ಅಭಿಮಾನಿಗಳ ಪ್ರೀತಿ ಬೇಕಿಲ್ವಾ ರವಿ ಮಾಮಾ?

ರವಿಚಂದ್ರನ್ ಅಂದ್ರೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಎಲ್ಲಿಲ್ಲದ ಅಭಿಮಾನ.. ಮಂಗಳವಾರ 56ನೇ ಹುಟ್ಟುಹಬ್ಬ ಸಂಭ್ರಮದಲ್ಲಿದ್ದ ರವಿಮಾಮನ ಮನೆ ಮುಂದೆ ನೂರಾರು ಅಭಿಮಾನಿಗಳು ನಿನ್ನೆ ರಾತ್ರಿಯೇ ಸಾಲುಗಟ್ಟಿ ನಿಂತಿದ್ರು.. ಆದ್ರೆ ಅದ್ಯಾಕೋ ಏನೋ ಪ್ರತಿವರ್ಷ ಅಭಿಮಾನಿಗಳನ್ನು ಅಭಿಮಾನದಿಂದ ನೋಡ್ತಿದ್ದ ಕ್ರೇಜಿಸ್ಟಾರ್ ರವಿಚಂದ್ರನ್, ಈ ವರ್ಷ ಅಭಿಮಾನಿಗಳ ಪಾಲಿಗೆ ವಿಲನ್ ರೀತಿ ಕಾಣಿಸಿಕೊಂಡಿದ್ದಾರೆ.. ಇದ್ಯಾಕಪ್ಪ ರವಿಮಾಮಾ ಮನೆ ಬಿಟ್ಟು ಹೊರಕ್ಕೇ ಬರಲಿಲ್ಲ ಅಂತಾ ಅಭಿಮಾನಿಗಳು ಕೇಕ್ ಸಮೇತ ಸಪ್ಪೆಮೋರೆ ಹಾಕಿಕೊಂಡು ಬಂದ ದಾರಿಗೆ ಸುಂಕವಿಲ್ಲ ಅನ್ನೋ ಹಾಗೆ ಜಾಗ ಖಾಲಿ ಮಾಡಿದ್ದಾರೆ.

ಸೀಜರ್ ಟೀಸರ್ ಬರ್ತ್ ಡೇ ಗಿಫ್ಟ್..!

ರಣಧೀರ ಅಭಿಮಾನಿಗಳ ಪಾಲಿಗೆ ರವಿಮಾಮಾ.. ಕರುನಾಡಿನ ಕನಸುಗಾರ.. ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆಗೆ ನಿರಾಕರಿಸಿದ್ದ ರವಿಮಾಮನಿಗೆ ಸೀಜರ್ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿ ಗಿಫ್ಟ್ ನೀಡಿದೆ.. ಈ ಚಿತ್ರದಲ್ಲಿ ಸ್ಯಾಂಡಲ್‍ವುಡ್‍ನ `ಕೃಷ್ಣ’ ಕರುನಾಡಿನ ಹೆಣ್ಣುಮಕ್ಕಳ ಪಾಲಿನ ಹೀರೋ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ರಾಜ್, ಚಿರಂಜೀವಿ ಸರ್ಜಾ, ಪಾರುಲ್ ಯಾದವ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ..

ಮನೆಮಂದಿ ಜೊತೆ ಸಂಭ್ರಮಿಸಿದ ರವಿ !

ಪ್ರೇಮಲೋಕದ ಈ ಮುದ್ದಿನ ರವಿ ಅಭಿಮಾನಿಗಳ ಜೊತೆ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರಾಕರಿಸಿದ್ರು. ಆದ್ರೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಮ್ಮ ಮನೆಯ ಜನರ ಜೊತೆ ಸರಳವಾಗಿ ಕೇಕ್ ಕತ್ತರಿಸಿ ಈ ಬಾರಿ ಸಿಂಪಲ್ ಬರ್ತ್ ಡೇ ಮಾಡಿಕೊಂಡಿದ್ದಾರೆ. ಆದ್ರೆ ಸಿನಿಮಾ ಸೋಲಿನಿಂದ ಅಭಿಮಾನಿಗಳ ಮೇಲೆ ಕೋಪ ಮಾಡಿಕೊಂಡಿದ್ದಾರಾ ?ಅನ್ನೋ ಪ್ರಶ್ನೆಗಳು ಜನರನ್ನು ಕಾಡುತ್ತಿವೆ.. ಏನೇ ಆಗಲಿ ಸಿನಿಮಾ ಸೋಲಲಿ ಗೆಲ್ಲಲಿ ರವಿಚಂದ್ರನ್ ಅಂದ್ರೆ ಅಭಿಮಾನಿಗಳಿಗೆ ಅದೇನೋ ಒಂದು ರೀತಿಯ ಕ್ರೇಜ್.. ಇನ್ಮುಂದಾದ್ರು ಅಭಿಮಾನಿಗಳಿಗೆ ರವಿಮಾಮ  ಬೇಸರ ಮಾಡದೆ ಇರಲಿ.

ಜ್ಯೋತಿ ಎಂ ಗೌಡ, ನಾಗಮಂಗಲ

-Ad-

Leave Your Comments