ರೋ ರೋ ರೋಮಿಯೋ … ಉಪ್ಪು ಹುಳಿ ಖಾರ ಸಕ್ಕತ್ತಾಗೆ ಐತೆ !

ಅಪ್ಪು ಧ್ವನಿಯಲ್ಲಿ ಹಾಡು ಹೇಳೋದು ಒಂಥರಾ ಚೆಂದ. ಅಲ್ಲೊಂದು ಮುಗ್ದತೆ ಇದೆ. ಪುನೀತ್ ರಾಜ್ ಕುಮಾರ್ ಹಾಡಿರುವ ಉಪ್ಪು ಹುಳಿ ಖಾರ ಸಿನಿಮಾದ ರೋ ರೋ ರೋಮಿಯೋ .. ತುಂಬಾ ಮಜವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ವಿಡಿಯೋ ಸಾಂಗ್ ಲಕ್ಷಕ್ಕೂ ಮೀರಿ ಜನರನ್ನು ಸೆಳೆದಿದೆ.

ಇಮ್ರಾನ್ ಸರ್ದಾರಿಯಾ ನಿರ್ದೇಶನ ಮಾಡಿರುವ ಉಪ್ಪು ಹುಳಿ ಖಾರ ಸಿನಿಮಾದ ಈ ಹಾಡಿನಲ್ಲಿ ಅನುಶ್ರೀ ಹಾಗು ಶರತ್ ನಟಿಸಿದ್ದಾರೆ. ಇವರಿಬ್ಬರ ಡ್ಯಾನ್ಸ್ ಮೋಡಿ ಮಾಡುವಂತಿದೆ. ಸಂಗೀತ ಕೂಡ ಕಿಕ್ ಕೊಡೋ ಹಾಗಿದೆ . ಅಷ್ಟೇ ಅಲ್ಲ ಹಾಡಿನ ದೃಶ್ಯ  ನೋಡಿದ ಅಪ್ಪು ಕೂಡ ಖುಷಿಯಾಗಿ ಹೆಜ್ಜೆ ಹಾಕಿದ್ದಾರೆ.

ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಪಡೆದಿರುವ ಉಪ್ಪು ಹುಳಿ ಖಾರ ಇದೇ ತಿಂಗಳ 24ಕ್ಕೆ ತೆರೆಗೆ ಬರಲಿದೆ ಅಂದಿದ್ದಾರೆ ನಿರ್ದೇಶಕ. ಮುಖ್ಯ ಪಾತ್ರದಲ್ಲಿರುವ ಮಾಲಾಶ್ರೀ ಖದರ್ ಹೇಗಿರಲಿದೆ ನೋಡಲಿಕ್ಕೆ ನವೆಂಬರ್ ಇಪ್ಪತ್ತನಾಲ್ಕರವರೆಗೆ ಕಾಯಲೇಬೇಕು.

-Ad-

Leave Your Comments