“ಕಿರಿಕ್” ಸಾನ್ವಿ ಈಗ ಟಾಲಿವುಡ್ ಬೆಡಗಿ

ಕಿರಿಕ್ ಪಾರ್ಟಿ ಸಾನ್ವಿ ಮುಖದ ತಣ್ಣನೆಯ ಚೆಲುವಿಗೆ ಮಾರುಹೋಗದವರಿಲ್ಲ. ಸಾನ್ವಿ  ಅಂದ್ರೆ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ನಲ್ಲಿ ಆಹಾ ಸುಂದರಿ ..ಅನ್ನಿಸಿಕೊಂಡು  ಈಗ ಟಾಲಿವುಡ್ ಬೆಡಗಿಯಾಗಲು ಹೊರಟಿದ್ದಾರೆ.

ಕಿರಿಕ್ ಪಾರ್ಟಿ ನಂತರ  ತೆಲುಗಿನಲ್ಲಿ ಆಫರ್ ಗಳ ಮಳೆಯೇ ಹರಿಯುತ್ತಿದೆಯಂತೆ . ಆದ್ರೆ ಇದುವರೆಗೂ ಎಲ್ಲೂ ಗುಟ್ಟು ಬಿಟ್ಟುಕೊಡದ ರಶ್ಮಿಕಾ ಸೈಲೆಂಟ್ ಗೇ ಟಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ನಾಗಶೌರ್ಯ ಜೊತೆ ಸ್ಕ್ರೀನ್  ಶೇರ್ ಮಾಡ್ತಿರುವ ರಶ್ಮಿಕಾ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಈ ಚಿತ್ರದ ಮುಹೂರ್ತ ಕೂಡ ಅದ್ಧೂರಿಯಾಗೆ ನೆರವೇರಿದೆ.

ಈ ಚಿತ್ರಕ್ಕೆ ವೆಂಕಿ ಕುಡುಮುಲ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಇವರು ನಿರ್ದೇಶಕ ತ್ರಿವಿಕ್ರಮ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ರಂತೆ. ಇನ್ನೂ  ಹೆಸರಿಡದೆ ಇರೋ ಸಿನಿಮಾದಲ್ಲಿ ಕನ್ನಡದ ಹುಡುಗಿ ರಶ್ಮಿಕಾ ನಾಯಕಿ. ಎಲ್ಲವೂ ಅಂದುಕೊಂಡಂತೆ ಆದ್ರೆ ಈ ತಿಂಗಳ ಕೊನೆಯಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ.

ಇನ್ನೊಂದ್ ಸ್ಪೆಷಲ್ ಸುದ್ದಿ ಏನಪ್ಪಾ ಅಂದ್ರೆ   ಅಲ್ಲು ಅರ್ಜುನ್ ಅವರ ಚಿತ್ರದಲ್ಲು ನಾಯಕಿ ಪಾತ್ರಕ್ಕೆ ರಶ್ಮಿಕಾ ಅವರಿಗೆ ಬುಲಾವ್ ಬಂದಿದ್ಯಂತೆ. ಸದ್ದಿಲ್ಲದೆ ಸುದ್ದಿಯಲ್ಲಿರೋ ರಶ್ಮಿಕಾ ಅವರ ಸಿನಿ ಜರ್ನಿ ಜಬರ್ದಸ್ತಾಗಿ ನಡೆಯಲಿ.

_ಪಲ್ಲವಿ

-Ad-

Leave Your Comments