ಕುರುಕ್ಷೇತ್ರಕ್ಕೆ ಕೃಷ್ಣನಾಗಿ ರವಿಚಂದ್ರನ್ ಆಗಮನ

ಮುನಿರತ್ನ ನಿರ್ಮಾಣದ ಭಾರೀ ಬಜೆಟ್ ಸಿನಿಮಾ ಕುರುಕ್ಷೇತ್ರ. ಕನ್ನಡದ ಸೂಪರ್ ಸ್ಟಾರ್ ಗಳನ್ನೆಲ್ಲ ಒಂದೇ ಚಿತ್ರದಲ್ಲಿ ತಂದು ಅದ್ದೂರಿ ಸಿನಿಮಾ  ಮಾಡಿ ಶಹಬ್ಬಾಸ್ ಅನ್ನಿಸಿಕೊಳ್ಳೋ ಇರಾದೆ ಮುನಿರತ್ನ ಅವರದ್ದು. ಮೊನ್ನೆ ಮೊನ್ನೆ ತಾನೇ ದುರ್ಯೋಧನನ ಪಾತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಪಕ್ಕಾ ಆದ್ಮೇಲೆ ಕೃಷ್ಣ ನ ಪಾತ್ರಕ್ಕೆ ಕ್ರೇಜಿ ಸ್ಟಾರ್ ಬರ್ತಾರೆ ಅನ್ನೋ ಸುದ್ದಿ ಅಂತೆ – ಕಂತೆಯಾಗಿ ಅಡ್ಡಾಡಿತ್ತು. ಅದೀಗ ನಿಜವಾಗಿದೆ.

ರವಿಚಂದ್ರನ್ ಕೊಳಲು ಹಿಡಿಯೋದಲ್ಲದೆ, ಕುರುಕ್ಷೇತ್ರದಲ್ಲಿ ಸಾರಥಿಯಾಗೋಕು ಸಿದ್ದರಾಗಿದ್ದಾರೆ. ಕೃಷ್ಣನಾಗಿ ಕ್ರೇಜಿ ಸ್ಟಾರ್  ಹೇಗೆ ಕಾಣ್ತಾರೆ? ಜೊತೆಗೆ ಇತ್ತೀಚೆಗೆ ಅಪ್ಪ -ಅಣ್ಣನ ಪಾತ್ರಗಳಲ್ಲಿ ಮಿಂಚಿ ಮೆಚ್ಚುಗೆಗೆ ಪಾತ್ರರಾಗಿದ್ದ  ರವಿಚಂದ್ರನ್ ಕೃಷ್ಣನಾಗಿ ಹೇಗೆ ಅಭಿನಯಿಸ್ತಾರೆ ಅನ್ನೋ ಕೂತೂಹಲ ಅಭಿಮಾನಿಗಳಿಗಂತೂ ಇದ್ದೇ ಇದೆ.

-Ad-

Leave Your Comments