ಕೊನೆಗೂ ಕಾಲೇಜು ಕುಮಾರನ ಕೈ ಹಿಡಿದ ನಟಿ ಸಂಯುಕ್ತ ಹೆಗಡೆ

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಕ್ಯೂಟ್ ಕಿರಿಕ್ ಇಂದ ಸುದ್ದಿಯಾಗಿದ್ದ ನಟಿ ಸಂಯುಕ್ತ ಹೆಗಡೆ ಕೊನೆಗೂ ಕಾಲೇಜ್‌ ಕುಮಾರನಿಗೆ ಒಕೆ ಅಂದಿದ್ದಾರೆ. ಕಾಲೇಜ್ ಕುಮಾರನಿಗೆ ಕಿರಿಕ್ ಕುಮಾರಿ ಇನ್ನೇನು ಕೈಕೊಟ್ಟಳು ಅನ್ನೋ ಮಾತುಗಳು ಕೇಳಿ ಬಂದಿದ್ವು. ಆದ್ರೆ ಲೇಟಾದ್ರು ಲೇಟೆಸ್ಟ್ ಆಗಿ ಕಾಲೇಜು ಕುಮಾರನ ಕೈ ಹಿಡಿದು ಬುದ್ಧಿವಂತಿಕೆ ಪ್ರದರ್ಶನ ಮಾಡಿದ್ದಾರೆ ನಟಿ ಸಂಯುಕ್ತ ಹೆಗಡೆ.

‘ಕಿರಿಕ್’ ಕುಮಾರಿ ವಿರುದ್ಧ ಚೇಂಬರ್ ಗೆ ದೂರು..!

ನಿರ್ದೇಶಕ ಸಂತು ಹೊಸ ಸಿನಿಮಾ ಮಾಡುತ್ತಿದ್ದು ಅದರ ಹೆಸರು ಕಾಲೇಜ್‌ಕುಮಾರ. ಕೆಲವೇ ದಿನಗಳ ಹಿಂದೆ ಕಿಚ್ಚ ಸುದೀಪ್ ಇದರ ಮುಹೂರ್ತಕ್ಕೆ ಬಂದು ಶುಭ ಕೋರಿದ್ದರು. ಮಂಗಳವಾರದಿಂದ ಶೂಟಿಂಗ್ ಆರಂಭವಾಗಬೇಕಿತ್ತು. ಆದ್ರೆ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದ ಸಂಯುಕ್ತ ಹೆಗಡೆ ಕಾಲೇಜುಕುಮಾರ ಚಿತ್ರದಲ್ಲಿ ನಟಿಸಲ್ಲ ತಮಿಳಿನಲ್ಲಿ ನಟಿಸಲು ಹೊರಟಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು.. ಹೀಗಾಗಿ ನಿರ್ಮಾಪಕರು ಸಂಯುಕ್ತ ಹೆಗಡೆ ವಿರುದ್ಧ ಚೇಂಬರ್ ಗೆ ದೂರು ನೀಡಲು ಮುಂದಾಗಿದ್ರು..

ಸಂಯುಕ್ತ ನಿರ್ಧಾರದ ಹಿಂದೆ ಪ್ರಭುದೇವ..!

ಪ್ರಭುದೇವ ಹಿಂದಿ ಹಾಗು ತಮಿಳಿನಲ್ಲಿ ಖ್ಯಾತ ನಿರ್ದೇಶಕನಾಗಿದ್ದು, ತಮಿಳು ಸಿನಿಮಾದಲ್ಲಿ ಸಂಯುಕ್ತ ಹೆಗಡೆಗೆ ಚಾನ್ಸ್ ನೀಡಿದ್ರಂತೆ. ಸಿಕ್ಕಿದ್ದೇ ಚಾನ್ಸ್ ಅಂತಾ ಕನ್ನಡ ಚಿತ್ರಕ್ಕೆ ಕೈಕೊಟ್ಟು ತಮಿಳಿನತ್ತ ಹೊರಡಲು ಸೂಟ್ ಕೇಸ್ ರೆಡಿ ಮಾಡಿದ್ರು. ಡೇಟ್ಸ್ ಹೊಂದಾಣಿಕೆ ಆಗ್ತಿಲ್ಲ ಅಂತ ಬಸ್ ಹತ್ತಲು ರೆಡಿಯಾಗಿದ್ದ ನಟಿ ವಿರುದ್ದ ಚೇಂಬರ್ ಮೆಟ್ಟಿಲೇರಲು ಸಜ್ಜಾದ ವಿಚಾರ ಗೊತ್ತಾಗ್ತಿದ್ದ ಹಾಗೆ ಯೂ ಟರ್ನ್ ಹೊಡೆದಿದ್ದಾರೆ. ಆಗಿದ್ದು ಆಯ್ತು ನಾನು ಕಾಲೇಜು ಕುಮಾರನ ಜೊತೆಯೇ ಹೋಗುತ್ತೇನೆ ಅಂದಿದ್ದಾರೆ ನಟಿಮಣಿ

-Ad-

Leave Your Comments