿ, ಅವಂತಿಕ ಮುಂದಿನ ದಿನಗಳಲ್ಲಿ ಉತ್ತಮ ನಾಯಕನಟಿ ಆಗುವುದರಲ್ಲಿ ಅನುಮಾನವಿಲ್ಲ.
ಮೂಲತಹ ಕನ್ನಡದ ಹುಡುಗಿಯಾದ ಇವರಿಗೆ,  ಒಳ್ಳೊಳ್ಳೆ ಪಾತ್ರಗಳನ್ನು ಸಿಕ್ಕಿ ಉತ್ತಮ ಕಲಾವಿದೆಯಾಗಿ ನಟಿಯಾಗಿ ಬೆಳೆಯಲಿ ಎಂದು ಆಶಿಸುತ್ತಾ…

ಹ್ಯಾಪಿ ಬರ್ತ್ಡೇ ಆವಂತಿಕಾ , ಹ್ಯಾವ್ ಎ ಗ್ರೇಟ್ ಡೇ !

ಚಿತ್ರಕೃಪೆ : ರಾಜರಥ ನಿರ್ದೇಶಕರಾದ ಅನೂಪ್ ಭಂಡಾರಿ ಅವರ ಟ್ವೀಟ್.
-Ad-

Leave Your Comments