ಅಪ್ಪನನ್ನು ನೆನಪಿಸುವ ಅಭಿಮಾನಿಗೆ ಮನಸೋತ ದರ್ಶನ್ !

ತಮ್ಮ ಇಷ್ಟದ ನಟ -ನಟಿಯ  ಹಾಗೆ ತಲೆ ಬಾಚಿಕೊಳ್ಳುವುದು, ಅವರು ಸಿನಿಮಾದಲ್ಲಿ ಹಾಕಿದ ಬಟ್ಟೆ ಥರದ್ದೇ ಉಡುಗೆ ಹಾಕಿಕೊಳ್ಳುವುದು , ಅವರ ಸ್ಟೈಲ್ ನಲ್ಲಿ ನಡೆಯುವುದು-ಮಾತಾಡುವುದು ಇದೆಲ್ಲ ಅಭಿಮಾನಿಗಳು  ಹಿಂದಿನಿಂದಲೂ ಮಾಡ್ತಾನೆ ಬಂದಿದ್ದಾರೆ. ಇತ್ತೀಚಿಗೆ ಮೆಚ್ಚಿನ ಕಲಾವಿದನನ್ನ ತಮ್ಮ ಕೈ ಮೇಲೆ ಹಚ್ಚೆ ಹಾಕಿಸಿಕೊಂಡ ಅಭಿಮಾನಿಯೊಬ್ಬನ ಅಭಿಮಾನದ ಹಚ್ಚೆ ಟ್ರೆಂಡ್ ಆಗಿದೆ.

ಯಾರೀ ಅಭಿಮಾನಿ ? ಯಾರಿಗೆ ಈತ ಅಭಿಮಾನಿ ? 

ಮಧ್ಯ ವಯಸ್ಸಿನ ಶ್ಯಾಮ್ ಬೆಂಗಳೂರಿನವರು. ಚಿಕ್ಕಂದಿನಿಂದಲೂ ತೂಗುದೀಪ ಶ್ರೀನಿವಾಸ್ ಅವರ ಅಪ್ಪಟ ಅಭಿಮಾನಿ. ಅವರು ಗಹಗಹಿಸಿ ನಗುತ್ತಿದ್ದ ಪರಿ ಇಂದು ನೋಡಿದ್ರೂ ನಡುಗುವಂತಿದೆ. ಅಂಥಾ ಅಪರೂಪದ ಖಳನಾಯಕ ತೂಗುದೀಪ ಶ್ರೀನಿವಾಸ್ ಡಾ. ರಾಜ್ ಕುಮಾರ್ ಅವರಿಂದಲೂ ಪ್ರಶಂಸೆ ಗಳಿಸಿದ್ದರು. ಕಾಲ ಸರಿದು ಕಾಲನ ವಶವಾದರೂ ತೂಗುದೀಪ ಶ್ರೀನಿವಾಸ್ ಶ್ಯಾಮ್ ರಂತಹ ಅಭಿಮಾನಿಯನ್ನು ಪಡೆದಿದ್ದಾರೆ ಎಂದರೆ ಅವರೆಂಥಹ ಅದ್ಭುತ ಕಲಾಕಾರ ಅಲ್ಲವೇ !

ಶ್ಯಾಮ್  ತಮ್ಮ ತೋಳಿನ ಮೇಲೆ ತೂಗುದೀಪ್ ಶ್ರೀನಿವಾಸ್ ಅವರ ಸೊಗಸಾದ ಹಚ್ಛೆ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ತೂಗುದೀಪ್  ಪುತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪ್ರೀತಿಯೊಂದು ಚಿತ್ರವನ್ನು ತಪ್ಪದೆ ನೋಡುತ್ತಾರೆ. ಅಷ್ಟು ಮಾತ್ರವಲ್ಲದೆ ಚಿತ್ರ ಬಿಡುಗಡೆಯ ದಿನ ಹಬ್ಬ ಆಚರಿಸಿ ಸಂಭ್ರಮಿಸುತ್ತಾರೆ.

ದರ್ಶನ್ ಅಂದ್ರೆ ಶ್ಯಾಮ್ ಗೆ ವೀಪರೀತ ಪ್ರೀತಿ. ತಮ್ಮ ಹೆಸರಿನ ಜೊತೆಗೆ ಗಜ ತೂಗುದೀಪ ಸೇರಿಸಿ ,ಶ್ಯಾಮ್ ಗಜ ತೂಗುದೀಪ ಆಗಿದ್ದಾರೆ. ಹಚ್ಚೆ ಹಾಕಿಸಿಕೊಂಡ ಮೇಲೆ ದರ್ಶನ್ ಭೇಟಿ ಮಾಡಿ ತಮ್ಮ ಅಭಿಮಾನ ತೆರೆದು ತೋರಿದ್ದಾರೆ. ದರ್ಶನ್ ಕೂಡ ಅಭಿಮಾನಿಯೇ ಪ್ರೀತಿಗೆ ಸೋತಿದ್ದಾರೆ ಎನ್ನಲಡ್ಡಿಯಿಲ್ಲ.
ಶ್ಯಾಮ್ ಹಾಕಿಸಿಕೊಂಡ ಹಚ್ಚೆ ಗೆ ಮರುಳಾಗಿರುವ ದರ್ಶನ್ ಅಭಿಮಾನಿ ಬಳಗ ತಾವು ಹಚ್ಚೆ ಹಾಕಿಸಿಕೊಳ್ಳುವ ಭರದಲ್ಲಿದ್ದಾರೆ.

-Ad-

Leave Your Comments