ರಶ್ಮಿಕಾ ಮಂದಣ್ಣ – ರಕ್ಷಿತ್ ಶೆಟ್ಟಿ ಫ್ಯಾನ್ಸ್ ಜಟಾಪಟಿ ?

ಕೊನೆಗೂ ಕನ್ಫರ್ಮ್

ಜುಲೈ 3ರಂದು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಎಂಗೇಜ್‌ಮೆಂಟು ಕುಶಾಲನಗರದಲ್ಲಿ ನಡೆಯಲಿದೆ. ಸಂಪ್ರದಾಯದ ಪ್ರಕಾರ ಎಂಗೇಜ್‌ಮೆಂಟು ಹುಡುಗಿಯ ಮನೆಯಲ್ಲಿ ನಡೆಯಬೇಕು. ಅದೇ ಥರ ರಶ್ಮಿಕಾ ಮಂದಣ್ಣ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ.

ಇಷ್ಟು ದಿನ ಈ ಸುದ್ದಿಯ ಬಗ್ಗೆ ನಾನಾ ತಕರಾರುಗಳಿದ್ದವು. ಬಹಳಷ್ಟು ಮಂದಿ, ಮಾಧ್ಯಮಗಳು ಸುಳ್ಳು ಹೇಳುತ್ತಿವೆ ಅಂತಲೇ ಅಂದುಕೊಂಡಿದ್ದರು. ಆದರೆ ಇದೀಗ ಎಲ್ಲರಿಗೂ ಸತ್ಯ ಗೊತ್ತಾಗಿದೆ.

ರಶ್ಮಿಕಾ, ರಕ್ಷಿತ್ ಕಾಲೆಳೆದ ಅಕುಲ್ ಬಾಲಾಜಿ

ಇತ್ತೀಚೆಗೆ ಕಿರಿಕ್ ಪಾರ್ಟಿಯ ೧೫೦ನೇ ದಿನದ ಸಂಭ್ರಮಾಚರಣೆ ನಡೆಯಿತು. ಆ ಕಾರ್ಯಕ್ರಮದ ಆಂಕರಿಂಗ್ ಮಾಡುತ್ತಿದ್ದದ್ದು ಅಕುಲ್ ಬಾಲಾಜಿ. ಅವರ ಕೈಗೆ ಯಾರಾದರೂ ಸಿಕ್ಕರೆ ಕೇಳೇಬೇಕೇ. ತಮಾಷೆ ಮಾಡಿ ಮಾಡಿ ಸುಸ್ತು ಮಾಡಿ ಬಿಡುತ್ತಾರೆ. ಅದರಲ್ಲೂ ಕಿರಿಕ್ ಪಾರ್ಟಿ ಸಿನಿಮಾದ ಕಾರ್ಯಕ್ರಮ ಬೇರೆ, ರಕ್ಷಿತ್ ಶೆಟ್ಟಿ ವೇದಿಕೆ ಮೇಲೆ ಬರುತ್ತಿದ್ದಂತೆಯೇ ಶುರು ಮಾಡಿದರು. ಜುಲೈ ೩ನೇ ತಾರೀಖಿಗೆ ಏನಾಗತ್ತೆ ಏನಾಗತ್ತೆ ಅಂತ ಕೇಳುತ್ತಿದ್ದರೆ ಅಲ್ಲಿ ನೆರೆದ ಜನ ಹೋ.. ಅಂತ ಬೊಬ್ಬೆ ಹಾಕುತ್ತಿದ್ದರು. ರಕ್ಷಿತ್ ಏನು ಹೇಳುವುದು ಅಂತ ತೋಚದೆ ಮಾತು ತೇಲಿಸಿಬಿಟ್ಟರು. ಆದರೆ ಅಕುಲ್ ಬಿಡಲಿಲ್ಲ. ಬೆಳಗ್ಗೆದ್ದು ಯಾರ ಮುಖ ನೋಡುತ್ತೀರಿ ಅಂತ ಕೇಳಿದರು. ಅವರು ಕೊಟ್ಟ ನಾಲ್ಕು ಆಯ್ಕೆಗಳಲ್ಲಿ ಒಂದನ್ನು ಆರಿಸಿದ ರಕ್ಷಿತ್ ಶೆಟ್ಟಿಯವರು ರಶ್ಮಿಕಾ ಮಂದಣ್ಣ ಎಂದರು. ಆಗ ಇಡೀ ಸಭೆಯಲ್ಲಿ ಭಾರಿ ಕರತಾಡನ.
ಅದರ ನಂತರ ಅಕುಲ್‌ಗೆ ಸಿಕ್ಕಿಕೊಂಡಿದ್ದು ರಶ್ಮಿಕಾ ಮಂದಣ್ಣ. ಆದರೆ ಅಕುಲ್ ಯಾವ ಥರ ಕೇಳಿದರೂ ರಶ್ಮಿಕಾ ಬಾಯಿ ಬಿಡಲಿಲ್ಲ. ಪದೇ ಪದೇ ಅದನ್ನೇ ಕೇಳುತ್ತಿರುವುದು ನೋಡಿ ಹುಸಿ ಕೋಪ ತೋರಿಸಿದರು. ಕಡೆಗೆ ಅಕುಲ್‌ಗೆ ಒಂದೆರೆಡು ಪೆಟ್ಟು ಕೊಟ್ಟು ನಗುತ್ತಾ ಹೋದರು.

ಕಿತ್ತಾಡಿಕೊಳ್ಳುತ್ತಿರುವ ಅಭಿಮಾನಿಗಳು

ಅವರಿಬ್ಬರ ಎಂಗೇಜ್ ಮೆಂಟ್ ಸುದ್ದಿ ಗೊತ್ತಾದ ಕ್ಷಣದಿಂದ ಸೋಷಿಯಲ್ ಮೀಡಿಯಾಗಳಲ್ಲಿ ಇಬ್ಬರ ಅಭಿಮಾನಿಗಳು ನೋವಲ್ಲಿ ಜಗಳಾಡಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅಭಿಮಾನಿಗಳೆಲ್ಲಾ ಹುಡುಗರು. ಅವರು ರಕ್ಷಿತ್‌ರಿಗೆ ನಮ್ ಹುಡುಗೇನೇ ಬೇಕಿತ್ತಾ ಗುರು ಎಂದು ಕೇಳುತ್ತಿದ್ದಾರೆ. ಕೆಲವರು ಬೈದುಕೊಂಡರೆ ಇನ್ನು ಕೆಲವರು ನೊಂದುಕೊಳ್ಳುತ್ತಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ಅಭಿಮಾನಿಗಳಂತೂ ರಶ್ಮಿಕಾ ತುಂಬಾ ಚಿಕ್ಕೋಳು, ಜೋಡಿ ಚೆನ್ನಾಗಿರಲ್ಲ ಅಂತೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ.

-Ad-

Leave Your Comments