ಅಕ್ಷಯ್ ಗೆ ಹೆಗಲು ಕೊಟ್ಟು ನಿಂತ ಬಾಲಿವುಡ್

 

“ದೇಶವನ್ನೇ ಬೆಚ್ಚಿ ಬೀಳಿಸಿದ ಆ ಮೂರೂ ಬುಲೆಟ್ ಶೂಟ್”  ಎಂಬ ಕುತೂಹಲಕರ ಸಾಲಿನೊಂದಿಗೆ ಹೊರಬರುತ್ತಿರುವ, ಅಕ್ಷಯ್ ಕುಮಾರ್ ಹಾಗು ಇಲಿಯಾನ ಅಭಿನಯದ ‘ರುಸ್ತುಂ’ ಚಿತ್ರ ಆಗಸ್ಟ್ 12 ರಂದು ಪ್ರಪಂಚದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಬಾರಿಯ ವಿಶೇಷವೆಂದರೆ ಹಾಲಿವುಡ್ ನ ಘಟಾನುಘಟಿಗಳು ರುಸ್ತುಂ ಚಿತ್ರದ ಪ್ರಚಾರ ಕಾರ್ಯದಲ್ಲಿ ಅಕ್ಷಯ್ ಜೊತೆಯಾಗುತ್ತಿದ್ದಾರೆ.

 

 

ಅಕ್ಷಯ್ ಕುಮಾರ್ ಕಳುಹಿಸಿ ಕೊಟ್ಟಿದ್ದ ನೇವಿ ಆಫೀಸರ್ ಡ್ರೆಸ್ಸಿನಲ್ಲೇ ರಣವೀರ್ ಸಿಂಗ್ ರುಸ್ತುಂ ಚಿತ್ರ ಸೂಪರ್ ಹಿಟ್ ಹಾಡಿಗೆ ಅಭಿನಯ ಮಾಡಿ ಹೊಸ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಆ ವಿಡಿಯೋ ಕಂಡು ಅಕ್ಷಯ್ ಹಿರೋಯಿನ್ ಇಲಿಯಾನ ಹಾಗು ಇಷಾ ಗುಪ್ತಾಗೂ ತೋರಿಸುತ್ತಾ ಖುಷಿ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ ತಾನು ಬಾಲ್ಯದಲ್ಲಿ ಇದ್ದಾಗ ಅಕ್ಷಯ್ ಜೊತೆಗೆ ತೆಗೆಸಿಕೊಂಡಿದ್ದ ಅಪರೂಪದ ಫೋಟೋ ಒಂದನ್ನು ಹಾಕಿ ಅಕ್ಷಯ್ ಅವರ ಚಿತ್ರಕ್ಕೆ ಪ್ರಚಾರ ಕೊಟ್ಟಿದ್ದಾರೆ.

ರು೧

 

ಮುಂದಿನ ದಿನವೇ ಕರಣ್ ಜೋಹರ್ ಕೂಡಾ ತಾನು ರಣವೀರನ ಹಾಗೆ ಸೂಟ್ ಹಾಕಿಕೊಳ್ಳಲು ಆಗುತ್ತಿಲ್ಲ. ಏಕೆಂದರೆ ಅದು ನನಗೆ ಟೈಟ್ ಆಗುತ್ತದೆ ಎಂದು ಚೇಡಿಸುತ್ತಾ ಅಕ್ಷಯಾನ ರುಸ್ತುಂಗೆ ಶುಭ ಕೋರಿದ್ದಾರೆ.

 

ಇದೆಲ್ಲಕ್ಕಿಂತಾ ಅಚ್ಚರಿ ಮೂಡಿಸಿರುವುದು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್. ನಾನಾ ಕಾರಣಗಳಿಂದ ಇದುವರೆಗೂ ಅಕ್ಷಯ್ ನಿಂದ ದೂರವೇ ಇದ್ದ ಸಲ್ಲು, ಅಚಾನಕ್ಕಾಗಿ ಮೊನ್ನೆ ರುಸ್ತುಂ ಚಿತ್ರಕ್ಕೆ ಶುಭ ಕೋರಿರುವ ವಿಡಿಯೋವನ್ನು ಟ್ವಿಟ್ ಮಾಡಿದ್ದಾರೆ.

 

 

 

 

 

 

 

 

 

ಇದನ್ನು ಕಂಡ ಬಾಲಿವುಡ್ ಅಂತೂ ಬೆರಗಾಗಿದೆ.

-Ad-

Leave Your Comments