ನಾನು ಅವಳಲ್ಲ ಅವನ ರಗಡ್ ಲುಕ್ !

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಹೊಸ ವೇಶದಲ್ಲಿ ಕಾಣಿಸಿಕೊಂಡಿದ್ದಾರೆ. ನಾನು ಅವನಲ್ಲ ಅವನು ಅಂತ ಸ್ಯಾಂಡಲ್ ವುಡ್ ನಲ್ಲಿ ಹೆಜ್ಜೆ ಗುರುತು ಸೃಷ್ಟಿಸಿದ ವಿಜಯ್ ಸೌಮ್ಯ ಸ್ವಭಾವದ ವ್ಯಕ್ತಿ. ಒಂದು ಸಣ್ಣ ಮಗು ಮಾತನಾಡಿಸಿದ್ರು ಮುದ್ದು ಮುದ್ದಾಗಿ ಮಾತನಾಡುವ ಮುದ್ದು ಮನಸ್ಸಿನ ವ್ಯಕ್ತಿತ್ವ. ಅವರೇನಿದ್ರು ಅಂಥಹ ಪಾತ್ರಗಳಿಗೆ ಸೀಮಿತ ಅನ್ನೋ ಮಾತು ಗಾಂಧಿನಗರದಲ್ಲಿ ಸುತ್ತಾಡುತ್ತಿತ್ತು.
ಸಂಚಾರಿ ರಗಡ್ ಲುಕ್ ನೋಡಿ ಫುಲ್ ಶಾಕ್!
ಸಂಚಾರಿ ವಿಜಯ್ ಇಲ್ಲೀವರೆಗಿನ ಪಾತ್ರಗಳನ್ನು ನೋಡಿದ ಅಭಿಮಾನಿಗಳಿಗೆ ಹೊಸ ಲುಕ್ ಮಜಾ ಕೊಡ್ತಿದೆ. ಹೊಸ ಲುಕ್ ನಲ್ಲಿ ಸಂಚಾರಿ ವಿಜಯ್ ಲುಕ್ ನೋಡಿ ಈ ರೀತಿಯಲ್ಲೂ ವಿಜಯ್ ಮಸ್ತ್ ಕಾಣಕ್ಕತ್ತಾರೋ ಮಾರಾಯ ಅಂತ ಹುಬ್ಳಿ ಸರ್ಕಲ್ ನಲ್ಲೂ ಮಾತನಾಡ್ತಿದ್ದಾರೆ ಅಂದ್ರೆ ನೀವು ನಂಬಲೇ ಬೇಕು..
6ನೇ ಮೈಲಿಗೆ ಬಂದಿಳಿದ ಸಂಚಾರಿ ಪ್ರಯಾಣ
ಬೆಂಗಳೂರಿನ ತುಮಕೂರು  ರಸ್ತೆಯಲ್ಲಿ 8ನೇ ಮೈಲಿ ಬಸ್ ನಿಲ್ದಾಣ ಇದೆ. ಇಲ್ಲಿಂದಲೇ ಬೆಂಗಳೂರು ಆರಂಭ ಆಗುತ್ತದೆ. ಆದ್ರೆ ಸಂಚಾರಿ ವಿಜಯ್ ಅದನ್ನು ಬಿಟ್ಟು ಇನ್ನೂ ಬೇಗನೇ ಇಳಿದುಕೊಂಡು ಜನರ ಮುಂದೆ ಬಂದಿದ್ದಾರೆ. ಅಂದ ಹಾಗೆ ಸೀನಿ ನಿರ್ದೇಶನ 6 ನೇ ಮೈಲಿ ಅನ್ನೋ ಸಿನಿಮಾದಲ್ಲಿ ರಗಡ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಟೀಸರ್ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಅಂತ ತಿಳಿಸಿದ್ದಾರೆ. ಸಾಫ್ಟ್ ಕ್ಯಾರೆಕ್ಟರ್ ವಿಜಯ್ ರಗಡ್ ಲುಕ್ ಟೀಸರ್ ನೋಡಲು ಕಾತುರ ಹೆಚ್ಚಾಗ್ತಿದೆ. ನೋಡಲು ಡಿಟೆಕ್ಟಿವ್ ಏಜೆಂಟ್ ರೀತಿ ಕಾಣ್ತಿದ್ದು ಪಾತ್ರದ ಬಗ್ಗೆ ಇನ್ನಷ್ಟೇ ರಿವಿಲ್ ಆಗಬೇಕಿದೆ.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments