ಕನ್ನಡಕ್ಕೆ ಕೈ ಕೊಟ್ಟು ತಮಿಳಿಗೆ ಹಾರಲು ಹೊರಟಿರೋದು ನ್ಯಾಯಾನಾ ಸಂಯುಕ್ತ ಹೆಗಡೆ?

ಕಿರಿಕ್ ಪಾರ್ಟಿ ಕಾಲೇಜು ದಿನಗಳ ಕಲರ್ ಕಲರ್ ಲೈಫ್ ನ ಸಕ್ಕತ್ತಾಗಿ  ತೋರಿಸಿ ಯಶಸ್ಸು ಕಂಡ ಚಿತ್ರ.  ಕಿರಿಕ್ ಪಾರ್ಟಿ ಹಲವು ಪ್ರತಿಭೆಗಳು ಹೊರಬರೋದಿಕ್ಕೆ ವೇದಿಕೆಯೂ ಆಯಿತು.  ರಕ್ಷಿತ್ ಶೆಟ್ಟಿ ಗೆ ಸೂಪರ್  ಮೈಲೇಜ್ ತಂದು ಕೊಡ್ತು.

ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ ಅನ್ನೋ ಇಬ್ಬರು ಹೊಸ ನಾಯಕಿಯರ ಪರಿಚಯ ಮಾಡಿದ್ರು ನಿರ್ದೇಶಕ ರಿಷಬ್ ಶೆಟ್ಟಿ. ಇಬ್ಬರೂ ಸಹಜ ಸುಂದರಿಯರು. ಕನ್ನಡ ಪ್ರೇಕ್ಷಕನ 90% ಕನಸನ್ನ ಇವ್ರಿಬ್ರೆ ಆಕ್ರಮಿಸಿಕೊಂಡಿಬಿಟ್ರು !! ಇಬ್ಬರಿಗೂ ಬಾರೀ  ಬೇಡಿಕೆ ಶುರುವಾಯಿತು.  ಅದ್ರಲ್ಲಿ ಸಂಯುಕ್ತ ಹೆಗ್ಡೆ ಕಾಲೇಜ್ ಕುಮಾರ್, ವಾಸು ಅನ್ನೋ ಎರಡು ಚಿತ್ರಕ್ಕೆ ಸೈನ್ ಮಾಡಿ ಡೇಟ್ಸ್ ಕೊಟ್ಟಿದ್ರು. ಈ ಚಿತ್ರಗಳ ಪ್ರಚಾರ ಜೋರಾಗಿಯೇ ಮಾಡಿದ್ರು. ಇನ್ನೇನು ಶೂಟಿಂಗ್ ಶುರುವಾಗೋದಷ್ಟೇ ಬಾಕಿ ಇತ್ತು.

ಇದರ  ನಡುವೆ ಸಂಯುಕ್ತ ಹೆಗ್ಡೆ ದೇಶಾದ್ಯಂತ ಹೆಸರು ಮಾಡಿರೋ  MTVಯ ರೋಡಿಸ್ ರಿಯಾಲಿಟಿ ಶೋಗೂ ಹೋಗಿ  ಬಂದ್ರು. ಈ ಷೋನಿಂದ ಸಂಯುಕ್ತ ಹೆಗ್ಡೆ ಬೇರೆ  ಚಿತ್ರರಂಗದವರ ಕಣ್ಣಿಗೂ  ಬಿದ್ರು.  ಅದ್ರಲ್ಲೂ ಕನ್ನಡಿಗ ಪ್ರಭುದೇವ್ ತಮ್ಮ ಚಿತ್ರಕ್ಕೆ ಫಿಕ್ಸ್ ಮಾಡಿ, ಆಫರ್ ಕೊಟ್ಟೇಬಿಟ್ರು. ಪ್ರಭುದೇವ್  ಹೇಳಿ- ಕೇಳಿ ಬಹು ದೊಡ್ಡ ನಟ, ನಿರ್ದೇಶಕ. ಅಂಥವರು ಅವಕಾಶ ಕೊಟ್ರೆ ಕೇಳ್ಬೇಕಾ?  ಸಂಯುಕ್ತಾಗೆ  ಖುಷಿಯೋ ಖುಷಿ. ಕನ್ನಡ ನಿರ್ದೇಶಕನಿಗೆ ಕೊಟ್ಟ ಮಾತು ಪಕ್ಕಕ್ಕಿಟ್ಟು “ಯಸ್” ಅಂದೇ ಬಿಟ್ಲು. ಸರಿ ಸಂತೋಷವೇ ಕನ್ನಡದ ಪ್ರತಿಭೆ ಪರಭಾಷೆಲಿ ಮಿಂಚೋದು  ನಮಗೂ ಹೆಮ್ಮೆ. ಆದ್ರೆ…

ಶೂಟಿಂಗ್ ಗೆ ಬರಲ್ಲ ಅಂತ ಶಾಕ್ ಕೊಟ್ಲು

ತಮಿಳು ಚಿತ್ರದ ಅಂಥಾ  ದೊಡ್ಡ ಆಫರ್ ಮುಂದೆ  ತನಗೆ ವೇದಿಕೆ ಆಗಿದ್ದ ಕನ್ನಡ ಚಿತ್ರರಂಗ ನಗಣ್ಯ ಆಯ್ತು. ತಾನು ಒಪ್ಪಿಕೊಂಡು ಅಗ್ರಿಮೆಂಟ್ ಮಾಡಿಕೊಂಡ ಕನ್ನಡದ ಚಿತ್ರಗಳಲ್ಲಿ ನಟಿಸೋದಿಕ್ಕೆ ಆಗಲ್ಲ ಅಂತ ಕ್ಯಾತೆ ತೆಗದಿದ್ದಾಳೆ. ಕಾಲೇಜ್ ಕುಮಾರ್ ಚಿತ್ರದ ಫೋಟೋ ಶೂಟ್ ಮಾಡಿ, ಮುಹೂರ್ತ ಮಾಡಿ, ಶೂಟಿಂಗ್ ಪ್ಲಾನ್ ಎಲ್ಲಾ ರೆಡಿ ಆದ್ಮೇಲೆ  ಇವಾಗ ಶೂಟಿಂಗ್ ಗೆ ಬರಲ್ಲ ಅಂತ ಕಿರಿಕ್ ತೆಗೆದಿದ್ದಾಳೆ.

ತಾನು ಚಿತ್ರರಂಗಕ್ಕೆ ಬರಲು ಅವಕಾಶ ತೆರೆದ  ಕನ್ನಡ ಈಗ ಬೇಡವಾಗಿದೆ. ಹತ್ತಿದ ಎಣಿಯನ್ನ ಒದಿಯೋದು ನೈತಿಕತೆ ಅಲ್ಲ ಅಂತ ಬೇಗ ಗೊತ್ತು ಮಾಡಿಕೊಂಡ್ರೆ ಒಳ್ಳೆಯದು . ಹೀಗೇ ಹಲವು ನಟಿಮಣಿಯರು ಪರಭಾಷೆಗೆ ಹೋಗಿ ವರ್ಕ್ ಔಟ್ ಆಗದೆ ಒಂದೆರೆಡು ಚಿತ್ರ ಮಾಡಿ ಹಳೇ ಗಂಡನ ಪಾದ ಹುಡುಕ್ಕೊಂಡು ವಾಪಸ್  ಕನ್ನಡಕ್ಕೆ ಬಂದು ಅವಕಾಶಕ್ಕಾಗಿ ಎದುರು ನೋಡ್ತಾ ಇದ್ದಾರೆ.

ಈಗ  ಕನ್ನಡ ಚಿತ್ರಗಳ ನಿರ್ಮಾಪಕರು  ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘಕ್ಕೆ ದೂರು ಕೊಟ್ಟಿದ್ದಾರೆ. ಅಗ್ರಿಮೆಂಟ್ ಪ್ರಕಾರ ನಮ್ ಚಿತ್ರ  ಮುಗಿಸಿ ಕೊಡಲೇಬೇಕು ಅನ್ನೋದು ಅವರ ಆಗ್ರಹ. ಅವರ ಬೇಡಿಕೆ ಸಮಂಜಸ ಕೂಡ.

ಮುಂದೆ ವಾಣಿಜ್ಯ ಮಂಡಳಿ ಯಾವ ತೀರ್ಮಾನ ಕೊಡತ್ತೆ ಅನ್ನೋದು ಕಾದು ನೋಡಬೇಕು…

-Ad-

Leave Your Comments