ಪ್ರಧಾನಿ ಮೋದಿಗೆ ಟಾಂಗ್ ಕೊಟ್ರಾ ಸಲ್ಮಾನ್..?

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಅಸಹಿಷ್ಣತೆ ಕುರಿತಾದ ಚರ್ಚೆ ಸಾಕಷ್ಟು ಎದ್ದಿದ್ದವು. ಬಾಲಿವುಡ್ ನ ಮಿಸ್ಟರ್ ಫರ್ಫೆಕ್ಟ್ ಅಮೀರ್ ಖಾನ್ ನೀಡಿದ್ದ ಸಂದರ್ಶನವೊಂದರಲ್ಲಿ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಎಂಬ ಹೇಳಿಕೆ ವಿವಾದಕ್ಕೆ ತುಪ್ಪ ಸುರಿದಂತೆ ಆಗಿತ್ತು. ಆ ವೇಳೆ ಸಲ್ಮಾನ್ ಖಾನ್, ಶಾರುಖ್, ಅಮಿತಾಬ್ ಸೇರಿದಂತೆ ಘಟಾನುಘಟಿ ನಾಯಕ ನಟರು ಮೌನ ವಹಿಸಿದ್ರು. ಇದೀಗ ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಆಮೂಲಕ ಮೋದಿ ಸರ್ಕಾರದ ವಿರುದ್ಧ ತಮಗಿರುವ ಅಸಮಾಧಾನ ಹೊರ ಹಾಕಿದ್ದಾರೆ.

ಮೊನಚು ಮಾತಿನಿಂದ ಮೋದಿಗೆ ತಿವಿತ..!
ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯಲು ಯತ್ನಿಸಿದ್ರು, ಅಲ್ಪಸಂಖ್ಯಾತರಿಗೆ ಇರುಸು ಮುರುಸು ಉಂಟುಮಾಡಬಹುದಾದ ಕೆಲವೊಂದು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರವೋ..? ಅಥವಾ ಅವರ ಮಾತೃ ಸಂಸ್ಥೆಯಾದ ಆರ್ ಎಸ್ ಎಸ್ ನಿರ್ಧಾರವೋ ಗೊತ್ತಿಲ್ಲ. ಆದರೆ ಮೋದಿ ವಿರುದ್ಧ ಅಲ್ಪಸಂಖ್ಯಾತರು ಉರಿದು ಬೀಳ್ತಿದ್ದಾರೆ. ಇದರ ಅಂಗವಾಗಿಯೇ ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮೋದಿಗೆ ಮಾತಿನಿಂದಲೇ ತಿವಿದಿದ್ದಾರೆ.

ಯುದ್ಧ ಘೋಷಿಸಿದವರನ್ನೇ ಮುಂದೆ ನಿಲ್ಲಿಸಿ..!

ಹೌದು, ತಮ್ಮ ಮುಂದಿನ ಚಿತ್ರ ಟ್ಯೂಬ್ ಲೈಟ್ ಸಿನಿಮಾ ಪ್ರೊಮೋಷನ್ ನಲ್ಲಿ ಮಾತನಾಡಿದ ಅವರು, ‘ಯುದ್ಧ ಅಂದ್ರೆ ಸಾಮಾನ್ಯವಲ್ಲ. ಆ ಕಡೆ ಹಾಗೂ ಈ ಕಡೆಯಿಂದ ಸಾವಿರಾರು ಜನರು‌ ಸಾವನ್ನಪ್ತಾರೆ. ಯುದ್ಧದ ಫಲಿತಾಂಶ ಏನೇ ಆಗಿರಲಿ‌ ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತದೆ. ಯುದ್ಧ ಘೋಷಣೆ ಮಾಡಿವುದು ಸುಲಭ. ಅದರಿಂದ ಆಗುವ ಅನಾಹುತ ಬಹಳ ದೊಡ್ಡದಿದೆ. ಹೀಗಾಗಿ ಯಾರು ಯುದ್ಧ ಘೋಷಣೆ ಮಾಡುತ್ತಾರೋ ಅವರ ಕೈಗೆ ಬಂದೂಕು ಕೊಟ್ಟು ರಣರಂಗದಲ್ಲಿ ಯುದ್ಧಮಾಡುವಂತೆ ಹೇಳಬೇಕು. ಅವರ ಕೈ ಕಾಲುಗಳು ನಡುಗುತ್ತವೆ, ಭಯ ಅನ್ನೋದು ಹೇಗಿರುತ್ತೆ. ಯುದ್ಧಕ್ಕಿಂತ ಮಾತುಕತೆಯೇ ಒಳ್ಳೆಯದು ಅನ್ನೋ ಮಹತ್ವ ತಿಳಿಯುತ್ತದೆ. ಜೊತೆಗೆ ಯುದ್ಧ ಒಂದೇ ದಿನದಲ್ಲಿ ಮುಗಿದು ಹೋಗುತ್ತದೆ’ ಎಂದಿದ್ದಾರೆ.

ಪಾಕ್ ಮೇಲೆ ಯುದ್ಧ ನಡೆಯುವ ಸಾಧ್ಯತೆ..? ಮೋದಿ ಸರ್ಕಾರಕ್ಕೆ ಸಲ್ಲು ಮಾತಿನೇಟು..!?

ಜಮ್ಮುಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧ ಯಾವಾಗಲೂ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಮಾಡಲಿದೆ ಅನ್ನೋ ಮಾತುಗಳು ಮೋದಿ ಸರ್ಕಾರದಲ್ಲಿ ಕೇಳಿಬರುತ್ತಿದೆ. ಟ್ಯೂಬ್ ಲೈಟ್ ಸಿನಿಮಾ ಪ್ರಚಾರದ ವೇಳೆ ಯುದ್ಧ ಪ್ರಚೋದನೆ ಮಾಡುವವ ವಿರುದ್ದ ಬಹಳ ಕಠಿಣವಾಗಿ ಮಾತನಾಡಿದ್ದಾರೆ. ಮಾನವೀಯ ದೃಷ್ಟಿಯಿಂದ ನೋಡಿದಾಗ ಈ ಮಾತು ಸತ್ಯ ಎನಿಸಿದರೂ ದೇಶ, ದೇಶದ ಭದ್ರತೆ ವಿಚಾರ ಬಂದಾಗ ಈ ಮಾತು ಬೆಲೆ ಕಳೆದುಕೊಳ್ಳಲಿದೆ ಎನಿಸುತ್ತದೆ. ಟ್ಯೂಬ್ ಲೈಟ್ ಸಿನಿಮಾದಲ್ಲೂ ಇದೇ ಕಥೆ ಇದೆ ಅಂತ ಬಾಲಿವುಡ್ ಬ್ಯಾಡ್ ಬಾಯ್ ಸಲ್ಲುಮಿಯಾ ಹೇಳಿಕೊಂಡಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಇನ್ನು ಅದ್ಯಾವ ವಿವಾದ ಸೃಷ್ಠಿಯಾಗುತ್ತದೊ ನೋಡಬೇಕು.

ಜ್ಯೋತಿ ಎಂ ಗೌಡ

-Ad-

Leave Your Comments