ಪುಟ್ಟಣ್ಣನ ಫಾಲೋ ಮಾಡ್ತಿದ್ದಾರಾ  ರಿಷಬ್ ಶೆಟ್ಟಿ ?!

ಕಥಾ ಸಂಗಮ! ಅಂದಾಕ್ಷಣ ನೆನಪಾಗೋದೆ ಪುಟ್ಟಣ್ಣ ಕಣಗಾಲ್ . ಅವರ ಸಿನಿಮಾ ಸೂತ್ರವೇ ಹಂಗೆ .ಕಾದಂಬರಿ ಆಧಾರಿತ ಚಿತ್ರಮಾಡಿ ಬಾಲಿವುಡ್ ಜನ ತಿರುಗಿ ನೋಡೋ ಹಾಗೆ ಮಾಡಿಕೊಂಡಿದ್ರು . ಕಥೆ ಹೆಣೆಯೋ ರೀತಿ ನಿಜಕ್ಕೂ ಅಚ್ಚರಿ ..ಅಂದಿನ ಕಾಲಕ್ಕೆ ಅವರು ಒಂದೇ ಚಿತ್ರದಲ್ಲಿ 3(ಹಂಗು ,ಅತಿಥಿ ,ಮುನಿತಾಯಿ ) ಕಥೆಗಳನ್ನ ಅಳವಡಿಸಿಕೊಂಡು ಕಥಾ ಸಂಗಮ ಎಂಬ ವಿಭಿನ್ನ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ರು ..

ಕಲ್ಯಾಣ್ ಕುಮಾರ್ ,ಬಿ ಸರೋಜಾದೇವಿ, ಆರತಿ , ರಜನಿಕಾಂತ್ ರಂಥ ಘಟಾನುಘಟಿಗಳ  ತಾರಾ ಬಳಗವನ್ನ ಒಳಗೊಂಡಿದ್ದ ಆ ಕಾಲದ ಕಥಾ ಸಂಗಮ ಈಗ ಮತ್ತೊಮ್ಮೆ ನೆನಪಿನ ಸುರುಳಿ ಬಿಚ್ಚಲಿಕ್ಕೆ  ಬರ್ತಿದೆ.
ಇದರ  ಸೂತ್ರದಾರ ರಿಷಬ್ ಶೆಟ್ಟಿ .

ಹಳೆ ಸಿನಿಮಾ ಇಟ್ಕೊಂಡು ಇವಾಗೇನ್ ಮಾಡ್ತಾರೆ ಅನ್ನೋ ಪ್ರಶ್ನೆ ಸಹಜ! ಆದ್ರೆ ಹಳೇ  ಟೈಟಲ್ ಹಿಡ್ಕೊಂಡು ಬರ್ತಿರೋ ರಿಷಬ್ ಕಂಪ್ಲೀಟ್ ಕಣಗಾಲ್ ಅವರನ್ನೇ ಫಾಲೋ ಮಾಡಿ ಅವರ ಪ್ರಯೋಗವನ್ನ ಮರುಪ್ರಯೋಗ ಮಾಡೋಕೆ  ಹೊರಟಿದ್ದಾರೆ..

ಮತ್ತೊಂದು ವಿಶೇಷ ಅಂದ್ರೆ ರಿಷಬ್ ಪಕ್ಕಾ  ಕಣಗಾಲ್ ಅವರ ಅಭಿಮಾನಿ ಅಂತೆ. ಹಾಗಾಗಿ ಈ ಸಿನಿಮಾ ಪುಟ್ಟಣ್ಣ ಅವರಿಗೆ ಡೆಡಿಕೇಟ್ ಅಂತಾರೆ ರಿಷಬ್ ಶೆಟ್ಟಿ

ಇಲ್ಲೇನಿದೆ ಅಂಥಾ ವಿಶೇಷ ?

 ಪುಟ್ಟಣ್ಣ ಅವರ ಕಥಾ ಸಂಗಮದಲ್ಲಿ 3 ಕಥೆಗಳಿದ್ವು ಆದ್ರೆ ರಿಷಬ್ ಅವರ ಸಂಗಮದಲ್ಲಿ 7 ಕಥೆ ಇರಲಿವೆ. ಅಷ್ಟೆ ಅಲ್ಲ ಒಂದೊಂದು ಕಥೆಗೂ ಒಬ್ಬೊಬ್ಬ ನಿರ್ದೇಶಕ ಅಂದ್ರೆ 7 ನಿರ್ದೇಶಕರು ಸಂಗಮವಾಗಲಿದ್ದಾರೆ..

ವಿಶೇಷ ಅಂದ್ರೆ ಆ 7 ನಿರ್ದೇಶಕರನ್ನ ರಿಷಬ್ ಸೋಷಿಯಲ್ ಮಿಡೀಯಾ ಮೂಲಕ ಆಯ್ಕೆ ಮಾಡ್ತಾರಂತೆ ..ಉತ್ತಮವೆನಿಸಿದ 7 ಕಥೆಗಳನ್ನ ಆರಿಸಿ ಅವರಿಂದಲೇ ಆ್ಯಕ್ಷನ್ ಕಟ್ ಹೇಳ್ಸೋಕು  ನಿರ್ಧರಿಸಿದ್ದಾರೆ..

ಆದ್ರೆ 7 ನಿರ್ದೇಶಕರನ್ನೊಳಗೊಂಡ ಚಿತ್ರಕ್ಕೆ ಹಣ ಹೂಡೋದು ಯಾರು? ಎಂಬ ಪ್ರಶ್ನೆಗೆ ಸದ್ಯದಲ್ಲೆ ಉತ್ತರಿಸ್ತಾರೆ ರಿಷಬ್ ಶೆಟ್ಟಿ.

-ಪಲ್ಲವಿ ಗೌಡ

-Ad-

Leave Your Comments