ರಂಗೀತರಂಗ ಬಳಗದ ರಾಜರಥ ವಿಶೇಷ..!

ರಂಗಿತರಂಗ ಸಿನಿಮಾ ಅಂದ್ರೆ ನೆನಪಾಗೋದು ಭಂಡಾರಿ ಬ್ರದರ್ಸ್.. ಇದೀಗ ಮತ್ತೆ ಭಂಡಾರಿ ಬ್ರದರ್ಸ್ ರಂಗೀತರಂಗ ಬಳಿಕ ಒಟ್ಟಿಗೆ ಬರುತ್ತಿದ್ದಾರೆ.ಅದೂ ಕೂಡ ಸ್ಯಾಂಡಲ್‍ವುಡ್‍ಗೆ ರಾಜರಥದಲ್ಲಿ ಬರ‌್ತಿದ್ದಾರೆ. ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ ಚಿತ್ರ ರಾಜರಥದಲ್ಲಿ ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ, ಆರ್ಯ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..

ರಾಜರಥ ಚಿತ್ರದ ಫಸ್ಟ್ ಲುಕ್ ಹಾಗೂ ಟ್ರೈಲರ್​ ಈಗಾಗಲೇ ಬಿಡುಗಡೆಯಾಗಿ ರಂಗೀತರಂಗ ರೀತಿಯಲ್ಲೇ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಮಾರ್ಚ್ 23ರಂದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಬಿಡುಗಡೆಗೂ ಮೊದಲು ಮಾಡಬೇಕಾದ ಕೆಲಸಗಳನ್ನು ಚಿತ್ರತಂಡ ಪೂರ್ಣ ಮಾಡಿಕೊಳ್ತಿದೆ.

ರಂಗಿತರಂಗ ಚಿತ್ರತಂಡದ ಮತ್ತೊಂದು ಮೂವಿ ಎನ್ನುತ್ತಿದ್ದಂತೆ ಸಿನಿ ಪ್ರೇಕ್ಷರಲ್ಲಿ ಕುತೂಹಲ, ಕೌತುಕ ಹೆಚ್ಚಾಗ್ತಿದೆ. ರಂಗೀತರಂಗ ಚಿತ್ರಕ್ಕೆ ಯಾವುದೇ ಅಬ್ಬರದ ಪ್ರಚಾರವಿಲ್ಲದೆ ಗೆಲುವಿನ ನಗೆ ಬೀರಿರುವ ಚಿತ್ರತಂಡ, ರಾಜರಥ ಚಿತ್ರಕ್ಕೆ ಪ್ರಮೋಷನ್ ಮಾಡ್ತಿದೆ. ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚಿತ್ರವನ್ನು ಪ್ರಮೋಟ್ ಮಾಡಲು ಭಂಡಾರಿ ಬ್ರೋಸ್ ರೆಡಿಯಾಗಿದ್ದಾರೆ. ರಂಗೀತರಂಗ ರೀತಿಯಲ್ಲೇ ರಾಜರಥ ಗಾಂಧಿನಗರದ ಬೀದಿಗಳಲ್ಲಿ ಉಘೇ ಎಂದುಕೊಂಡು ಸಾಗುತ್ತಾ..? ಅಭಿಮಾನಿಗಳೇ ರಾಜರಥ ಮೆಚ್ಚಿಕೊಂಡು ಪ್ರಮೋಟ್ ಮಾಡ್ತಾರಾ ಅನ್ನೋ ಮಾತುಗಳು ಸಿನಿಲೋಕದಲ್ಲಿ ಕೇಳಲಾರಂಭಿಸಿವೆ..

ಜ್ಯೋತಿ ಗೌಡ, ನಾಗಮಂಡಲ

-Ad-

Leave Your Comments