ಬಿಗ್ ಬಾಸ್ ನಲ್ಲಿ ಮೇಘಾ ಬಚಾವ್ ಆಗಿದ್ದು ಹೀಗಾ !?

ಬಿಗ್ ಬಾಸ್ ಸೀಸನ್ ಐದರ ಮೊದಲ ವಾರದ ಎಲಿಮಿನೇಷನ್ ಆಗಿದೆ. ಮೊದಲ ವಾರದ ಫರ್ಫಾಮೆನ್ಸ್ ಆಧಾರದಲ್ಲಿ ನೋಡಿದ್ರೆ ಕಣ್ಣೀರ ಹನಿ ಉದುರಿಸಿ ಕೊಡಗು ಸೇರಬೇಕಾಗಿದ್ದು ಮೇಘಾ. ಯಾಕಂದ್ರೆ ಆಕೆ ಕೆಟ್ಟವಳು ಎಂದಲ್ಲ. ಆದ್ರೆ ಆಕೆ ಮೊದಲ ವಾರದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಯಾರೊಂದಿಗೂ ಹೆಚ್ಚಾಗಿ ಬೆರೆಯಲಿಲ್ಲ. ಇದು ಮನೆಯವರು ಯಾರನ್ನು ಹೊರಗೆ ಕಳಿಸ್ತೀರಿ ಅಂದಾಗ ಅವರ ಹೇಳಿಕೆಯಿಂದಲೇ ಸ್ಪಷ್ಟವಾಯ್ತು. ಈ ಕಾರಣದಿಂದಲೇ ಬಹುತೇಕ ಮಂದಿ ಮನೆಯಿಂದ ಹೊರ ಕಳಿಸುವ ಹೆಸರಿಗೆ ಮೇಘಾ ಎಂದು ಉಸುರಿಬಿಟ್ಟರು..
ಆದರೆ ಬಿಗ್ ಬಾಸ್ ತೀರ್ಮಾನ ಬೇರೆಯೇ ಆಗಿತ್ತು. ಅದಕ್ಕೆ ಕಾರಣ ಮೇಘಾ ತೋರಿಸಿದ ಸಿಡಿಲು. ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ದಿನವೇ ನಾನು ತುಂಬಾ ರೆಬೆಲ್, ನನ್ನ ತಂಟೆಗೆ ಬಂದ್ರೆ ವೈಲೆಂಟ್ ಆಗ್ತೀನಿ ಅಂತ ಕಿಚ್ಚನ ಎದುರಿಗೆ ಹೇಳಿದ್ದ ಆ ಮಾತುಗಳು ಆಕೆಯನ್ನ ರಕ್ಷಣೆ ಮಾಡಿದೆ. ಈ ವಾರ ತುಂಬಾ ಸನಿಹ ಆಗಿದ್ರಿಂದ ವೈಲೆಂಟ್, ರೆಬೆಲ್ ಆಕ್ಷನ್ ಗೆ ಸಮಯ ಸಿಕ್ಕಿಲ್ಲ, ಮುಂದಿನ ವಾರ ಏನಾದರೂ ಆಗಲಿದೆಯಾ ಅನ್ನೋ ಕುತೂಹಲ ಬಿಗ್ ಬಾಸ್ ಅವರದ್ದು. ಆದ್ರೆ ಈ ವಾರ ಕೂಡ ಅದೆ ರೀತಿ ಪೆಚ್ಚು ಮೋರೆ ಹಾಕಿ‌ ಕುಳಿತರ ರಕ್ಷಣೆ ಯಾರೂ ಬರಲ್ಲ.
ಸುಮಾ  ಮನೆಯಿಂದ ಹೊರ ಬರಲು ಯಾವುದೇ ಕಾರಣ ಇರಲಿಲ್ಲ. ಯಾಕಂದ್ರೆ ಮನೆಮಂದಿ ಜೊತೆ ಮಾತನಾಡಿಕೊಂಡು ಕಾಲ ಕಳೆದಿದ್ರು, ಅವರು ತುಂಬಾ ಬೇಗನೇ ಬೇರೆಯವರ ಜೊತೆ ಬೆರೆಯುವ ಗುಣ ಹೊಂದಿ್ರು. ಆದ್ರೆ ಬಿಗ್ ಬಾಸ್ ನ ಅನಿವಾರ್ಯ. ಮೇಘಾ ಮಾತಲ್ಲೇ ತೋರಿಸಿರುವ  ಸಿಡಿಲು ಸುಮಾರನ್ನ ಔಟ್ ಮಾಡಿಸಿದೆ.. ಕನಸಾಗಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದ ಅವರ ಕನಸನ್ನ ಕನಸಾಗಿಯೇ ಇಟ್ಟು ಹೊರ ಬಂದಿದ್ದಾರೆ. ಈ ವಾರ ಮತ್ತಷ್ಟು ರೋಷ, ಸೇಡು, ಪ್ರೇಮ ಎಲ್ಲವೂ ತೆರೆದುಕೊಳ್ಳಲಿದೆ ಅನ್ನೋದು ಪಕ್ಕಾ..
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments