ಮಗಳು ನಟಿ ಆಗೋದು ಇಷ್ಟವಿಲ್ಲ- ಸೈಫ್ ಅಸಮಾಧಾನ

ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್ ಬಾಲಿವುಡ್ ಎಂಟ್ರಿಗೆ ಭರದ ಸಿದ್ಧತೆ ನಡೆದಿವೆ. ನಟ ಸುಶಾಂತ್‌ ಸಿಂಗ್‌ ಅವರ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಾರಾ ಅಲಿಖಾನ್‌ ತಮ್ಮ ಸಿನಿಮಾ ಕರಿಯರ್‌ ಆರಂಭಿಸುತ್ತಿದ್ದಾರೆ. ಈ ಚಿತ್ರಕ್ಕೆ ಕೇದಾರ್‌ನಾಥ್‌ ಎನ್ನುವ ಟೈಟಲ್‌ ಕೂಡ ಫಿಕ್ಸ್‌ ಆಗಿದೆ. ಸಿನಿಮಾ ರಂಗಕ್ಕೆ ಮಗಳು ಪಾದಾರ್ಪಣೆ ಮಾಡುತ್ತಿರುವುದು ಸಾರಾ ಅಲಿಖಾನ್‌ ತಾಯಿ ಅಮೃತಾ ಸಿಂಗ್‌ಗೆ ಖುಷಿ ತಂದಿದೆ. ಆದ್ರೆ ತಂದೆ ಸೈಪ್‌ ಅಲಿಖಾನ್‌ಗೆ ಮಾತ್ರ ಮಗಳು ಚಿತ್ರರಂಗಕ್ಕೆ ಬರುತ್ತಿರುವುದು ಇಷ್ಟವಿಲ್ವಂತೆ.

ಇತ್ತೀಚಿಗೆ ಸುದ್ದಿ ಸಂಸ್ಥೆಯೊಂದಿಗೆ ಈ ವಿಷಯವನ್ನು ಅವರು ಹಂಚಿಕೊಂಡಿದ್ದು, ‘ಅವಳು ನ್ಯೂಯಾರ್ಕ್‌ನಲ್ಲಿ ಸ್ಟಡಿ ಮಾಡಿದ್ದಾಳೆ. ಸ್ಟಡಿ ನಂತ್ರ ಅಲ್ಲಿಯೇ ಇದ್ದು ವರ್ಕ್‌ ಮಾಡುವುದರ ಬದಲು ನಟಿಯಾಗ ಬಯಸುತ್ತಿರುವುದು ಯಾಕೆ?. ಇದೊಂದು ಸ್ಥಿರವಲ್ಲದ ವೃತ್ತಿ. ಅವಳು ಆ್ಯಕ್ಟ್‌ ಮಾಡುವುದನ್ನು ನೋಡಲು ನಂಗೆ ಕಾತುರತೆ ಇಲ್ಲ’ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಸೈಫ್‌.

-Ad-

Leave Your Comments