ಮಹದಾಯಿ ಹೋರಾಟಕ್ಕೆ ಚಿತ್ರರಂಗದ ಬೆಂಬಲ. ಉತ್ತರ ಕರ್ನಾಟಕದಲ್ಲಿ ಚಿತ್ರ ಪ್ರದರ್ಶನ ಸ್ಥಗಿತ .

ನಾಳೆ ಉತ್ತರ ಕರ್ನಾಟಕ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆವರೆಗೆ ಚಿತ್ರ ಪ್ರದರ್ಶನ ಸ್ಥಗಿತವಾಗಲಿದೆ . ಇದೇ ವಿಚಾರವಾಗಿ ಮಾತನಾಡಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್,

ಯಾವುದೇ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡುತ್ತಾ ಬಂದಿದೆ ಮಹದಾಯಿ ವಿಚಾರದಲ್ಲೂ ಕೂಡಾ ನಾವು ಇಡೀ ಚಿತ್ಯೋದ್ಯಮ ಬಂದ್ ಮಾಡಿ ಸಾಥ್ ನೀಡಿದ್ದೆವು. ನಾನು ಎಲ್ಲಾ ಕಲಾವಿದರ ಬಳಿ ಮಾತನಾಡಿದೆ ಆ ಸಂದರ್ಭದಲ್ಲಿ ಎಲ್ಲಾ ಕಲಾವಿದರು ನಾವು ಹೋರಾಟದಲ್ಲಿ ಭಾಗಿಯಾಗಲಿದ್ದೇವೆ ಎಂದು ತಿಳಿಸಿದ್ದಾರೆ.
ಮಹದಾಯಿ ಹೋರಾಟಗಾರರನ್ನ ಭೇಟಿ ಮಾಡಿದ ನಟ ಚೇತನ್ ರಾಜಕಾರಣಿಗಳ ವಿರುದ್ಧ ಕಿಡಿ ಕಾರಿದ್ದಾರೆ.
ಯಡಿಯೂರಪ್ಪ ವಚನ ಭ್ರಷ್ಟರು ಎಂದ ಚೇತನ್,ಮೋದಿ ಬುಲೆಟ್ ಟ್ರೈನ್ ಎನ್ನುತ್ತಾರೆ ಆದರೆ ಮಹದಾಯಿ ವಿಚಾರದಲ್ಲಿ  ಮಾತ್ರ ಮಲತಾಯಿ ಧೋರಣೆ ಇದೆ ಎಂದರು .
ವೈಯಕ್ತಿಕ ಕೆಲಸದ ನಿಮಿತ್ತ ಹೈದರಾಬಾದ್ ನಲ್ಲಿರುವ ಶಿವಣ್ಣನಾಳೆ 12 ಗಂಟೆಗೆ ಮಹದಾಯಿ ಹೋರಾಟಗಾರರನ್ನು ಭೇಟಿಯಾಗಲಿದ್ದಾರೆ.
 ವಾಣಿಜ್ಯ ಮಂಡಳಿಯ ಸಭೆಯ ಬಳಿಕ ಮಲ್ಲೇಶ್ವರಂನ ಪ್ರತಿಭಟನಾ ಸ್ಥಳಕೆ ತೆರಳಿದ ಸೂರಪ್ಪ ಬಾಬು  (ನಿರ್ಮಾಪಕ)ಸಾಕಷ್ಟು ಕಲಾವಿದರು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ . ಮಹದಾಯಿ ಹೋರಾಟಕ್ಕೆ ಯಾವಾಗ್ಲೂ ಕಲಾವಿದರ ಬೆಂಬಲ ಇರಲಿದೆ .ಚಿತ್ರರಂಗದ ಎಲ್ಲಾ ಅಂಗ ಸಂಸ್ಥೆಗಳು  ಭಾಗಿಯಾಗಲಿದೆ.ಮಹದಾಯಿ ಹೋರಾಟಕ್ಕೆ ನಿರ್ಮಾಪಕರ ಸಂಘದಿಂದ ಸದಾ ಬೆಂಬಲವಿರುತ್ತೆ ಎಂದಿದ್ದಾರೆ .
 ಲ್ಲಿ ಭಾಗಿಯಾಗಲಿದ್ದೇವೆ ಎಂದು ತಿಳಿಸಿದ್ದಾರೆ

ಒಟ್ಟಾರೆಯಾಗಿ ಸ್ಯಾಂಡಲ್ವುಡ್ ನ ಅನೇಕ ಮಂದಿ ಉತ್ತರ ಕರ್ನಾಟಕ ಜನರ ಪರವಾಗಿ ದನಿಯೆತ್ತಿದ್ದಾರೆ.

-Ad-

Leave Your Comments